ETV Bharat / bharat

ಭಾರತದ ಮಿನಿ ಬ್ರೆಜಿಲ್​​ನಲ್ಲಿ ಕಾಲ್ಚೆಂಡಿನ ಚಳಕ.. ವನಿತೆಯರ 'ಕಿಕ್'‌ ಪುಳಕ!! - Mini Brazil in Haryana

ಈ ಸಣ್ಣ ಹಳ್ಳಿ ಸಂಜು ಯಾದವ್, ಸಮರಿಕ್ ಜಖರ್, ದೀಪಿಕಾ ಸಮೌತಾ, ಮುನೇಶ್ ರಾವ್, ಮಂಜು ಕಸ್ವಾನ್ ಮತ್ತು ಪೂನಂ ಶರ್ಮಾ ಅವರಂತಹ ಅದ್ಭುತ ಅಂತಾರಾಷ್ಟ್ರೀಯ ಆಟಗಾರರನ್ನು ದೇಶಕ್ಕೆ ಕೊಡುಗೆ ನೀಡದೆ. ಈ ಹಳ್ಳಿಗರ ಫುಟ್ಬಾಲ್​​ ಕ್ರೇಜ್​ಗೆ ಮನಸೋತ ರಾಜ್ಯ ಸರ್ಕಾರವು ಇಲ್ಲಿ ಇಬ್ಬರು ಫುಟ್ಬಾಲ್​ ತರಬೇತುದಾರರನ್ನು ಪ್ರತ್ಯೇಕವಾಗಿ ನೇಮಿಸಿದೆ..

Mini Brazil in Haryana
ಮಿನಿ ಬ್ರೆಜಿಲ್​​ನಲ್ಲಿ ಕಾಲ್ಚೆಂಡಿನ ಚಳಕ
author img

By

Published : Nov 30, 2020, 6:11 AM IST

ಭಿವಾನಿ : ಹರಿಯಾಣದ ಈ ಹಳ್ಳಿಯನ್ನು ದೇಶದ 'ಮಿನಿ ಬ್ರೆಜಿಲ್' ಎಂದು ಕರೆಯಲಾಗುತ್ತದೆ. ಇಲ್ಲಿ ಪ್ರತಿ ಮನೆಯಲ್ಲೂ ಮಹಿಳಾ ಫುಟ್ಬಾಲ್​​ ಆಟಗಾರರಿದ್ದಾರೆ. ಹರಿಯಾಣದ ಭಿವಾನಿ ಜಿಲ್ಲೆಯ ಅಲಖ್​ಪುರ ಎಂಬ ಸಣ್ಣ ಹಳ್ಳಿಗೆ ಭೇಟಿ ನೀಡಿದರೆ ಅಲ್ಲೊಂದು ಅದ್ಭುತ ಫುಟ್ಬಾಲ್​​ ಲೋಕವನ್ನೇ ಕಾಣಬಹುದು.

ಮಕ್ಕಳು, ಯುವಕರು, ಮಧ್ಯವಯಸ್ಕರು ಮತ್ತು ವೃದ್ಧರು ಎಲ್ಲರೂ ಫುಟ್ಬಾಲ್​ ಆಡುತ್ತಾರೆ. ಇದೇ ಈ ಗ್ರಾಮವನ್ನು ‘ಮಿನಿ ಬ್ರೆಜಿಲ್’ ಎಂದು ಕರೆಯುತ್ತಾರೆ. ಈ ಹಳ್ಳಿಯಲ್ಲಿ ನಿತ್ಯ ಬೆಳಗ್ಗೆ ಒಂದು ಕಿಕ್‌ನಿಂದ ಪ್ರಾರಂಭವಾಗಿ ಮತ್ತು ರಾತ್ರಿ ಸಹ ಕಿಕ್‌ನಿಂದಲೇ ಕೊನೆಗೊಳ್ಳುತ್ತವೆ. ಈ ಹಳ್ಳಿಗರ ಫುಟ್ಬಾಲ್​​ ಕ್ರೇಜ್​ಗೆ ಮನಸೋತ ರಾಜ್ಯ ಸರ್ಕಾರವು ಇಲ್ಲಿ ಇಬ್ಬರು ಫುಟ್ಬಾಲ್​ ತರಬೇತುದಾರರನ್ನು ಪ್ರತ್ಯೇಕವಾಗಿ ನೇಮಿಸಿದೆ.

ಮಿನಿ ಬ್ರೆಜಿಲ್​​ನಲ್ಲಿ ಕಾಲ್ಚೆಂಡಿನ ಚಳಕ

2009ರಿಂದ ಈ ಹಳ್ಳಿಯಲ್ಲಿ ಫುಟ್ಬಾಲ್​​ ಕ್ರೇಜ್​ ಪ್ರಾರಂಭವಾಗಿದೆ. ಈ ಹಳ್ಳಿಯ 11 ಹುಡುಗಿಯರು ತಂಡವನ್ನು ರಚಿಸಿ ಹಳ್ಳಿಯ ಶಾಲೆಯಲ್ಲಿ ಫುಟ್ಬಾಲ್​ ಆಡಲು ಪ್ರಾರಂಭಿಸಿದರು. ಅವರ ಶಿಕ್ಷಕ ಗೋವರ್ಧನ್ ಶರ್ಮಾ ಇದನ್ನು ಗಮನಿಸಿದರು. ಹುಡುಗಿಯರ ಪ್ರತಿಭೆ ನೋಡಿ, ಅವರು ಸಾಕರ್​ ಆಡುವ ಹುಡುಗಿಯರಿಗೆ ತರಬೇತಿ ನೀಡಲು ಪ್ರಾರಂಭಿಸಿದರು. ಇದರಿಂದಾಗಿ ಈ ಗ್ರಾಮದ ಹುಡುಗಿಯರು ರಾಷ್ಟ್ರಮಟ್ಟದಲ್ಲಿ ಪದಕ ಗಳಿಸಲು ಕಾರಣವಾಯಿತು. ಆ ಒಂದು ಪದಕ ಅಲಖ್‌ಪುರ ಗ್ರಾಮದ ಮಕ್ಕಳಲ್ಲಿ ಫುಟ್ಬಾಲ್​ನ ಕ್ರೇಜ್​ ಸೃಷ್ಟಿಗೆ ಕಾರಣವಾಯಿತು. ಇಂದು ಈ ಗ್ರಾಮವು ಸುಮಾರು 200 ರಾಷ್ಟ್ರೀಯ ಆಟಗಾರರನ್ನು ಸಿದ್ಧಪಡಿಸಿದೆ.

ಈ ಸಣ್ಣ ಹಳ್ಳಿ ಸಂಜು ಯಾದವ್, ಸಮರಿಕ್ ಜಖರ್, ದೀಪಿಕಾ ಸಮೌತಾ, ಮುನೇಶ್ ರಾವ್, ಮಂಜು ಕಸ್ವಾನ್ ಮತ್ತು ಪೂನಂ ಶರ್ಮಾ ಅವರಂತಹ ಅದ್ಭುತ ಅಂತಾರಾಷ್ಟ್ರೀಯ ಆಟಗಾರರನ್ನು ದೇಶಕ್ಕೆ ಕೊಡುಗೆ ನೀಡದೆ. ‘ಖೇಲೋ ಇಂಡಿಯಾ’ ಕಾರ್ಯಕ್ರಮದಡಿ ಈ ಗ್ರಾಮದ 12 ಬಾಲಕಿಯರು, ಅಂಡರ್ -17 ಮತ್ತು 21 ವರ್ಷದೊಳಗಿನವರ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ.

ಇಂದು ಈ ಗ್ರಾಮದ ಸುಮಾರು 8 ಬಾಲಕಿಯರನ್ನು ಹಿರಿಯ ವಿಭಾಗದಲ್ಲಿ ಮತ್ತು ಭಾರತೀಯ ಸಾಕರ್​ ತಂಡದ ಅಂಡರ್ -17ಗೆ ಆಯ್ಕೆ ಮಾಡಲಾಗಿದೆ. ಅಷ್ಟೇ ಅಲ್ಲ, 2015-16 ಮತ್ತು 2016-17ರಲ್ಲಿ ಈ ಗ್ರಾಮದ ತಂಡವೂ ಸುಬ್ರೋಟೋ ಕಪ್ ಗೆದ್ದಿದೆ.

ಸೋನಿಕಾ ಬಿಜ್ರಾನಿಯಾ ಕಳೆದ 6 ವರ್ಷಗಳಿಂದ ಈ ಗ್ರಾಮದಲ್ಲಿ ಮಹಿಳಾ ಫುಟ್ಬಾಲ್​ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಅಲಖ್​ಪುರ ಗ್ರಾಮದಲ್ಲಿ ಹತ್ತಿರದ ಪ್ರತಿಯೊಂದು ಹಳ್ಳಿಯ ಹುಡುಗಿಯರು ಇಲ್ಲಿ ಫುಟ್ಬಾಲ್​ ಆಡಲು ಬರುತ್ತಾರೆ ಎಂದು ಸೋನಿಕಾ ಹೇಳುತ್ತಾರೆ.

ಹಳ್ಳಿಯ ಆಟಗಾರರಿಗಾಗಿ, ಕ್ರೀಡಾ ಸಾಮಗ್ರಿಗಳು, ಬೂಟುಗಳು, ಟ್ರ್ಯಾಕ್ ಸೂಟ್ ಅಥವಾ ಇತರ ವಸ್ತುಗಳನ್ನು ಖರೀದಿಸಲು ಗ್ರಾಮದ ಜನರು ಹಣವನ್ನು ದಾನ ಮಾಡುತ್ತಾರೆ ಮತ್ತು ಇತರ ದಾನಿಗಳಿಂದ ಹಣವನ್ನು ಸಂಗ್ರಹಿಸುತ್ತಾರೆ. ಆಟಗಾರರು ಪದಕ ಗೆದ್ದು, ಹಳ್ಳಿಗೆ ಹಿಂದಿರುಗಿದಾಗ ಇಡೀ ಗ್ರಾಮವು ಸಂಭ್ರಮಿಸುತ್ತದೆ.

ಈ ಹಳ್ಳಿಯ ಹುಡುಗಿಯರು ಕಾಲ್ಚೆಂಡಿನ ಆಟವನ್ನು ಆಡುವ ಮೂಲಕ ಪದಕಗಳನ್ನು ಗೆದ್ದಿದ್ದಾರೆ ಮಾತ್ರವಲ್ಲದೇ ಸರ್ಕಾರಿ ಉದ್ಯೋಗವನ್ನೂ ಪಡೆದಿದ್ದಾರೆ. ಸರ್ಕಾರದ ‘ಮೆಡಲ್ ಲಾವೊ, ನೌಕ್ರಿ ಪಾವೊ’ ನೀತಿಯಡಿಯಲ್ಲಿ, ಇಲ್ಲಿಂದ ಅನೇಕ ಆಟಗಾರರು ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಶೀಘ್ರದಲ್ಲೇ ಈ ಹಳ್ಳಿಯ ಮಕ್ಕಳು ಸಾಕರ್​ ಕ್ಷೇತ್ರದಲ್ಲಿ ವಿಶ್ವದಾದ್ಯಂತ ವಿಜಯ ಪತಾಕೆ ಹಾರಿಸಲು ಸಜ್ಜಾಗುತ್ತಿದ್ದಾರೆ. ಇಲ್ಲಿರುವ ಪ್ರತಿ ಹುಡುಗಿಯ ಪ್ರಪಂಚವು 'ಗೋಲ್ ಪೋಸ್ಟ್' ಅನ್ನು ಗುರಿಯಾಗಿರಿಸಿಕೊಳ್ಳುತ್ತದೆ. ಅವರ ಗುರಿ ಅಂತಾರಾಷ್ಟ್ರೀಯ ಫುಟ್ಬಾಲ್​ ನಲ್ಲಿ ಮಿಂಚುವುದು. ಈ ಎಲ್ಲ ಫುಟ್ಬಾಲ್​​ ಪ್ರತಿಭೆಗಳಿಗೆ ಆಲ್​ ದಿ ವೆರಿ ಬೆಸ್ಟ್​.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.