ಸಿರೋಹಿ(ರಾಜಸ್ಥಾನ): ಅತ್ಯಾಚಾರಿಗಳು ಯಾವುದೇ ಕಾರಣಕ್ಕೂ ಕ್ಷಮೆಗೆ ಅರ್ಹರೇ ಅಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ರು. ರಾಜಸ್ಥಾನದ ಸಿರೋಹಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ರು.
ಕ್ಷಮಾದಾನ ಅರ್ಜಿಗಳ ಕುರಿತು ಸಂವಿಧಾನಕ್ಕೆ ಕೆಲವು ಅಗತ್ಯ ತಿದ್ದುಪಡಿಯಾಗಬೇಕಿದೆ. ಈ ಸಂಬಂಧ ಸಂಸತ್ ಪುನರ್ ಪರೀಶೀಲನೆ ನಡೆಸಬೇಕೆಂದು ಹೇಳಿದರು.
ಈಗಾಗಲೇ ದೇಶದ ಗಮನ ಸೆಳೆದಿರುವ ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ, ತೆಲಂಗಾಣ ಪಶುವೈದ್ಯೆ ಕೇಸ್ ಹಾಗೂ ಉನ್ನಾವೋ ಪ್ರಕರಣದ ಬಗ್ಗೆ ರಾಷ್ಟ್ರಪತಿಗಳು ಕಳವಳ ವ್ಯಕ್ತಪಡಿಸಿದರು.