ನವದೆಹಲಿ: ಕಳೆದ ವರ್ಷ ನಡೆದ ಅಂಡರ್-19 ವಿಶ್ವಕಪ್ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ವೇಗಿ ಕಮಲೇಶ್ ನಾಗರಕೋಟಿ ಹಾಗೂ ಶಿವಂ ಮಾವಿ ಈ ಸಲವೂ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಬಿದ್ದಿದ್ದಾರೆ.
ಅಂಡರ್-19 ವಿಶ್ವಕಪ್ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಈ ಪ್ರತಿಭೆಗಳು ಇಂಡಿಯನ್ ಪ್ರೀಮಿಯರ್ ಲೀಗ್ಗೆ ಆಯ್ಕೆಯಾಗಿದ್ದರು. ಆದರೆ ಗಾಯದ ಸಮಸ್ಯೆಯಿಂದ ನಾಗರಕೋಟಿ ಟೂರ್ನಿ ಆರಂಭಕ್ಕೂ ಮುನ್ನವೇ ತಂಡದಿಂದ ಹೊರಬಿದ್ದಿದ್ದರು. ಅದಾದ ಬಳಿಕ ಕೆಕೆಆರ್ ಪರ 9 ಪಂದ್ಯಗಳನ್ನಾಡಿದ್ದ ಮಾವಿ ಕೂಡ ಟೂರ್ನಿಯಿಂದ ಹೊರಗುಳಿದಿದ್ದರು. ಅದಾದ ಬಳಿಕ ಯಾವುದೇ ಟೂರ್ನಿಗಳಲ್ಲಿ ಈ ಆಟಗಾರರು ಕಾಣಿಸಿಕೊಂಡಿರಲಿಲ್ಲ. ಈ ಸಲದ ಟೂರ್ನಿಯಲ್ಲೂ ಕಮಲೇಶ್ ನಾಗರಕೋಟಿ ಹಾಗೂ ಶಿವಂ ಮಾವಿ ಗಾಯದ ಸಮಸ್ಯೆಯಿಂದಾಗಿ ಹೊರಬಿದ್ದಿದ್ದಾರೆ.
ಕಳೆದ ವಿಶ್ವಕಪ್ನಲ್ಲಿ ಈ ಇಬ್ಬರು ಬೌಲರ್ಸ್ ಗಂಟೆಗೆ 140 ಕೀ.ಮೀ.ಗಿಂತಲೂ ಹೆಚ್ಚಿನ ವೇಗದಲ್ಲಿ ದಾಳಿ ನಡೆಸುವ ಮೂಲಕ ಪ್ರಮುಖವಾಗಿ ಗಮನ ಸೆಳೆದಿದ್ದರು. ತಂಡದ ವೇಗದ ಯುವ ಬೌಲರ್ ಕಮಲೇಶ್ ನಾಗರಕೋಟಿ ಗಂಟೆಗೆ 146 ಕೀ.ಮೀ. ವೇಗದಲ್ಲಿ ಎಸೆಯುವ ಮೂಲಕ ಭವಿಷ್ಯದ ತಾರೆಯಾಗುವ ಸೂಚನೆ ನೀಡಿದ್ದರು.
ಇದೀಗ ಕೇರಳದ ವೇಗದ ಬೌಲರ್ ಸಂದೀಪ್ ವಾರಿಯರ್ ಕೆಕೆಆರ್ ತಂಡ ಸೇರಿದ್ದಾರೆ. ಇವರು ಹರಾಜು ಪ್ರಕ್ರಿಯೆಯಲ್ಲಿ ಅನ್ಸೋಲ್ಡ್ ಆಗಿದ್ದರು. ಸೈಯದ್ ಮುಷ್ತಾಕ್ ಅಲಿಯಲ್ಲಿ ಐದು ವಿಕೆಟ್ ಪಡೆದುಕೊಂಡಿದ್ದಾರೆ. ಈಗಾಗಲೇ ಸಂದೀಪ್ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿರುವ ಅನುಭವ ಹೊಂದಿದ್ದಾರೆ.