ETV Bharat / bharat

ಮಗುವಿನಿಂದ ಹಿರಿಯರ ಪ್ರೀತಿ ಕಸಿದುಕೊಳ್ಳುವುದು ಸರಿಯಲ್ಲ: ಬಾಂಬೆ ಹೈಕೋರ್ಟ್​ ಮಹತ್ವದ ತೀರ್ಪು - ಮಗುವಿವಿಂದ ಹಿರಿಯರ ಪ್ರೀತಿ ಕಸಿದುಕೊಲ್ಳುವುದು ಸರಿಯಲ್ಲ

ಮುಂಬೈ ಮೂಲದ ಮಹಿಳೆವೋರ್ವಳಿಗೆ, ತನ್ನ 10 ವರ್ಷದ ಮಗನನ್ನು ಆಕೆಯ ಮಾಜಿ ಕುಟುಂಬ ಅಂದ್ರೆ ಮಗುವಿಗೆ ಅಜ್ಜಿ-ತಾತನನ್ನು ಭೇಟಿಯಾಗಲು ಅವಕಾಶ ನೀಡುವಂತೆ ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.

Not right to deprive child's access to grandparents: HC
ಮಗುವಿನಿಂದ ಹಿರಿಯರ ಪ್ರೀತಿ ಕಸಿದುಕೊಳ್ಳುವುದು ಸರಿಯಲ್ಲ: ಮುಂಬೈ ಹೈಕೋರ್ಟ್​!
author img

By

Published : Feb 19, 2020, 5:07 PM IST

ಮುಂಬೈ: ಬಾಂಬೆ ಹೈಕೋರ್ಟ್​ ಮಹಿಳೆವೋರ್ವಳಿಗೆ ಆಕೆಯ 10 ವರ್ಷದ ಮಗನನ್ನು ತನ್ನ ಮಾಜಿ ಕುಟುಂಬಕ್ಕೆ ಕರೆದೊಯ್ಯಲು, ಅವರನ್ನು ಭೇಟಿಯಾಗಲು ವಾರಕ್ಕೊಮ್ಮೆ ಅವಕಾಶ ನೀಡುವಂತೆ ತೀರ್ಪು ನೀಡಿದೆ.

ಕುಟುಂಬ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್.ಜೆ. ಕಥವಾಲಾ ಮತ್ತು ಬಿ.ಪಿ. ಕೋಲಬವಾಲಾ ಅವರ ವಿಭಾಗೀಯ ಪೀಠ ತಿರಸ್ಕರಿಸಿತು. ಮಗುವಿಗೆ ತನ್ನ ಅಜ್ಜಿ- ತಾತನನ್ನು ಭೇಟಿಯಾಗುವ ಅವಕಾಶ ಕಸಿದುಕೊಳ್ಳುವುದು ಸರಿಯಲ್ಲ ಎಂದು ಗಮನಿಸಿದ ಬಾಂಬೆ ಹೈಕೋರ್ಟ್ ಸದ್ಯ ಈ ತೀರ್ಪನ್ನು ಪ್ರಕಟಿಸಿದೆ.

ಮಹಿಳೆ ತನ್ನ ಮೊದಲ ಪತಿ ಮರಣದ ನಂತರ ತನ್ನ ಮಾಜಿ ಕುಟುಂಬ ತನ್ನೊಂದಿಗೆ ಸರಿಯಾಗಿ ವರ್ತಿಸಿಲ್ಲವೆಂಬ ಕಾರಣ ನೀಡಿದ್ದಾರೆ. ಆದರೆ ಹೈಕೋರ್ಟ್​ ಇದನ್ನು ತಿರಸ್ಕರಿಸಿದ್ದು, ಮಗು ಇಲ್ಲಿಯವರೆಗೆ ತನ್ನ ಅಜ್ಜಿ-ಅಜ್ಜನನ್ನು ಭೇಟಿಮಾಡಿಲ್ಲವೆಂದರೆ ಇದಕ್ಕೆ ಜವಾಬ್ದಾರರಾರು ಎಂದು ಪ್ರಶ್ನಿಸಿದೆ.

ಮಹಿಳೆಗೆ 2009ರಲ್ಲಿ ಪುತ್ರನೋರ್ವ ಜನಿಸಿದ್ದು, ತಂದೆ ಫೆ.2010ರಲ್ಲಿ ನಿಧನರಾದರು. ಅದಾದ ಬಳಿಕ ಮಹಿಳೆ ತನ್ನ ತವರಿನಲ್ಲಿದ್ದು, ನಂತರ ಮರು ಮದುವೆಯಾಗಿದ್ದಾಳೆ. ಆದ್ರೆ ಮಹಿಳೆಯ ಮಾಜಿ ಕುಟುಂಬ ತಮ್ಮ ಮೊಮ್ಮಗನನ್ನು ಭೇಟಿ ಮಾಡಲು ಕೋರಿ ಕೌಟುಂಬಿಕ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಪರಿಣಾಮ 2014 ರಲ್ಲಿ, ಮಾಜಿ ಕುಟುಂಬ ಮುಂಬೈಗೆ ಭೇಟಿ ನೀಡಿದಾಗಲೆಲ್ಲಾ ಮೊಮ್ಮಗನನ್ನು ಭೇಟಿಯಾಗಲು ಅವಕಾಶ ನೀಡಿತ್ತು.

ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಮಹಿಳೆ ಪಾಲಿಸಿಲ್ಲ. ಹಾಗಾಗಿ, ಆಕೆಯ ಮಾಜಿ ಕುಟುಂಬ 2014ರಲ್ಲಿ ಕೋರ್ಟ್​ ಆದೇಶವನ್ನು ಕಾರ್ಯಗತಗೊಳಿಸಲು ಕೋರಿ ಕುಟುಂಬ ನ್ಯಾಯಾಲಯವನ್ನು ಮತ್ತೆ ಸಂಪರ್ಕಿಸಿದ್ದಾರೆ.

ಪರಿಣಾಮ ಕೌಟುಂಬಿಕ ನ್ಯಾಯಾಲಯವು ಕಳೆದ ತಿಂಗಳು, ಪ್ರತಿ ಶನಿವಾರ ಮಗುವಿಗೆ ತನ್ನ ಅಜ್ಜ-ಅಜ್ಜಿಯನ್ನು ಭೇಟಿಯಾಗಲು ಅವಕಾಶ ಮಾಡಿಕೊಡಬೇಕೆಂದು ನಿರ್ದೇಶನ ನೀಡಿದೆ. ಒಂದು ವೇಳೆ ಮಹಿಳೆ ಕೋರ್ಟ್​ ತೀರ್ಪು ಪಾಲಿಸದಿದ್ದಲ್ಲಿ 5,000 ರೂ.ಗಳ ದಂಡವನ್ನು ವಿಧಿಸಲಾಗುವುದು ಎಂದು ಎಚ್ಚರಿಕೆಯನ್ನು ಸಹ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.