ನವದೆಹಲಿ: ಕಳೆದ ಸಂಸತ್ ಅಧಿವೇಶನದಲ್ಲಿ ಮಂಡಿಸಲಾದ ಪರಿಷ್ಕೃತ ಮೋಟಾರ್ ವಾಹನ ಕಾಯ್ದೆ (ತಿದ್ದುಪಡಿ) 2019 ಇಂದಿನಿಂದ ಜಾರಿಗೆ ಬರಲಿದೆ.
ಸಾರಿಗೆ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಮೊತ್ತದ ದಂಡ ಶುಲ್ಕ ಸೇರಿದಂತೆ 63 ಷರತ್ತುಗಳನ್ನು ಒಳಗೊಂಡ ನೂತನ ಮೋಟಾರ್ ವಾಹನ (ತಿದ್ದುಪಡಿ) 2019 ಕಾಯ್ದೆಯು ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ಈಗಾಗಲೇ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.
ಸಾರಿಗೆ ನಿಯಮಗಳಿಗೆ ಸಂಬಂಧಿಸಿದಂತೆ ಜಾರಿಗೆ ತರಲಾಗುತ್ತಿರುವ 63 ಷರತ್ತುಗಳ ಉಲ್ಲಂಘನೆಯ ದಂಡ ಶುಲ್ಕ ಹೆಚ್ಚಳ ಮಾಡಲಾಗಿದೆ. ಮದ್ಯ ಸೇವಿಸಿ ವಾಹನ ಚಾಲನೆ, ಅತಿ ವೇಗದ ಚಾಲನೆ ಹಾಗೂ ಹೆಚ್ಚುವರಿ ಸರಕು ಸಾಗಾಟ ಸೇರಿದಂತೆ ಇತರೆ ನಿಯಮಗಳ ಉಲ್ಲಂಘನೆಯ ದಂಡದ ಮೊತ್ತ ಏರಿಕೆ ಆಗಿದೆ.
ದೇಶದಲ್ಲಿ ರಸ್ತೆ ಅಪಘಾತಗಳನ್ನು ತಡೆಯಲು ಪ್ರಸ್ತುತ ಕಠಿಣ ನಿಯಮವನ್ನು ಜಾರಿಗೆ ತರಲಾಗುತ್ತಿದೆ ಎಂದು ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಿಯಮಗಳ ಉಲ್ಲಂಘನೆಗೆ ವಿಧಿಸಲಾಗುವ ದಂಡ
- ತುರ್ತು ವಾಹನಗಳಿಗೆ ದಾರಿ ಬಿಡದಿದ್ದರೆ- ₹ 10,000 ದಂಡ, 6 ತಿಂಗಳು ಜೈಲು
- ಅತಿ ವೇಗದ ಚಾಲನೆ- ₹ 1000- ₹ 2000 ದಂಡ, ತಿಂಗಳು ಜೈಲು
- ವಿಮೆ ಇಲ್ಲದೆ ಡ್ರೈವಿಂಗ್- ₹ 2000
- ಹೆಲ್ಮೆಟ್ ಧರಿಸದೆ ಡ್ರೈವಿಂಗ್- ₹ 1000
- ಬಾಲಾಪರಾಧಿಗಳ ರಸ್ತೆ ಅಪರಾಧ ಪ್ರಕರಣ- ₹ 25,000
- ಕುಡಿದು ವಾಹನ ಚಾಲನೆ- ₹ 10,000 ದಂಡ, 6 ತಿಂಗಳ ಜೈಲು
- ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆ ಇತರೆ ₹ 5,000 ದಂಡ ಹಾಗೂ 6-12 ತಿಂಗಳು ಜೈಲು