ಮಿರ್ಜಾಪುರ್(ಉತ್ತರಪ್ರದೇಶ): ರಾತ್ರಿ ಮಲಗಿದ್ದ ವೇಳೆ ಯುವಕನ ಜೀನ್ಸ್ ಪ್ಯಾಂಟ್ನೊಳಗೆ ವಿಷಪೂರಿತ ನಾಗರಹಾವು ಹೋಗಿರುವ ಘಟನೆ ಉತ್ತರಪ್ರದೇಶದ ಮಿರ್ಜಾಪುರ್ನಲ್ಲಿ ನಡೆದಿದೆ.
ವಿದ್ಯುತ್ ಕಂಬ ಮತ್ತು ತಂತಿ ಅಳವಡಿಕೆ ಕೆಲಸ ಮಾಡುತ್ತಿದ್ದ ಯುವಕ ಲಾವಲೇಶ್ ಕುಮಾರ್ ರಾತ್ರಿ ಅಡುಗೆ ತಯಾರಿಸಿ ಊಟ ಮಾಡಿದ ಬಳಿಕ ನಿದ್ರೆಗೆ ಜಾರಿದ್ದಾನೆ. ಈ ವೇಳೆ ಆತನ ಜೀನ್ಸ್ ಪ್ಯಾಂಟ್ನೊಳಗೆ ವಿಷಪೂರಿತ ಹಾವು ಹೋಗಿದೆ. ಬೆಳಗ್ಗೆ ಆತ ಎದ್ದಾಗ ಪ್ಯಾಂಟ್ನೊಳಗೆ ಹಾವು ಇರುವುದು ಆತನ ಅನುಭವಕ್ಕೆ ಬಂದಿದೆ.

ಇದರಿಂದ ಗಾಬರಿಗೊಂಡ ಯುವಕ ಬರೋಬ್ಬರಿ 7 ಗಂಟೆಗಳ ಕಾಲ ಸುಮ್ಮನೆ ನಿಂತುಕೊಂಡಿದ್ದ. ಆ ಬಳಿಕ ಕೆಲವರು ಹಾವು ಹಿಡಿಯುವ ವ್ಯಕ್ತಿಯನ್ನು ಕರೆದುಕೊಂಡು ಬಂದು ಅದನ್ನು ಹೊರತೆಗೆಸಿದ್ದಾರೆ. ಈ ವೇಳೆ ಆತನಿಗೆ ನಾಗರಹಾವು ಯಾವುದೇ ರೀತಿಯ ತೊಂದರೆ ಮಾಡಿಲ್ಲ ಎಂದು ತಿಳಿದು ಬಂದಿದೆ.
ಜೀನ್ಸ್ ಪ್ಯಾಂಟ್ನಲ್ಲಿ ಹಾವು ಹೋಗಿರುವ ಕಾರಣ ಬೆಳಗ್ಗೆ 7 ಗಂಟೆಯಿಂದ ಒಟ್ಟು 7ಗಂಟೆಯವರೆಗೆ ಅಲ್ಲಾಡದೆ ಕಂಬ ಹಿಡಿದುಕೊಂಡೇ ಯುವಕ ನಿಂತಿದ್ದಾನೆ. ಈ ಸುದ್ದಿ ಕೇಳಿದ ತಕ್ಷಣ ಸ್ಥಳದಲ್ಲಿ ಅನೇಕ ಜನರು ಜಮಾವಣೆಗೊಂಡಿದ್ದರು. ಜೊತೆಗೆ ಆತನಿಗೆ ಹಾವು ಕಚ್ಚಿದರೆ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗಿತ್ತು.