ಚೆನ್ನೈ: ಕೊರೊನಾ ವೈರಸ್ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಆಸ್ಕರ್ ಪ್ರಶಸ್ತಿ ವಿಜೇತ,ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ದೇಶದ ಜನರಲ್ಲಿ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ದೇಶಾದ್ಯಂತ ಕೋವಿಡ್-19 ವೈರಸ್ ಹೆಚ್ಚಿನ ಮಂದಿಗೆ ಹರಡುವಲ್ಲಿ ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಕೇಂದ್ರದಲ್ಲಿ ಕಳೆದ ತಿಂಗಳು ನಡೆದಿದ್ದ ತಬ್ಲಿಘಿ ಜಮಾತ್ ಸಭೆ ಒಂದು ರೀತಿಯಲ್ಲಿ ಕಾರಣವಾಗಿದ್ದ ಬೆನ್ನಲ್ಲೇ ರೆಹಮಾನ್ ಈ ರೀತಿಯಾಗಿ ಮನವಿ ಮಾಡಿಕೊಂಡಿದ್ದಾರೆ.
-
This message is to thank the doctors, nurses and all the staff working in hospitals and clinics all around India, for their bravery and selflessness... pic.twitter.com/fjBOzKfqjy
— A.R.Rahman (@arrahman) April 1, 2020 " class="align-text-top noRightClick twitterSection" data="
">This message is to thank the doctors, nurses and all the staff working in hospitals and clinics all around India, for their bravery and selflessness... pic.twitter.com/fjBOzKfqjy
— A.R.Rahman (@arrahman) April 1, 2020This message is to thank the doctors, nurses and all the staff working in hospitals and clinics all around India, for their bravery and selflessness... pic.twitter.com/fjBOzKfqjy
— A.R.Rahman (@arrahman) April 1, 2020
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿರುವ ಸೂಚನೆ ತಪ್ಪದೇ ಪಾಲಿಸುವಂತೆ ಮನವಿ ಮಾಡಿಕೊಂಡಿರುವ ಆಸ್ಕರ್ ಪ್ರಶಸ್ತಿ ವಿಜೇತ ರೆಹಮಾನ್, ಐಸೋಲೆಷನ್, ಕ್ವಾರಂಟೈನ್ ಪಾಲಿಸುವಂತೆ ಹೇಳಿದ್ದಾರೆ. ಇದೇ ವೇಳೆ, ಮಹಾಮಾರಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ನರ್ಸ್ ಹಾಗೂ ಎಲ್ಲ ಸಿಬ್ಬಂದಿಗಳ ನಿಸ್ವಾರ್ಥತತೆ ಹಾಗೂ ಧೈರ್ಯಕ್ಕೆ ಅವರು ಧನ್ಯವಾದ ಸಲ್ಲಿಸಿದ್ದಾರೆ.
ದೇವರು ನಿಮ್ಮ ಹೃದಯದಲ್ಲಿದ್ದು, ಸಭೆ - ಸಮಾರಂಭಗಳಲ್ಲಿ ಭಾಗಿಯಾಗಿ ಸೋಂಕು ಹಬ್ಬಿಸುವ ಸಮಯ ಇದಲ್ಲ. ಸರ್ಕಾರ ಮಾತು ಕೇಳಿ ಎಂದಿರುವ ಅವರು, ವೈದ್ಯರು ತಮ್ಮ ಪ್ರಾಣ ಪಣಕ್ಕಿಟ್ಟು ನಮ್ಮ ಆರೋಗ್ಯ ಕಾಪಾಡುತ್ತಿದ್ದಾರೆ ಎಂದಿದ್ದಾರೆ.