ETV Bharat / bharat

ನೋಟ್​ ಬ್ಯಾನ್​ ನಿಷೇಧಕ್ಕೆ ಭಾರೀ ಟೀಕೆ... ನೊಬೆಲ್​ ಪುರಸ್ಕೃತ ಬ್ಯಾನರ್ಜಿ ಬಗ್ಗೆ ನಿಮಗೇನು ಗೊತ್ತು!? - ಪ್ರಧಾನಿ ನರೇಂದ್ರ ಮೋದಿ

ಭಾರತೀಯ ಮೂಲದ ಅಭಿಜಿತ್​ ಬ್ಯಾನರ್ಜಿಗೆ ಪ್ರಸಕ್ತ ಸಾಲಿನ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್​ ಪ್ರಶಸ್ತಿ ಲಭ್ಯವಾಗಿದ್ದು, ಭಾರತದಲ್ಲೇ ಹುಟ್ಟಿ ಬೆಳೆದ ಅವರ ಮಾಹಿತಿ ಇಲ್ಲಿದೆ.

ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ
author img

By

Published : Oct 14, 2019, 5:43 PM IST

Updated : Oct 14, 2019, 6:00 PM IST

ನವದೆಹಲಿ: ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಅವರಿಗೆ ಪ್ರಸಕ್ತ ಸಾಲಿನ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್​ ಪ್ರಶಸ್ತಿ ಸಿಕ್ಕಿದ್ದು, ಜಾಗತಿಕ ಬಡತನವನ್ನು ಹೋಗಲಾಡಿಸುವ ಪ್ರಾಯೋಗಿಕ ವಿಧಾನ ಮಂಡಿಸಿದ್ದಕ್ಕಾಗಿ ಅವರಿಗೆ ಈ ಗೌರವ ಲಭಿಸಿದೆ.

ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ

21 ಫೆಬ್ರವರಿ 1961ರಲ್ಲಿ ಕೋಲ್ಕತ್ತಾದಲ್ಲಿ ಜನಸಿರುವ ಬ್ಯಾನರ್ಜಿ ವ್ಯಾಸಂಗ ಮಾಡಿದ್ದು ಭಾರತದಲ್ಲೇ. ಆರಂಭದ ದಿನಗಳಲ್ಲಿ ಪಾಯಿಂಟ್​ ಸ್ಕೂಲ್​ ಮತ್ತು ಪ್ರೆಸಿಡೆನ್ಸಿ ಕಾಲೇಜ್​​ನಲ್ಲಿ ವ್ಯಾಸಂಗ ಮಾಡಿದ್ದ ಇವರು, 1981ರಲ್ಲಿ ಕ್ಯಾಲಿಕಟ್​​ ವಿಶ್ವವಿದ್ಯಾಲಯದ ಪ್ರೆಸಿಡೆನ್ಸಿ ಕಾಲೇಜ್​​ನಿಂದ ಬಿಎಸ್ಸಿ ಪದವಿ ಪಡೆದುಕೊಳ್ಳುತ್ತಾರೆ. ತದನಂತರ ಹಾರ್ವರ್ಡ್​ ವಿಶ್ವವಿದ್ಯಾಲಯದಿಂದ 1988ರಲ್ಲಿ ಪಿಹೆಚ್​ಡಿ ಪಡೆದುಕೊಂಡಿದ್ದು, ಅದಕ್ಕೂ ಮೊದಲು 1983ರಲ್ಲಿ ನವದೆಹಲಿಯ ಜವಾಹರ್​ಲಾಲ್​ ನೆಹರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಾಸ್​ ಮಾಡಿದ್ದಾರೆ. ಅಭಿಜಿತ್ ಬ್ಯಾನರ್ಜಿ ಅವರ ತಂದೆ-ತಾಯಿ ಇಬ್ಬರೂ ಅರ್ಥಶಾಸ್ತ್ರಜ್ಞರೇ ಎಂಬುದು ಗಮನಾರ್ಹ ಸಂಗತಿ.

ಸದ್ಯ ಅಮೆರಿಕ ಮೂಲದ ಎಂಐಟಿಯಲ್ಲಿ ಫೋರ್ಡ್​ ಪೌಂಡೇಶನ್​ ಇಂಟರ್​ನ್ಯಾಷನಲ್​ ಅರ್ಥಶಾಸ್ತ್ರಜ್ಞ ವಿಭಾಗದ ಪ್ರೊಫೆಸರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ನೋಟ್​​ ಬ್ಯಾನ್​ ಮಾಡಿದ್ದಾಗ ಅದನ್ನು ಬ್ಯಾನರ್ಜಿ ಟೀಕೆ ಸಹ ಮಾಡಿದ್ದರು. ಭಾರತದಲ್ಲಿನ ಡಿಮಾನಿಟೈಸೆಷನ್ ನಿರ್ಧಾರದ ಬಗ್ಗೆ ನನಗೆ ಅರ್ಥವೇ ಆಗಿಲ್ಲ. ಹೊಸ 2000 ರೂ ಮುಖಬೆಲೆಯ ನೋಟು ಜಾರಿಗೆ ತಂದಿರುವ ನಿರ್ಧಾರದ ಹಿಂದಿನ ಉದ್ದೇಶವೇ ನನಗೆ ತಿಳಿದಿಲ್ಲ ಎಂದಿದ್ದರು.

  • Hearty congratulations to Abhijit Banerjee, alumnus of South Point School & Presidency College Kolkata, for winning the Nobel Prize in Economics. Another Bengali has done the nation proud. We are overjoyed.

    জয় হিন্দ । জয় বাংলা ।

    — Mamata Banerjee (@MamataOfficial) October 14, 2019" class="align-text-top noRightClick twitterSection" data="">

ಮಗನಿಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಅಭಿಜಿತ್​ ಬ್ಯಾನರ್ಜಿ ಅವರ ತಾಯಿ ನಿರ್ಮಲಾ ಬ್ಯಾನರ್ಜಿ ಸಂತಸ ವ್ಯಕ್ತಪಡಿಸಿದ್ದಾರೆ. ಅವರಿಗೆ ನೊಬೆಲ್​ ಪ್ರಶಸ್ತಿ ಸಿಕ್ಕಿರುವುದು ನಮ್ಮ ಕುಟುಂಬಕ್ಕೆ ಸಿಕ್ಕಿರುವ ದೊಡ್ಡ ಗೆಲುವು ಎಂದಿದ್ದಾರೆ.

ಇವರಿಗೆ ನೊಬೆಲ್​ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​,ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಸಿಪಿಐ(ಎಂ) ಮುಖಂಡ ಸೀತಾರಾಮ್​ ಯಚೂರಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

  • Big day for every Indian.

    Heartiest congratulations to eminent economist Abhijit Banerjee for being among the winners of this year’s Nobel prize for Economics. Work on poverty alleviation gets highest endorsement.

    — Arvind Kejriwal (@ArvindKejriwal) October 14, 2019 " class="align-text-top noRightClick twitterSection" data=" ">

Intro:Body:

ನೋಟ್​ ಬ್ಯಾನ್​ ನಿಷೇಧಕ್ಕೆ ಭಾರೀ ಟೀಕೆ... ನೊಬೆಲ್​ ಪುರಸ್ಕೃತ ಬ್ಯಾನರ್ಜಿ ಬಗ್ಗೆ ನಿಮಗೇನು ಗೊತ್ತು!? 

ನವದೆಹಲಿ: ಭಾರತೀಯ ಮೂಲದ ಅಮೆರಿಕಾದ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಅವರಿಗೆ ಪ್ರಸಕ್ತ ಸಾಲಿನ ಅರ್ಥಶಾಸ್ತ್ರದ ವಿಭಾಗದಲ್ಲಿ ನೊಬೆಲ್​ ಪ್ರಶಸ್ತಿ ಸಿಕ್ಕಿದ್ದು, ಜಾಗತಿಕ ಬಡತನವನ್ನು ಹೋಗಲಾಡಿಸುವ ಪ್ರಾಯೋಗಿಕ ವಿಧಾನ ಮಂಡಿಸಿದ್ದಕ್ಕಾಗಿ ಅವರಿಗೆ ಈ ಗೌರವ ಲಭಿಸಿದೆ.

21 ಫೆಬ್ರವರಿ 1961ರಲ್ಲಿ ಕೋಲ್ಕತ್ತಾದಲ್ಲಿ ಜನಸಿರುವ ಬ್ಯಾನರ್ಜಿ ವ್ಯಾಸಂಗ ಮಾಡಿದ್ದು ಭಾರತದಲ್ಲೇ. ಆರಂಭದ ದಿನಗಳಲ್ಲಿ ಪಾಯಿಂಟ್​ ಸ್ಕೂಲ್​ ಮತ್ತು ಪ್ರೆಸಿಡೆನ್ಸಿ ಕಾಲೇಜ್​​ನಲ್ಲಿ ವ್ಯಾಸಂಗ ಮಾಡಿದ್ದ ಇವರು 1981ರಲ್ಲಿ ಕ್ಯಾಲಿಕಟ್​​ ವಿಶ್ವವಿದ್ಯಾಲಯದ ಪ್ರೆಸಿಡೆನ್ಸಿ ಕಾಲೇಜ್​​ನಿಂದ ಬಿಎಸ್ಸಿ ಪದವಿ ಪಡೆದುಕೊಳ್ಳುತ್ತಾರೆ.ತದನಂತರ ಹಾರ್ವರ್ಡ್​ ವಿಶ್ವವಿದ್ಯಾಲಯದಿಂದ 1988ರಲ್ಲಿ ಪಿಹೆಚ್​ಡಿ ಪಡೆದುಕೊಂಡಿರುವ ಇವರು, 1983ರಲ್ಲಿ ನವದೆಹಲಿಯ ಜವಾಹರ್​ಲಾಲ್​ ನೆಹರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಾಸ್​ ಮಾಡಿದ್ದಾರೆ. ಅಭಿಜಿತ್ ಬ್ಯಾನರ್ಜಿ ಅವರ ತಂದೆ ತಾಯಿ ಇಬ್ಬರೂ ಅರ್ಥಶಾಸ್ತ್ರಜ್ಞರೇ ಎಂಬುದು ಗಮನಾರ್ಹ ಸಂಗತಿ.

ಸದ್ಯ ಅಮೆರಿಕ ಮೂಲದ ಎಂಐಟಿಯಲ್ಲಿ ಫೋರ್ಡ್​ ಪೌಂಡೇಶನ್​ ಇಂಟರ್​ನ್ಯಾಷನಲ್​ ಅರ್ಥಶಾಸ್ತ್ರಜ್ಞ ವಿಭಾಗದ ಪ್ರೊಫೆಸರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ನೋಟ್​​ ಬ್ಯಾನ್​ ಮಾಡಿದ್ದಾಗ ಅದನ್ನು ಬ್ಯಾನರ್ಜಿ ಟೀಕೆ ಸಹ ಮಾಡಿದ್ದರು. ಸದ್ಯ ಭಾರತದಲ್ಲಿನ ಡಿಮಾನಿಟೈಸೆಷನ್ ನಿರ್ಧಾರದ ಬಗ್ಗೆ ನನಗೆ ಅರ್ಥವೇ ಆಗಿಲ್ಲ. ಹೊಸ 2000 ರೂ ಮುಖಬೆಲೆಯ ನೋಟು ಜಾರಿಗೆ ತಂದಿರುವ ಉದ್ದೇಶ ನನಗೆ ತಿಳಿದಿಲ್ಲ ಎಂದಿದ್ದರು. 

ಇವರಿಗೆ ನೊಬೆಲ್​ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​,ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಸಿಪಿಐ(ಎಂ) ಮುಖಂಡ ಸೀತಾರಾಮ್​ ಯಚೂರಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. 

Conclusion:
Last Updated : Oct 14, 2019, 6:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.