ETV Bharat / bharat

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐದೇ ದಿನಕ್ಕೆ ನವಜೋಡಿ ಆತ್ಮಹತ್ಯೆಗೆ ಶರಣು!

ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನವಜೋಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋನಿಪತ್​ನಲ್ಲಿ ನಡೆದಿದೆ.

Newlywed couple commits suicide
Newlywed couple commits suicide
author img

By

Published : Jun 2, 2020, 2:17 AM IST

ಸೋನಿಪತ್​​(ಚಂಡೀಗಢ): ಮೇ.27ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನವಜೋಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋನಿಪತ್​ನ ಇಂಡಿಯನ್​ ಕಾಲೋನಿಯಲ್ಲಿ ನಡೆದಿದ್ದು, ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

25 ವರ್ಷದ ಮಂಜಿತ್​ ಹಾಗೂ 24 ವರ್ಷದ ಆರತಿ ಆತ್ಮಹತ್ಯೆಗೆ ಶರಣಾಗಿರುವ ಜೋಡಿ. ಮಂಜಿತ್​​ ಮೃತದೇಹ ರೈಲ್ವೇ ಹಳಿ ಮೇಲೆ ಹಾಗೂ ಆರತಿ ಮೃತದೇಹ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಿಕ್ಕಿದೆ. ಕಳೆದ ಕೆಲ ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಗೆ ಎರಡು ಕುಟುಂಬದವರು ಸಮ್ಮತಿ ಸೂಚಿಸಿ ಮದುವೆ ಮಾಡಿದ್ದರು ಎನ್ನಲಾಗಿದೆ.

ಸೋನಿಪತ್​ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿರುವ ಪ್ರಕಾರ, ಎರಡು ಕುಟುಂಬದ ನಡುವೆ ಉಂಟಾದ ವೈಮನಸ್ಸಿನಿಂದ ಈ ನಿರ್ಧಾರ ತೆಗೆದುಕೊಂಡಿರಬಹುದು ಎನ್ನಲಾಗಿದೆ. ಆರತಿ ಕೋಣೆಯಿಂದ ಹೊರಬಾರದ ಕಾರಣ ಕುಟುಂಬಸ್ಥರು ಬಾಗಿಲು ಒಡೆದು ನೋಡಿದಾಗ ನೇಣಿಗೆ ಶರಣಾಗಿರುವುದು ಪತ್ತೆಯಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಮಂಜಿತ್ ಮೃತದೇಹ ಕೂಡ ಪತ್ತೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.