ಹೈದರಾಬಾದ್: ಇಸ್ರೋದ ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಕೇಂದ್ರದ (ಎನ್‌ಆರ್‌ಎಸ್‌ಸಿ) ವಿಜ್ಞಾನಿ ಎಸ್, ಸುರೇಶ್ ಕುಮಾರ್ ಸಾವಿನ ಹಿಂದೆ ಸಲಿಂಗ ಪ್ರೇಮದ ನಂಟಿತ್ತೆಂದು ಹೇಳಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಲ್ಯಾಬ್ ಸಹಾಯಕ ಶ್ರೀನಿವಾಸ್ (39) ಎಂಬುವವರನ್ನು ಹೈದರಾಬಾದ್ ಪೋಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸತ್ತಿರುವ ವ್ಯಕ್ತಿಯ ಜೊತೆಗೆ ಶ್ರೀನಿವಾಸ್ ಲೈಂಗಿಕ ಸಂಪರ್ಕ ಹೊಂದಿದ್ದ ಎಂದು ವರದಿಯಾಗಿದೆ, ಅಲ್ಲದೆ ಕೊಲೆ ತನಿಖೆ ನಡೆಸಿರುವ ಪೋಲಿಸರಿಗೆ ಸಿಸಿ ಕ್ಯಾಮೆರಾ ದೃಶ್ಯಗಳ ಜೊತೆಗೆ ಹಲವಾರು ಸಾಕ್ಷ್ಯಗಳು ದೊರಕಿದೆ. ಸುರೇಶ್ ಅವರು ಹೈದರಾಬಾದ್ನ ಅಮೀರ್ ಪೇಟ್ನಲ್ಲಿರುವ ತಮ್ಮ ನಿವಾಸದಲ್ಲಿ ಕೊಲೆಯಾಗಿದ್ದರು.
ಹೈದರಾಬಾದ್‌ನಲ್ಲಿ ಇಸ್ರೋ ವಿಜ್ಞಾನಿ ಹತ್ಯೆ!
ಆಮೀರ್ ಪೇಟ್ ನಲ್ಲಿರುವ ಸುರೇಶ್ ಅವರ ನಿವಾಸಕ್ಕೆ ಆರೋಪಿಯು ಆಗಾಗ ಭೇಟಿ ನೀಡುತ್ತಿದ್ದ, ಮೃತ ವಿಜ್ಞಾನಿ ಹಾಗೂ ಆರೋಪಿಯ ರಕ್ತ ಪರೀಕ್ಷೆ ನಡೆಸಲಾಗಿದ್ದು, ಫೋನ್ ಕಾಲ್, ಡೇಟಾ ರೆಕಾರ್ಡ್ ಎಲ್ಲವನ್ನು ಪರಿಶೀಲಿಸಿದ ನಂತರ ಬಂಧಿಸಲಾಗಿದೆ. ಆರೋಪಿಯ ಬಳಿ ಇದ್ದ ಕೊಲೆಗೆ ಬಳಿಸಿದ್ದ ಶಸ್ತ್ರಾಸ್ತ್ರ, ಸುರೇಶ್ ಅವರ ಉಂಗುರು ಎಲ್ಲವನ್ನು ವಶಕ್ಕೆ ಪಡೆದಿದ್ದೇವೆ ಎಂದು ಪೋಲಿಸ್ ಆಯುಕ್ತ ಅಂಜನಿ ಕುಮಾರ್ ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ವಿಜ್ಞಾನಿ ಜೊತೆ ಲೈಂಗಿಕ ಸಂಬಂಧ ಮುಂದುವರಿಸಲು ಆರೋಪಿಯು 50 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ. ಇದನ್ನು ನಿರಾಕರಿಸಿದ್ದರಿಂದ ಅವರ ಮಧೈ ಬಿರುಕು ಉಂಟಾಯಿತು ಎನ್ನಲಾಗಿದೆ. ಇದಾದ ಬಳಿಕ ಹೇಗೆ ಹತೈ ಮಾಡುವುದು ಎಂದು ಶ್ರೀನಿವಾಸ್ ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ಸಹ ನಡೆಸಿದ್ದ ಎನ್ನಲಾಗಿದೆ.
ಸುರೇಶ್ 20 ವರ್ಷಗಳಿಂದ ಹೈದರಾಬಾದ್‌ನಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ನಗರದಲ್ಲಿ ಕೆಲಸ ಮಾಡುತ್ತಿದ್ದರು ಆದರೆ ಅವರನ್ನು 2005 ರಲ್ಲಿ ಅವರನ್ನು ಚೆನ್ನೈಗೆ ವರ್ಗಾಯಿಸಲಾಯಿತು. ಅವರ ಪುತ್ರ ಯುಎಸ್ ನಲ್ಲಿ ಮತ್ತು ಅವರ ಮಗಳು ದೆಹಲಿಯಲ್ಲಿ ವಾಸವಾಗಿದ್ದಾರೆ.