ನವದೆಹಲಿ: ನ್ಯಾಷನಲ್ ಇನ್‍ಸ್ಟಿಟ್ಯೂಷನಲ್ ಶ್ರೇಯಾಂಕ ಫ್ರೇಮ್‍ವರ್ಕ್ (ಎನ್‍ಐಆರ್‌ಎಫ್) ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಮದ್ರಾಸ್ (ಐಐಟಿ- ಮದ್ರಾಸ್) ಪ್ರಥಮ ಸ್ಥಾನ ಪಡೆದಿದ್ದು, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ದೆಹಲಿ ನಂತರದ ಸ್ಥಾನ ಪಡೆದಿವೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಶ್ರೇಯಾಂಕದ ಪಟ್ಟಿ ಬಿಡುಗಡೆ ಮಾಡಿದರು. ಭಾರತದ ಉನ್ನತ ವಿಶ್ವವಿದ್ಯಾಲಯಗಳ ಅಡಿಯಲ್ಲಿ ಐಐಎಸ್ಟಿ 84.18 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ 70.16 ಅಂಕಗಳ ಮೂಲದ ಎರಡನೇ ಸ್ಥಾನದಲ್ಲಿದೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯ 63.15 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
-
e- Release of India Ranking 2020 (NIRF) https://t.co/MnFqsm7Oqw
— Dr Ramesh Pokhriyal Nishank (@DrRPNishank) June 11, 2020 " class="align-text-top noRightClick twitterSection" data="
">e- Release of India Ranking 2020 (NIRF) https://t.co/MnFqsm7Oqw
— Dr Ramesh Pokhriyal Nishank (@DrRPNishank) June 11, 2020e- Release of India Ranking 2020 (NIRF) https://t.co/MnFqsm7Oqw
— Dr Ramesh Pokhriyal Nishank (@DrRPNishank) June 11, 2020
ದಕ್ಷಿಣ ಭಾರತದ ಪ್ರಥಮ ವಿವಿ ಮೈಸೂರು ವಿಶ್ವವಿದ್ಯಾನಿಲಯ 49.75ಬ ಅಂಕಗಳ 47ನೇ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್ ಸಂಸ್ಥೆಗಳು ಕ್ರಮವಾಗಿ 14, 33 ಮತ್ತು 54 ಸ್ಥಾನ ಪಡೆದಿವೆ.
ಕಾಲೇಜುಗಳ ವಿಭಾಗದಲ್ಲಿ ದೆಹಲಿಯ ಮಿರಾಂಡಾ ಹೌಸ್ ಅತ್ಯುತ್ತಮ ಸ್ಥಾನ ಪಡೆದರೆ, ಲೇಡಿ ಶ್ರೀ ರಾಮ್ ಮಹಿಳಾ ಮಹಿಳಾ ಕಾಲೇಜು ಮತ್ತು ಹಿಂದೂ ಕಾಲೇಜು ನಂತರ ಶ್ರೇಣಿಯಲ್ಲಿವೆ. ಐಐಎಂ ಅಹಮದಾಬಾದ್ ದೇಶದ ಉನ್ನತ ಬಿ-ಸ್ಕೂಲ್ ಸ್ಥಾನದಲ್ಲಿದೆ. ಐಐಎಂ ಬೆಂಗಳೂರು ಮತ್ತು ಕೋಲ್ಕತ್ತಾ ನಂತರದ ಸ್ಥಾನದಲ್ಲಿದ್ದು, ಫಾರ್ಮಸಿ ವಿಭಾಗದಲ್ಲಿ ದೆಹಲಿಯ ಜಾಮಿಯಾ ಹಮ್ದಾರ್ಡ್ ಮತ್ತು ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯ ನಂತರದ ಸ್ಥಾನದಲ್ಲಿವೆ.
ವೈದ್ಯಕೀಯ ಕಾಲೇಜುಗಳ ವಿಭಾಗದಲ್ಲಿ ಏಮ್ಸ್ ದೆಹಲಿ ಪ್ರಥಮ ಸ್ಥಾನ ಪಡೆದರೇ ಚಂಡೀಗಢ ಮತ್ತು ಸಿಎಂಸಿ ವೆಲ್ಲೂರು ಬಳಿಕದ ಶ್ರೇಣಿಯಲ್ಲಿವೆ.
ನ್ಯಾಷನಲ್ ಇನ್‍ಸ್ಟಿಟ್ಯೂಷನಲ್ ಶ್ರೇಯಾಂಕ ಫ್ರೇಮ್‍ವರ್ಕ್ ಅನ್ನು ಎಂಹೆಚ್‌ಆರ್‌ಡಿ 2015ರ ಸೆಪ್ಟೆಂಬರ್ 29ರಂದು ಪ್ರಾರಂಭಿಸಿತ್ತು. ಈ ಫ್ರೇಮ್‍ವರ್ಕ್ ದೇಶಾದ್ಯಂತ ಸಂಸ್ಥೆಗಳನ್ನು ಶ್ರೇಣೀಕರಿಸಿ ಗ್ರೇಡ್ಗಳನ್ನು ನೀಡುತ್ತದೆ. ನಿಯತಾಂಕಗಳಲ್ಲಿ "ಬೋಧನೆ, ಕಲಿಕೆ ಮತ್ತು ಸಂಪನ್ಮೂಲಗಳು", "ಸಂಶೋಧನೆ ಮತ್ತು ವೃತ್ತಿಪರ ಚಟುವಟಿಕೆಗಳು", "ಪದವಿ ಫಲಿತಾಂಶ", "ಪ್ರಭಾವ ಮತ್ತು ಒಳಗೊಳ್ಳುವಿಕೆ" ಮತ್ತು "ಗ್ರಹಿಕೆ"ಯಂತಹ ಅಂಶಗಳನ್ನು ಪರಿಗಣಿಸುತ್ತದೆ.