ಹೈದರಾಬಾದ್: ತೆಲಂಗಾಣದ ಹೈದರಾಬಾದ್ನಲ್ಲಿ ಭಾರಿ ಕಳ್ಳತನ ನಡೆದಿದೆ. ನೇಪಾಳ ಕಳ್ಳರ ಗ್ಯಾಂಗ್ವೊಂದು ಮನೆ ಮಾಲೀಕರಿಗೆ ಮತ್ತು ಭರಿಸುವ ಔಷಧ ನೀಡಿ ಮನೆ ದೋಚಿರುವ ಘಟನೆ ಇಲ್ಲಿನ ರಾಯದುರ್ಗ್ ನಗರದಲ್ಲಿ ನಡೆದಿದೆ.
ಡಿಎನ್‌ಆರ್ ಹಿಲ್ಸ್‌ನಲ್ಲಿ ವಾಸಿಸುತ್ತಿರುವ ಮಧುಸೂದನ್ ರೆಡ್ಡಿ ಮನೆಯಲ್ಲಿ ಕೆಲವು ತಿಂಗಳಿನಿಂದಲೂ ನೇಪಾಳದ ನಿವಾಸಿಗಳು ಮನೆಯ ಕೆಲಸ ಸೇರಿದಂತೆ ಅಡುಗೆ ಸಹ ಮಾಡುತ್ತಿದ್ದರು. ಇವರು ಮಾಲೀಕ ಮಧುಸೂದನ್ ರೆಡ್ಡಿಯ ನಂಬಿಕೆ ಗಳಿಸಿದ್ದರು. ಕಾಂಟ್ರಾಕ್ಟರ್ ಆಗಿದ್ದ ಮಧುಸೂದನ್ ನಗದು, ಬಂಗಾರ ಎಲ್ಲೆಲ್ಲಿ ಇಟ್ಟಿದ್ದರು ಎಂಬುದನ್ನು ನೇಪಾಳ ಗ್ಯಾಂಗ್ನ ರಾಜೇಂದರ್, ಆತನ ಸೊಸೆಯರಾದ ಸೀತಾ, ಜಾನಕಿ ಮತ್ತು ಮನೋಜ್ ಚೆನ್ನಾಗಿಯೇ ಅರಿತಿದ್ದರು.
ನಿನ್ನೆ ರಾತ್ರಿ ಚಪಾತಿಯಲ್ಲಿ ಮತ್ತು ಬರುವಂತಹ ಔಷಧವನ್ನು ಬೆರೆಸಿ ಮಧುಸೂದನ್ ಮತ್ತು ಆತನ ಕುಟುಂಕ್ಕೆ ನೀಡಿದ್ದಾರೆ. ಚಪಾತಿ ತಿಂದ ಬಳಿಕ ಎಲ್ಲರೂ ನಿದ್ರೆಗೆ ಜಾರಿದ್ದು, ನೇಪಾಳ ಕಳ್ಳರ ಗ್ಯಾಂಗ್ ತಮ್ಮ ಕೆಲಸವನ್ನು ಸಲೀಸಾಗಿ ಮಾಡಿಕೊಂಡಿದೆ. ಸುಮಾರು 15 ಲಕ್ಷ ನಗದು, 50 ಗ್ರಾಂ ಚಿನ್ನವನ್ನು ದೋಚಿ ಪರಾರಿಯಾಗಿದೆ.
ಆರೋಪಿಗಳು ಚಪಾತಿಯಲ್ಲಿ ಮತ್ತು ಔಷಧ ಬೆರೆಸಿ ಮಧುಸೂದನ್ ರೆಡ್ಡಿ ಜತೆ ಆತನ ಹೆಂಡ್ತಿ, ಮಗ, ಸೊಸೆ ಮತ್ತು ಮೊಮ್ಮಗನಿಗೆ ನೀಡಿದ್ದಾರೆ. ಅವರೆಲ್ಲರೂ ನಿದ್ರೆಗೆ ಜಾರಿದ ಬಳಿಕ ಮನೆಯಲ್ಲಿದ್ದ ಬಂಗಾರ, ನಗದು ದೋಚಿದ್ದಾರೆ. ಇನ್ನು ಕಳ್ಳರು ಯಾವುದೇ ಆಧಾರವನ್ನು ಬಿಡದೆ ಸಿಸಿಟಿವಿಯ ಡಿವಿಆರ್, ಮೊಬೈಲ್ ಫೋನ್ಗಳನ್ನು ಸಹ ಕದ್ದೊಯ್ದಿದ್ದಾರೆ ಎಂದು ಡಿಸಿಪಿ ಹೇಳಿದ್ದಾರೆ.