ETV Bharat / bharat

ತಾಪಮಾನ ಬದಲಾವಣೆಗೂ ಕೊರೊನಾಕ್ಕೂ ಸಂಬಂಧವಿಲ್ಲ: ತಜ್ಞರ ಅಭಿಪ್ರಾಯ

ವಾತಾವರಣದಲ್ಲಿನ ತಾಪಮಾನದ ಬದಲಾವಣೆಗೂ ಕೋವಿಡ್​-19 ಹರಡುವಿಕೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.

coronavirus
ಕೊರೊನೊ
author img

By

Published : Mar 10, 2020, 3:29 PM IST

ನವದೆಹಲಿ: ವಾತಾವರಣದಲ್ಲಿನ ತಾಪಮಾನದ ಬದಲಾವಣೆ ಮತ್ತು ಕೋವಿಡ್​-19 ಹರಡುವಿಕೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹವಾಮಾನ ಸಂಶೋಧನಾ ತಜ್ಞರು ಸ್ಪಷ್ಟಪಡಿಸಿದ್ದಾರೆ.

ಕೆಲದಿನಗಳಿಂದ ರಾಷ್ಟ್ರ ರಾಜಧಾನಿಯ ತಾಪಮಾನದಲ್ಲಿ ಸಾಕಷ್ಟು ಏರುಪೇರಾದ ಪರಿಣಾಮ ತಾಪಮಾನ ಕಡಿಮೆಯಾಗಿ ಪಾದರಸದಲ್ಲಿ ಹಠಾತ್ ಕುಸಿತ ಕಂಡು ಬಂದಿದೆ. ಕನಿಷ್ಠ ತಾಪಮಾನವು 1 ರಿಂದ 12 ಡಿಗ್ರಿ ಸೆಲ್ಸಿಯಸ್‌ ಸಮೀಪದಲ್ಲೇ ಸುಳಿದಾಡುತ್ತಿದೆ.

ಹೀಗಾಗಿ ರಾಜಧಾನಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ವಿವರ ನೀಡಿದ ತಜ್ಞರು, ಭಯ ಪಡುವ ಅಗತ್ಯ ಇಲ್ಲ. ತಾಪಮಾನಕ್ಕೂ ಹಾಗೂ ವೈರಸ್​ ಹರಡುವಿಕೆಗೂ ಸಂಬಂಧವಿಲ್ಲ ಎಂದು ಜನರಲ್ಲಿದ್ದ ಆತಂಕವನ್ನು ದೂರಮಾಡಿದ್ದಾರೆ.

ತಾಪಮಾನದಿಂದ ವೈರಸ್​ ಹರಡಲು ಸಾಧ್ಯವಿಲ್ಲ. ಅದೇನಿದ್ದರೂ ಮಾನವ ಸಂಪರ್ಕದ ಮೂಲಕ ಮಾತ್ರವೇ ಕೋವಿಡ್​-19 ಹರಡಲಿದೆ. ಜನರು ಆದಷ್ಟು ಸಾಮೂಹಿಕ ಸಭೆಗಳಿಂದ ದೂರುವಿದ್ದರೆ ಒಳ್ಳೆಯದು. ಅಲ್ಲದೇ, ಆಗಾಗ್ಗೆ ಕೈಯನ್ನು ಶುದ್ಧಗೊಳಿಸುತ್ತಿರಬೇಕು ಎಂದು ತಜ್ಞರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಏಮ್ಸ್ ಆಸ್ಪತ್ರೆಯ ನಿರ್ದೇಶಕ ರಂದೀಪ್ ಗುಲೇರಿಯಾ, ಗಾಳಿಯಲ್ಲಿನ ಆರ್ದ್ರತೆಯಿಂದ ವೈರಸ್ ಪರಿಣಾಮಕಾರಿಯಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದೆ ಎಂದು ಸಂಶೋಧನೆಗಳು ತಿಳಿಸಿವೆ ಎಂದಿದ್ದಾರೆ. ಮತ್ತು ಕೆಲವರು ತಾಪಮಾನದಿಂದ ವೈರಸ್​ ಹರಡುತ್ತದೆ ಎಂಬುದು ಶುದ್ಧ ಸುಳ್ಳು. ಅಂತ ಹೇಳಿಕೆಗಳಿಗೆ ಯಾರೂ ಕಿವಿಗೊಡಬಾರದು. ತಾಪಮಾನ ಏರಿಕೆ ವೈರಸ್ ಕೊಲ್ಲಲು ಸಹಾಯ ಮಾಡುತ್ತದೆ ಎಂದಲ್ಲಾ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಸಿಂಗಾಪುರದಂತಹ ಹೆಚ್ಚು ಉಷ್ಣವಲಯದ ದೇಶಗಳಲ್ಲೂ ಕೂಡ ಕೊರೊನಾ ವೈರಸ್​ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭಾರತದಲ್ಲಿ ಈವರೆಗೆ 43 ಕೊರೊನಾ ವೈರಸ್ ಪ್ರಕರಣಗಳು ಬೆಳಕಿಗೆ ಬಂದಿವೆ. ವಿಶ್ವದಾದ್ಯಂತ ಕೊರೊನಾ ವೈರಸ್​ ಒಟ್ಟು 1,10,000 ಜನರಲ್ಲಿ ಪತ್ತೆಯಾಗಿದ್ದು, 4,026 ಮಂದಿ ಸಾವನ್ನಪ್ಪಿದ್ದಾರೆ.

ಕೋವಿಡ್​-19 ವೈರಸ್​ ಹೊಸದಾಗಿದ್ದು, ಈ ಬಗ್ಗೆ ವೈಜ್ಞಾನಿಕ ಸಮುದಾಯಕ್ಕೆ ಹೆಚ್ಚಿನ ಅಂಶಗಳು ತಿಳಿದಿಲ್ಲ

-ಸಂದೀಪ್ ಬುಧಿರಾಜ, ಮ್ಯಾಕ್ಸ್ ಹೆಲ್ತ್‌ಕೇರ್‌ ಗ್ರೂಪ್​ನ ವೈದ್ಯಕೀಯ ನಿರ್ದೇಶಕ

ತಾಪಮಾನದ ಏರಿಕೆ ಮತ್ತು ಕೊರೊನಾ ವೈರಸ್​ ಹರಡುವಿಕೆ ನಡುವಿನ ಸಂಬಂಧದ ಬಗ್ಗೆ ಇನ್ನೂ ಸಾಬೀತಾಗಿಲ್ಲ

-ನೂತಾನ್ ಮುಂಡೇಜಾ, ದೆಹಲಿಯ ಆರೋಗ್ಯ ಸೇವಾ ಇಲಾಖೆಯ ಮಹಾನಿರ್ದೇಶಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.