ETV Bharat / bharat

ಪ್ರತಿ ಜಿಲ್ಲೆಗಳಿಗೂ ತಲುಪುತ್ತಿಲ್ಲ ಆನ್​ಲೈನ್​ ಶಿಕ್ಷಣ; ಪೋಷಕರಿಗೆ ಮಕ್ಕಳ ಚಿಂತೆ, ಮಕ್ಕಳಿಗೆ ಭವಿಷ್ಯದ್ದೇ ಚಿಂತೆ - ಜಬುವಾ ಆನ್​ಲೈನ್​ ಶಿಕ್ಷಣ

ಜಬುವಾ ಜಿಲ್ಲೆಯಲ್ಲಿ 2,538 ಸರ್ಕಾರಿ ಶಾಲೆಗಳಿದ್ದು, ಅಲ್ಲಿ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 326 ಖಾಸಗಿ ಶಾಲೆಗಳಲ್ಲಿ ಸುಮಾರು 63,551 ಮಕ್ಕಳು ಕಲಿಯುತ್ತಿದ್ದಾರೆ. ಕೊರೊನಾ ಆರ್ಭಟದ ಈ ಸಮಯದಲ್ಲಿ ಇವರೆಲ್ಲರ ಶಿಕ್ಷಣಕ್ಕೆ ಕುತ್ತು ಬಂದಿದೆ. ಈ ಬಗ್ಗೆ ಶಿಕ್ಷಣಾಧಿಕಾರಿಗಳು ಅಥವಾ ಸ್ಥಳೀಯ ಅಧಿಕಾರಿಗಳನ್ನು ಕೇಳಿದ್ರೆ, ಮಕ್ಕಳಿಗೆ ಶಿಕ್ಷಣ ತಲುಪುತ್ತಿದೆ. ಪಠ್ಯ ಪುಸ್ತಕಗಳನ್ನು ಕೂಡಾ ವಿತರಿಸಲಾಗುತ್ತಿದೆ ಎಂದು ಸಮರ್ಥನೆ ನೀಡುತ್ತಾರೆ.

Online class
ಆನ್​ಲೈನ್​ ಶಿಕ್ಷಣ
author img

By

Published : Aug 11, 2020, 7:50 PM IST

ಜಬುವಾ (ಮಧ್ಯಪ್ರದೇಶ): ರಾಜಧಾನಿ ಭೋಪಾಲ್​ನಿಂದ 7 ಗಂಟೆಗಳ ಪ್ರಯಾಣ ಮಾಡಿದ್ರೆ ಜಬುವಾ ಜಿಲ್ಲೆ ಸಿಗುತ್ತದೆ. ಬುಡಕಟ್ಟು ಸಮುದಾಯದ ಜನರೇ ಹೆಚ್ಚಿರುವ ಈ ಜಿಲ್ಲೆ, ಅಭಿವೃದ್ಧಿ ವಿಚಾರದಲ್ಲಿ ದೂರವೇ ಉಳಿದಿದೆ. ಸರ್ಕಾರದ ಸೇವೆಗಳು ಇಲ್ಲಿಗೆ ತಲುಪುವುದೇ ಆಮೆ ನಡಿಗೆಯಲ್ಲಿ. ಹೀಗಿರುವಾಗ ಸರ್ಕಾರದ ಎಲ್ಲಾ ಯೋಜನೆಗಳು ಇಲ್ಲಿಗೆ ತಲುಪುತ್ತೆ ಅನ್ನೋದನ್ನು ನಿರೀಕ್ಷೆ ಮಾಡುವುದು ಕಷ್ಟದ ಮಾತು.

ಜಬುವಾ ಜಿಲ್ಲೆಯ ಸಾಕ್ಷರತೆ ಪ್ರಮಾಣ ಕೇವಲ ಶೇ 43.3ರಷ್ಟಿದೆ. ಶಿಕ್ಷಣ ಕ್ಷೇತ್ರದಲ್ಲಿ ಈ ಜಿಲ್ಲೆ ಎಷ್ಟು ಹಿಂದುಳಿದಿದೆ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ. ಸದ್ಯ ಕೊರೊನಾ ಲಾಕ್​ಡೌನ್​ ಬಳಿಕ ಶಾಲಾ-ಕಾಲೇಜುಗಳ ಬಾಗಿಲು ಮುಚ್ಚಿದ್ದು, ಸರ್ಕಾರ ಆನ್​ಲೈನ್​ ಶಿಕ್ಷಣವನ್ನು ಜಾರಿಗೆ ತಂದಿದೆ. ಆದ್ರೆ ಎರಡು ಹೊತ್ತಿನ ಊಟಕ್ಕೂ ಒದ್ದಾಡುತ್ತಿರುವ ಇಲ್ಲಿನ ಜನರು ತಮ್ಮ ಮಕ್ಕಳ ಆನ್​ಲೈನ್​ ಶಿಕ್ಷಣಕ್ಕೆ ಬೇಕಾದ ಸಲಕರಣೆಗಳನ್ನು ಖರೀದಿಸಲು ಒದ್ದಾಡುತ್ತಿದ್ದಾರೆ.

ಇಲ್ಲಿನ ಮಕ್ಕಳು ತಮ್ಮ ಭವಿಷ್ಯದ ಬಗ್ಗೆ ಅಪಾರ ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಆದರೆ ಆನ್​ಲೈನ್​ ತರಗತಿಗಳಿಗೆ ಬೇಕಾದ ಸಂಪನ್ಮೂಲಗಳೇ ಇಲ್ಲದೇ ಇರುವುದರಿಂದ ತಮ್ಮ ಕನಸುಗಳ ಬೆನ್ನೇರುವಲ್ಲಿ ಅಸಮರ್ಥರಾಗಿದ್ದಾರೆ. ನಗರ ಪ್ರದೇಶಗಳಿಗೆ ಶರವೇಗದಲ್ಲಿ ಒಗ್ಗಿಕೊಳ್ಳುತ್ತಿರುವ ಆನ್‌ಲೈನ್ ತರಗತಿಗಳು ಗ್ರಾಮೀಣ ಪ್ರದೇಶ ಬಂದಾಗ ಆಮೆ ನಡಿಗೆಯಲ್ಲಿ ಸಾಗುತ್ತದೆ. ಜಬುವಾ ಜಿಲ್ಲೆಯಲ್ಲೂ ಸದ್ಯ ಎದುರಾಗಿರುವ ಪರಿಸ್ಥಿತಿ ಇದೇ. ನಮ್ಮಲ್ಲಿ ಸ್ಮಾರ್ಟ್‌ಫೋನ್‌ ಅಥವಾ ಲ್ಯಾಪ್‌ಟಾಪ್‌ಗಳು ಇಲ್ಲ ಎಂದು ಇಲ್ಲಿನ ಮಕ್ಕಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ, ಆನ್​ಲೈನ್​ ಶಿಕ್ಷಣಕ್ಕೆ ಬೇಕಾದ ಮೊಬೈಲ್​ ಸೌಲಭ್ಯವಿದ್ದರೂ, ಇಂಟರ್ನೆಟ್ ವ್ಯವಸ್ಥೆ ಇಲ್ಲದೆ ಇಲ್ಲಿನ ಮಕ್ಕಳ ಕಲಿಕೆಗೆ ಭಾರಿ ಪೆಟ್ಟು ಬಿದ್ದಿದೆ.

ಜಬುವಾ ಜಿಲ್ಲೆಯ ಮಕ್ಕಳಿಗೆ ಭವಿಷ್ಯದ ಚಿಂತೆ

ಕಳೆದ ಜುಲೈ 20 ರಿಂದ ದೂರದರ್ಶನದಲ್ಲಿ ಆನ್​ಲೈನ್​ ತರಗತಿಗಳನ್ನು ಆರಂಭಿಸಿ, ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಪ್ರಯತ್ನಿಸಿತು. ಇದು ಸರ್ಕಾರದ ‘ಘರ್ ಹಮಾರಾ ವಿದ್ಯಾಲಯ್​’ ಕಾರ್ಯಕ್ರಮದ ಅಂಗವಾಗಿ ಪ್ರಸಾರ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 15 ಸಾವಿರ ಮಕ್ಕಳಿದ್ದು, ಅವರ ಮನೆಯಲ್ಲಿ ಫೋನ್ ಅಥವಾ ಟಿವಿ ವ್ಯವಸ್ಥೆಯಿಲ್ಲ. ಈ ಮಕ್ಕಳಿಗಾಗಿ, ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಆನ್‌ಲೈನ್ ಬೋಧನಾ ವ್ಯವಸ್ಥೆಯನ್ನೇನೋ ಮಾಡಲಾಗಿದೆ. ಆದರೆ ಇದು ಕೂಡ ಪರಿಣಾಮಕಾರಿಯಾಗಿ ಅನುಷ್ಠಾನವಾಗಿಲ್ಲ.

ಜಿಲ್ಲೆಯಲ್ಲಿ 2,538 ಸರ್ಕಾರಿ ಶಾಲೆಗಳಿದ್ದು, ಅಲ್ಲಿ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 326 ಖಾಸಗಿ ಶಾಲೆಗಳಲ್ಲಿ ಸುಮಾರು 63,551 ಮಕ್ಕಳು ಕಲಿಯುತ್ತಿದ್ದಾರೆ. ಕೊರೊನಾ ಆರ್ಭಟದ ಈ ಸಮಯದಲ್ಲಿ ಇವರೆಲ್ಲರ ಶಿಕ್ಷಣಕ್ಕೆ ಕುತ್ತು ಬಂದಿದೆ. ಖಾಸಗಿ ಶಾಲೆಗಳ ಮಕ್ಕಳು ಕೂಡ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಶಿಕ್ಷಣಾಧಿಕಾರಿಗಳು ಅಥವಾ ಸ್ಥಳೀಯ ಅಧಿಕಾರಿಗಳನ್ನು ಕೇಳಿದ್ರೆ, ಮಕ್ಕಳಿಗೆ ಶಿಕ್ಷಣ ತಲುಪುತ್ತಿದೆ. ಪಠ್ಯ ಪುಸ್ತಕಗಳನ್ನು ಕೂಡಾ ವಿತರಿಸಲಾಗುತ್ತಿದೆ ಎಂದು ಸಮರ್ಥನೆ ನೀಡುತ್ತಾರೆ.

ಏನೇ ಇರಲಿ, ಸರ್ಕಾರ ಆನ್​ಲೈನ್​ ಶಿಕ್ಷಣದ ವ್ಯವಸ್ಥೆಯೇನೋ ಮಾಡುತ್ತಿದೆ. ಅದು ಎಲ್ಲರಿಗೂ ತಲುಪುವಂತೆ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.