ETV Bharat / bharat

ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಮೋದಿ - ನವದೆಹಲಿ

ಫ್ರಾನ್ಸ್, ಬಹ್ರೇನ್, ಯುಎಇ ಪ್ರವಾಸ ಮುಗಿಸಿ ಪ್ರಧಾನಿ ಮೋದಿ ಇಂದು ತವರಿಗೆ ಮರಳಿದ್ದಾರೆ.

ಭಾರತಕ್ಕೆ ಮೋದಿ ವಾಪಾಸ್
author img

By

Published : Aug 27, 2019, 6:19 AM IST

ನವದೆಹಲಿ: ಕಳೆದ 5 ದಿನಗಳ ಕಾಲ ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಇಂದು ಬೆಳಗ್ಗೆ ಭಾರತಕ್ಕೆ ವಾಪಸ್​ ಆಗಿದ್ದಾರೆ.

ಆಗಸ್ಟ್ 22 ರಂದು ಪ್ಯಾರಿಸ್​ಗೆ ಭೇಟಿ ನೀಡಿದ್ದ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಕೆಲ ಒಪ್ಪಂದಗಳು ಮತ್ತು ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

  • Delhi: Prime Minister Narendra Modi returns to India after concluding his three nation visit to France, United Arab Emirates and Bahrain. pic.twitter.com/PUiiUsWWQh

    — ANI (@ANI) August 26, 2019 " class="align-text-top noRightClick twitterSection" data=" ">

ಆಗಸ್ಟ್ 23 ರಂದು ಯುಎಇಗೆ ಭೇಟಿ ನೀಡಿದ ಮೋದಿಗೆ ಯುಎಇ ರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 'ಆರ್ಡರ್ ಆಫ್ ಜಾಯೆದ್' ಪ್ರಶಸ್ತಿ ಪ್ರದಾನ ಮಾಡಿದರು. ಉಭಯ ನಾಯಕರ ನಡುವೆ ದ್ವಿಪಕ್ಷೀಯ ಮಾತುಕತೆ ಕೂಡ ನಡೆಯಿತು.

ನಂತರ ಮೋದಿ ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಕೊನೆಯ ಹಂತದಲ್ಲಿ ಬಹ್ರೇನ್​ಗೆ ಭೇಟಿ ನೀಡಿದರು. ಆಗಸ್ಟ್ 25 ರಂದು ಬಹ್ರೇನ್​ನಲ್ಲಿ ಮೋದಿಗೆ 'ದಿ ಕಿಂಗ್ ಹಮದ್ ಆರ್ಡರ್ ಆಫ್ ದಿ ರೆನೈಸನ್ಸ್' ಪ್ರದಾನ ಮಾಡಿ ಗೌರವಿಸಲಾಯಿತು.

ಬಹ್ರೇನ್​ನಿಂದ ಫ್ರಾನ್ಸ್​ಗೆ ಭೇಟಿ ನೀಡಿದ ಮೋದಿ ಜಿ-7 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜೊತೆ ಕೂಡ ಮಾತುಕತೆ ನಡೆಸಿ ಇಂದು ತವರಿಗೆ ಮರಳಿದ್ದಾರೆ.

Intro:Body:

gandhi

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.