ನವದೆಹಲಿ: ಇಂಧನ ಬೆಲೆ ಏರಿಕೆಯಿಂದ ಬಂದ ಹಣವನ್ನು ಕಾಂಗ್ರೆಸ್ ಯುಗದಲ್ಲಿ ಚಾಲ್ತಿಯಲ್ಲಿದ್ದಂತೆ ವೈಯಕ್ತಿಕ ಲಾಭಕ್ಕೆ ಬದಲಾಗಿ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಬಳಸಲಾಗುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಇಂಧನ ಬೆಲೆ ಏರಿಸಿ ಕೇಂದ್ರ ಜನರದಿಂದ ಸುಲಿಗೆ ಮಾಡುತ್ತಿದೆ ಎಂದು ಸೋಂನಿಯಾ ಗಾಂಧಿ ಆರೋಪಿಸಿದ್ರೆ, ರಾಹುಲ್ ಗಾಂಧಿ ಇಂಧನ ಬೆಲೆ ಏರಿಕೆಯಿಂದ ಕೇಂದ್ರ ಲಾಭ ಗಳಿಸುತ್ತಿದೆ ಎಂದಿದ್ದರು. ಇಬ್ಬರ ಹೇಳಿಕೆಗೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿರುಗೇಟು ನೀಡಿದ್ದಾರೆ.
'ಮೋದಿ ಜೀ ಕಳೆದ 3 ತಿಂಗಳಲ್ಲಿ 65 ಸಾವಿರ ಕೋಟಿ ರೂಪಾಯಿ ಹಣವನ್ನು 42 ಕೋಟಿ ಜನರಿಗೆ ವರ್ಗಾಯಿಸಿದ್ದಾರೆ ಎಂದು ನಾನು ಮತ್ತೊಮ್ಮೆ ಮೇಡಂ ಸೋನಿಯಾ ಗಾಂಧಿ ಅವರಿಗೆ ತಿಳಿಸುತ್ತೇನೆ' ಎಂದಿದ್ದಾರೆ.
ಕಾಂಗ್ರೆಸ್ ವಿರುದ್ಧ ಬಲವಾದ ಆರೋಪ ಮಾಡಿದ ಪೆಟ್ರೋಲಿಯಂ ಸಚಿವರು, 'ಮಧ್ಯವರ್ತಿಗಳ ಖಾತೆಗಳಿಗೆ ಹಣವನ್ನು ವರ್ಗಾಯಿಸುವ ಕಾಂಗ್ರೆಸ್ ಪರಂಪರೆಯಂತಲ್ಲ. ಮೋದಿ ಜೀ ಅವರು ನೇರವಾಗಿ ಬಡವರು, ರೈತರು, ವಲಸೆ ಕಾರ್ಮಿಕರು ಮತ್ತು ಮಹಿಳೆಯರಿಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.