ನವದೆಹಲಿ : ಲಡಾಖ್‌ನ ಗಡಿಯಲ್ಲಿ ಭಾರತ-ಚೀನಾ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಿಕೊಳ್ಳಲು ಇದೀಗ ಉಭಯ ದೇಶಗಳು ಸಜ್ಜಾಗಿದ್ದು, ಇಂದು ಮಹತ್ವದ ಮಾತುಕತೆ ನಡೆಸಲಿವೆ.
ಮಾತುಕತೆ ನಡೆಸಲು ಭಾರತ ಚೀನಾ ಸೇನೆಗೆ ಆಹ್ವಾನ ನೀಡಿದ್ದು, ಹೀಗಾಗಿ ಮೊಲ್ಡೊದಲ್ಲಿ ಭಾರತ-ಚೀನಾ ಮಿಲಿಟರಿ ಕಮಾಂಡರ್‌ಗಳ ನಡುವೆ ಇಂದು ಗಡಿ ವಿಚಾರವಾಗಿ ಮಾತುಕತೆ ನಡೆಯಲಿದೆ ಎಂದು ವರದಿಯಾಗಿದೆ.
ಭಾತತದ ಪರ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಸೇರಿದಂತೆ 14 ಕಮಾಂಡರ್ಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಪೀಪಲ್ಸ್ ಲಿಬರೇಶನ್ ಆರ್ಮಿಯ ದಕ್ಷಿಣ ಕ್ಸಿನ್‌ಜಿಯಾಂಗ್ ಮಿಲಿಟರಿ ಪ್ರದೇಶದ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಈ ಹಿಂದೆ ಉಭಯ ದೇಶಗಳ ನಡುವೆ ಡೋಕ್ಲಾಮ್ ಬಿಕ್ಕಟ್ಟು ಉದ್ಭವಿಸಿದ್ದ ವೇಳೆ ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳಲಾಗಿತ್ತು. ಸದ್ಯ ಲಡಾಖ್‌ನ ಗಡಿ ನಿಯಂತ್ರಣ ರೇಖೆ ಮತ್ತು ಉತ್ತರ ಸಿಕ್ಕಿಂನ ಅನೇಕ ಕಡೆಗಳಲ್ಲಿ ಉಭಯ ದೇಶಗಳ ನಡುವೆ ಗಡಿ ಸಮಸ್ಯೆ ಉದ್ಭವವಾಗಿದೆ.