ETV Bharat / state

ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯ ಡಾ. ಸುನೀಲ್‌ ಅಪಹರಣ: ಭಾರಿ ಹಣಕ್ಕೆ ಬೇಡಿಕೆ - DOCTOR KIDNAPED

ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ. ಸುನೀಲ್‌ ಎಂಬುವವರನ್ನು ದುಷ್ಕರ್ಮಿಗಳು ಅಪಹರಿಸಿದ್ದು, ಈ ಬಗ್ಗೆ ದೂರು ದಾಖಲಾಗಿದೆ.

DOCTOR KIDNAPED
ಬಳ್ಳಾರಿ ಜಿಲ್ಲಾಸ್ಪತ್ರೆ ಮಕ್ಕಳ ವೈದ್ಯ ಡಾ.ಸುನೀಲ್ (ETV Bharat)
author img

By ETV Bharat Karnataka Team

Published : Jan 25, 2025, 2:57 PM IST

Updated : Jan 25, 2025, 3:18 PM IST

ಬಳ್ಳಾರಿ: ವಾಕಿಂಗ್ ಮಾಡುತ್ತಿದ್ದ ಬಳ್ಳಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಡಾ.ಸುನೀಲ್​ ಅವರನ್ನು ಯಾರೋ ದುಷ್ಕರ್ಮಿಗಳು ಇಂದು ಬೆಳಗ್ಗೆ ಅಪಹರಿಸಿರುವುದಾಗಿ ಅವರ ಸಹೋದರ ವೇಣು ಎಂಬುವರು ಗಾಂಧಿನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯ ಡಾ. ಸುನೀಲ್‌ ಅಪಹರಣ (ETV Bharat)

ವೈದ್ಯ ಸುನೀಲ್ ಅವರು ಇಂದು​ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದರು. ಸೂರ್ಯನಾರಾಯಣಪೇಟೆಯ ಶನೇಶ್ವರಗುಡಿ ಬಳಿ​ ಬರುತ್ತಿದ್ದಂತೆ ಟಾಟಾ ಇಂಡಿಗೋ ಕಾರಿನಲ್ಲಿ ಬಂದ ದುಷ್ಕರ್ಮಿಗಳು, ಸುನೀಲ್ ಅವರ ಬಾಯಿ ಮುಚ್ಚಿ ಕಾರಿನಲ್ಲಿ ಎಳೆದೊಯ್ದಿದ್ದಾರೆ ಎಂದು ಸಹೋದರ ವೇಣು ದೂರು ನೀಡಿದ್ದಾರೆ.

ಅಪಹರಣಕಾರರು ಭಾರೀ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಇದ್ದು, ಈ ಬಗ್ಗೆ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.

ಅಪಹರಣದ ದೃಶ್ಯ (ETV Bharat)

ಸಹೋದರ ವೇಣು ಅವರು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷರೂ ಆಗಿದ್ದಾರೆ. ವೈದ್ಯ ಸುನೀಲ್ ಅವರ ಮೊಬೈಲ್​ನಿಂದ ವೇಣುಗೆ ಕರೆ ಮಾಡಿದ ಅಪಹರಣಕಾರರು ಭಾರಿ ಪ್ರಮಾಣದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಂತೆ ವೇಣು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ದೂರು ಪಡೆದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಈ ಅಪಹರಣ ವಿಚಾರ ತಿಳಿಯುತ್ತಿದ್ದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸತ್ಯನಾರಾಯಣ ಪೇಟೆಯಲ್ಲಿರುವ ವೈದ್ಯ ಸುನೀಲ್ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಇದೇ ವೇಳೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶೋಭಾರಾಣಿ ಅವರೊಂದಿಗೂ ಮಾತನಾಡಿದ ಜನಾರ್ದನ ರೆಡ್ಡಿ, ಕೂಡಲೇ ಅಪಹರಣಕಾರರನ್ನು ಹಿಡಿಯುವಂತೆ ಮನವಿ ಮಾಡಿದರು. ಪೊಲೀಸರು ಅಪಹರಣಕಾರರ ಜಾಡು ಪತ್ತೆ ಕಾರ್ಯದಲ್ಲಿ ನಿರತರಾಗಿರುವುದಾಗಿ ಎಸ್​ಪಿ ತಿಳಿಸಿದರು.

ಇದನ್ನೂ ಓದಿ: ಕಾರವಾರ:ಉದ್ಯಮಿ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಐವರು ಆರೋಪಿಗಳು ಅರೆಸ್ಟ್​ - FIVE ARRESTED IN KIDNAP CASE

Last Updated : Jan 25, 2025, 3:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.