ನವದೆಹಲಿ: ಬಹುತೇಕ ಎಲ್ಲಾ ಕೇಂದ್ರ ಸಚಿವರು, ಜಂಟಿ ಕಾರ್ಯದರ್ಶಿಗಳು ಮತ್ತು ಉನ್ನತ ಹುದ್ದೆಯ ಅಧಿಕಾರಿಗಳು ಸೋಮವಾರದಿಂದ ತಮ್ಮ ಸಚಿವಾಲಯಗಳಿಗೆ ಮರಳಿದರು.
ಕೋವಿಡ್ 19 ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಲಾಕ್ಡೌನ್ನಿಂದಾಗಿ 19 ದಿನಗಳ ವಿರಾಮದ ಬಳಿಕ ಆಡಳಿತ ಯಂತ್ರ ಮತ್ತೆ ಚಾಲನೆಗೊಂಡಂತ್ತಾಗಿದೆ.
ಕೆಲ ದಿನಗಳ ಹಿಂದೆಯೇ ಕೆಲಸಕ್ಕೆ ಮರುಳುವಂತೆ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಸೂಚನೆ ರವಾನಿಸಲಾಗಿತ್ತು. ಏಪ್ರಿಲ್ 14ರ ಮಧ್ಯರಾತ್ರಿಗೆ 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅಂತ್ಯಗೊಳ್ಳುವ ಮೊದಲು ಸರಿಯಾದ ಕಾರ್ಯವಿಧಾನವನ್ನು ಸಿದ್ಧಪಡಿಸಬಹುದು.
ನೊವೆಲ್ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹರಡುವಿಕೆ ತಪ್ಪಿಸಲು ಲಾಕ್‌ಡೌನ್ ಅನ್ನು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಪ್ರತಿ ಸಚಿವಾಲಯದ ಮೂರನೇ ಒಂದು ಭಾಗದಷ್ಟು ಅಗತ್ಯ ಸಿಬ್ಬಂದಿ ತಮ್ಮ ಕೆಲಸವನ್ನು ಪುನರಾರಂಭಿಸಿದರು.
ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರು, ಪ್ರಧಾನ ಮಂತ್ರಿ ಕಚೇರಿಯ ರಾಜ್ಯ ಸಚಿವರು, ಸಿಬ್ಬಂದಿ; ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವ ಜಿತೇಂದ್ರ ಸಿಂಗ್ ಮೊದಲ ಬಾರಿಗೆ ಕನಿಷ್ಠ ಸಿಬ್ಬಂದಿಯೊಂದಿಗೆ ನಾರ್ತ್ ಬ್ಲಾಕ್‌ನಲ್ಲಿರುವ ತಮ್ಮ ಕಚೇರಿಗೆ ಬಂದರು.
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್, ಕ್ರೀಡಾ ಸಚಿವ ಕಿರೆನ್ ರಿಜಿಜು ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಕೂಡ ತಮ್ಮ ಕಚೇರಿಗಳಿಂದ ತಮ್ಮ ಕೆಲಸವನ್ನು ಪುನರಾರಂಭಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ ರಾತ್ರಿಯಂದು ಮೂರು ವಾರಗಳ ಲಾಕ್‌ಡೌನ್ ಘೋಷಿಸಿದಾಗಿನಿಂದ ಈ ಸಚಿವರು ಮನೆಯಿಂದ ಕೆಲಸ ಮಾಡುತ್ತಿದ್ದರು.
ಪ್ರಧಾನಮಂತ್ರಿಗಳ ನಿರ್ದೇಶನ ಅನುಸಾರ ಎಲ್ಲಾ ಸಚಿವರು ತಮ್ಮ ಕಚೇರಿಗಳಿಗೆ ಮರಳಿದ್ದಾರೆ ಎಂದು ಗೆಹ್ಲೋಟ್ ಮಾಧ್ಯಮಗಳಿಗೆ ತಿಳಿಸಿದರು.
ನಾರ್ತ್ ಬ್ಲಾಕ್, ಸೌತ್ ಬ್ಲಾಕ್ ಮತ್ತು ಶಾಸ್ತ್ರಿ ಭವನ ಕಚೇರಿಗಳಲ್ಲಿನ ಆಯಾ ಸಚಿವಾಲಯಗಳಲ್ಲಿ ಪ್ರವೇಶಿಸುವ ಮೊದಲು ಎಲ್ಲಾ ಮಂತ್ರಿಗಳು, ಮತ್ತು ಅಧಿಕಾರಿಗಳು ಮತ್ತು ಅವರ ಸಿಬ್ಬಂದಿ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಹೋಗಬೇಕಾಯಿತು.
ಮಾರಣಾಂತಿಕ ವೈರಸ್ ಹರಡುವುದನ್ನು ನಿಯಂತ್ರಿಸಲು ಸರ್ಕಾರವು ಕೋವಿಡ್-19 ಹಾಟ್‌ಸ್ಪಾಟ್‌ಗಳತ್ತ ಹಾಗೂ ಲಾಕ್‌ಡೌನ್ ತೆಗೆದುಹಾಕಿದ ನಂತರ ಆರ್ಥಿಕತೆಯನ್ನು ಪ್ರಾರಂಭಿಸುವಂತಹ ಏಕಕಾಲದ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.