ETV Bharat / bharat

ಗಾಯಗೊಂಡ ಮಗು ಎತ್ತಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಅಲೆದ ತಂದೆ! - ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆ ಅಲೆದಾಟ

ಮನೆ ಮಹಡಿ​ ಮೇಲಿಂದ ಬಿದ್ದ ಮಗುವೊಂದು ಗಂಭೀರವಾಗಿ ಗಾಯಗೊಂಡಿದ್ದು, ತಂದೆ ಮಗುವನ್ನು ಎತ್ತಿಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಿರುವ ಘಟನೆ ನಡೆದಿದೆ.

Noida
Noida
author img

By

Published : Jun 18, 2020, 9:15 PM IST

ಗೌತಮ್​ ಬುದ್ಧನಗರ:(ಉತ್ತರಪ್ರದೇಶ): ಅಸಹಾಯಕ ತಂದೆಯೋರ್ವ ಗಾಯಗೊಂಡ ಮಗುವನ್ನ ಎತ್ತಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮನೆ ಮಹಡಿ​ ಮೇಲೆ ಆಡುತ್ತಿದ್ದ ಮೂರು ವರ್ಷದ ಮಗು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದೆ. ಈ ವೇಳೆ ಮಗುವಿನ ತಂದೆ ರೋಶನ್ ಕುಮಾರ್,​​​ ಗ್ರೇಟರ್​ ನೋಯ್ಡಾದಲ್ಲಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದಾನೆ. ಬಾಲಕನ ಸ್ಥಿತಿ ಗಂಭೀರವಾಗಿರುವ ಮಾಹಿತಿ ಗೊತ್ತಾಗಿ ಬೇರೊಂದು ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ. ಈ ವೇಳೆ ಸಿಹೆಚ್​ಸಿ ಆಸ್ಪತ್ರೆಗೆ ತೆರಳಿದ್ದು, ಸಿಟಿ ಸ್ಕ್ಯಾನ್​, ಎಕ್ಸ್​ರೇ ನೆಪ ಹೇಳಿ ಮತ್ತೊಂದು ಆಸ್ಪತ್ರೆಗೆ ಹೋಗುವಂತೆ ಹೇಳಿದ್ದಾರಂತೆ.

ಮತ್ತೆ ಮಗುವನ್ನ ತೆಗೆದುಕೊಂಡು ಗ್ರೇಟರ್​ ನೋಯ್ಡಾದಲ್ಲಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ತಮ್ಮ ಆಸ್ಪತ್ರೆಯಲ್ಲಿ ಕೋವಿಡ್​​ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದೆ ಎಂದು ಹೇಳಿ ದಾಖಲು ಮಾಡಿಕೊಳ್ಳುಲು ಹಿಂದೇಟು ಹಾಕಿದ್ದಾರೆ. ಇದಾದ ಬಳಿಕ ಮತ್ತೊಂದು ಆಸ್ಪತ್ರೆಗೆ ತೆರಳಿದಾಗ ಮಗುವನ್ನ ಸೇರಿಸಿಕೊಳ್ಳಲು ಮುಂದಾಗಿದ್ದು, 25 ಸಾವಿರ ಹಣ ಕಟ್ಟುವಂತೆ ಹೇಳಿದ್ದಾರೆ. ಆದರೆ ಆತನ ಬಳಿ ಅಷ್ಟೊಂದು ಹಣ ಇಲ್ಲದ ಕಾರಣ ಸಫ್ದರ್ಜಂಗ್​​ ಆಸ್ಪತ್ರೆಗೆ ತೆರಳಿದ್ದು, ಮಗುವಿಗೆ ಅಲ್ಲಿ ಚಿಕಿತ್ಸೆ ನೀಡಿದ್ದಾಗಿ ತಿಳಿದು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.