ETV Bharat / bharat

ಸಂಸತ್​​ ಮುಂಗಾರು ಅಧಿವೇಶನದಲ್ಲಿ ಈ ಬಾರಿ ಪ್ರಶ್ನಾವಳಿ ಅವಧಿಗೆ ಅವಕಾಶವಿಲ್ಲ! - ಪ್ರಶ್ನಾವಳಿ ಅವಧಿಗೆ ಅವಕಾಶವಿಲ್ಲ

ಮುಂಬರುವ ಮುಂಗಾರು ಅಧಿವೇಶನದಲ್ಲಿ ಯಾವುದೇ ಪ್ರಶ್ನಾವಳಿ ಅವಧಿ ಇರುವುದಿಲ್ಲ ಎಂದು ರಾಜ್ಯಸಭಾ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

No question hour in Parliament's monsoon session
ಸೆ.14 ರಿಂದ ಮಾನ್ಸೂನ್ ಅಧಿವೇಶನ
author img

By

Published : Sep 2, 2020, 12:19 PM IST

Updated : Sep 2, 2020, 12:34 PM IST

ನವದೆಹಲಿ: ಕೋವಿಡ್​​​-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಯಾವುದೇ ಪ್ರಶ್ನಾವಳಿ ಅವಧಿ ಇರುವುದಿಲ್ಲ ಎಂದು ರಾಜ್ಯಸಭಾ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

"ಸೆಪ್ಟೆಂಬರ್ 14, 2020ರಂದು ಸೋಮವಾರ ರಾಷ್ಟ್ರಪತಿಗಳು ರಾಜ್ಯಸಭೆ ಅಧಿವೇಶನ ಕರೆದಿದ್ದಾರೆ. ವ್ಯವಹಾರದ ಅಗತ್ಯತೆಗಳಿಗೆ ಒಳಪಟ್ಟು ಅಧಿವೇಶನವು 2020ರ ಅಕ್ಟೋಬರ್ 1ರಂದು ಮುಕ್ತಾಯಗೊಳ್ಳಲಿದೆ" ಎಂದು ರಾಜ್ಯಸಭಾ ಕಾರ್ಯದರ್ಶಿ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.

ವೇಳಾಪಟ್ಟಿಯ ಪ್ರಕಾರ ಶೂನ್ಯ ವೇಳೆ ಚರ್ಚೆ ಮತ್ತು ಇತರ ಪ್ರಕ್ರಿಯೆಗಳು ನಡೆಯುತ್ತವೆ. ಸಂಸತ್ತಿನ ಮಾನ್ಸೂನ್ ಅಧಿವೇಶನ ಸೆಪ್ಟೆಂಬರ್ 14ರಿಂದ ಪ್ರಾರಂಭವಾಗಿ ಅಕ್ಟೋಬರ್ 1ರಂದು ಮುಕ್ತಾಯಗೊಳ್ಳಲಿದೆ.

ಅಧಿವೇಶನಕ್ಕೆ ಹಾಜರಾಗುವವರು 72 ಗಂಟೆಗಳ ಒಳಗೆ ಕೋವಿಡ್-19 ಪರೀಕ್ಷೆಗೆ ಒಳಪಡುವುದು ಸೇರಿದಂತೆ ಅಗತ್ಯವಾದ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಸಂಸತ್ತಿನ ಮಾನ್ಸೂನ್ ಅಧಿವೇಶನವನ್ನು ವಾರಾಂತ್ಯದಲ್ಲಿ ಸಹ ವಿರಾಮವಿಲ್ಲದೆ ಪ್ರತಿದಿನ ನಡೆಸಲಾಗುವುದು ಎಂದು ಸರ್ಕಾರದ ಉನ್ನತ ಮೂಲಗಳು ದೃಢಪಡಿಸಿವೆ. ಮೊದಲ ದಿನ (ಸೆಪ್ಟೆಂಬರ್ 14) ಲೋಕಸಭೆ ಕಲಾಪ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿದ್ದು, ರಾಜ್ಯಸಭಾ ಕಲಾಪ ಪ್ರಕ್ರಿಯೆ ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ನಡೆಯಲಿದೆ.

ಸೆಪ್ಟೆಂಬರ್ 14ರ ನಂತರ ರಾಜ್ಯಸಭೆಯು ಮೊದಲಾರ್ಧದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಮತ್ತು ಲೋಕಸಭೆಯ ಪ್ರಕ್ರಿಯೆಯನ್ನು ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ನಿಗದಿಪಡಿಸಲಾಗಿದೆ. ಸಂಸತ್ತಿನ ಉಭಯ ಸದನಗಳು ಪ್ರತಿದಿನ ನಾಲ್ಕು ಗಂಟೆಗಳ ಕಾಲ ಅಧಿವೇಶನ ನಡೆಸಲಿವೆ ಮತ್ತು ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ.

Last Updated : Sep 2, 2020, 12:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.