ETV Bharat / bharat

ನಾಲ್ವರು ರೈತನಾಯಕರ ಹತ್ಯೆಗೆ ಸಂಚು: ಮುಸುಕುಧಾರಿಯಿಂದ ಆಘಾತಕಾರಿ ಮಾಹಿತಿ ಬಹಿರಂಗ - ಮುಸುಕುದಾರಿ ವ್ಯಕ್ತಿಯಿಂದ ರೈತರ ಹತ್ಯೆಗೆ ಸಂಚು

ಜನವರಿ 26 ರ ಟ್ರ್ಯಾಕ್ಟರ್​ ರ‍್ಯಾಲಿಗೆ ಅಡ್ಡಿಪಡಿಸಿ, ನಾಲ್ವರು ರೈತರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಮುಸುಕುಧಾರಿ ವ್ಯಕ್ತಿವೋರ್ವ ಆಘಾತಕಾರಿ ಮಾಹಿತಿಯನ್ನು ಹೊರ ಹಾಕಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Masked man alleges plot to shoot 4 farmer leaders, disrupt Jan 26 tractor rally
ನಾಲ್ವರು ರೈತನಾಯಕರ ಹತ್ಯೆಗೆ ಸಂಚು
author img

By

Published : Jan 23, 2021, 7:50 AM IST

ನವದೆಹಲಿ: ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಮುಸುಕುಧಾರಿ ವ್ಯಕ್ತಿಯನ್ನು ಮಾಧ್ಯಮದವರ ಮುಂದೆ ಹಾಜರು ಪಡಿಸಿದ್ದು, ಆತ ನಾಲ್ವರು ರೈತ ಮುಖಂಡರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ.

'ರೈತರ ಆಂದೋಲನಕ್ಕೆ ಅಡ್ಡಿಪಡಿಸಲು ಏಜೆನ್ಸಿಗಳು ಪ್ರಯತ್ನಿಸುತ್ತಿವೆ' ಎಂದು ರೈತ ಮುಖಂಡ ಕುಲವಂತ್ ಸಿಂಗ್ ಸಂಧು ಅವರು ಸಿಂಘು ಗಡಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ.

ಈ ವಿಷಯ ಬಹಿರಂಗವಾದರೆ ನನ್ನ ಮತ್ತು ನಮ್ಮ ತಂಡದ ಇತರೆ ಸದಸ್ಯರ ಕುಟುಂಬಸ್ಥರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮುಖವಾಡ ಧರಿಸಿದ ವ್ಯಕ್ತಿ ಹೇಳಿದ್ದಾನೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮುಸುಕುಧಾರಿ ವ್ಯಕ್ತಿ, "ಜನವರಿ 26 ರ ರ‍್ಯಾಲಿಯಲ್ಲಿ ರೈತರು ಮುಂದೆ ಸಾಗದಂತೆ ತಡೆಯಲು ನಾವು ಯೋಜಿಸಿದ್ದೆವು. ಅವರು ನಿಲ್ಲದಿದ್ದರೆ, ನಾವು ಮೊದಲು ಗಾಳಿಯಲ್ಲಿ ಗುಂಡು ಹಾರಿಸಲು ಯೋಜಿಸಿದ್ದೆವು, ನಂತರ ನಮ್ಮ ತಂಡದ ಇತರ ಸದಸ್ಯರು ಹಿಂದಿನಿಂದ ಗುಂಡು ಹಾರಿಸಬೇಕಾಗಿತ್ತು. ಇದರಿಂದ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು, ರೈತರೇ ತಮ್ಮ ಮೇಲೆ ಗುಂಡು ಹಾರಿಸುತ್ತಿದ್ದಾರೆಂದು ಭಾವಿಸುತ್ತಾರೆ" ಎಂದಿದ್ದಾನೆ.

ಅಲ್ಲದೆ ನಮ್ಮದು ಇಬ್ಬರು ಮಹಿಳೆಯರು ಸೇರಿದಂತೆ 10 ಜನರ ತಂಡವಿದೆ ಎಂದು ಆರೋಪಿ ಹೇಳಿದ್ದಾನೆ. "ನಮ್ಮ ತಂಡಕ್ಕೆ ಇಲ್ಲಿ ಎರಡು ಸ್ಥಳಗಳಲ್ಲಿ ಶಸ್ತ್ರಾಸ್ತ್ರಗಳನ್ನು ನೀಡಲಾಯಿತು. ಜನವರಿ 26 ರ ರ‍್ಯಾಲಿಯಲ್ಲಿ, ರೈತರ ಗುಂಪುಗಳನ್ನು ಚದುರಿಸಲು ಪೊಲೀಸ್ ಸಮವಸ್ತ್ರ ಧರಿಸಿ ನಮ್ಮ ತಂಡದ ಅರ್ಧದಷ್ಟು ಜನರು ಹಾಜರಾಗಲು ಯೋಜಿಸಿದ್ದೆವು. ನಮಗೆ ನಾಲ್ವರ ಫೋಟೋಗಣನ್ನು ನೀಡಲಾಯಿತು, ಗುಂಡು ಹಾರಿಸಬೇಕಾದ ಜನರು ವೇದಿಕೆಯಲ್ಲಿರುತ್ತಿದ್ದರು. ನಮಗೆ ಈ ಆದೇಶ ನೀಡಿದ ವ್ಯಕ್ತಿ ಓರ್ವ ಪೋಲೀಸ್ ಅಧಿಕಾರಿ" ಎಂದು ಮುಸುಕುಧಾರಿ ಸ್ಫೋಟಕ ಮಾಹಿತಿ ನೀಡಿದ್ದಾನೆ.

"ನಾವು ಹಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಇತರ ಜನರಿದ್ದಾರೆ. ನಮ್ಮ ಕುಟುಂಬಗಳಿಗೆ ಈ ಬಗ್ಗೆ ಮಾಹಿತಿ ನೀಡಬಾರದು ಎಂದು ನಾನು ವಿನಂತಿಸುತ್ತೇನೆ. ಈ ಕೆಲಸ ಮಾಡಲು ನಮಗೆ ತಲಾ 10,000 ರೂ. ನೀಡಲಾಗಿತ್ತು" ಎಂದಿದ್ದಾನೆ.

ಜನವರಿ 26 ರ ರ‍್ಯಾಲಿಗೆ ಅಡ್ಡಿಪಡಿಸುವ ಸಾಧ್ಯತೆ ಶೇಖಡಾ 90 ರಷ್ಟಿದೆ ಎಂದು ವ್ಯಕ್ತಿ ಹೇಳಿದ್ದಾನೆ "ಅಡ್ಡಿಪಡಿಸುವ ಕಾರಣಕ್ಕಾಗಿ ಇಲ್ಲಿಗೆ ಬರುವ ಜನರ ಬಗ್ಗೆಯೂ ನಾನು ಮಾಹಿತಿ ನೀಡಿದ್ದೇನೆ. ಅವರೆಲ್ಲ ಬೂಟ್, ಟರ್ಬನ್ ಮತ್ತು ಜೀನ್ಸ್ ಧರಿಸುತ್ತಾರೆ. ಜನವರಿ 26 ರ ರ‍್ಯಾಲಿಗೆ ಬರುವ ಇತರ ಮಂದಿ ಪೊಲೀಸ್ ಸಮವಸ್ತ್ರದಲ್ಲಿ ಬರುತ್ತಾರೆ" ಎಂದು ಹೇಳಿದ್ದಾನೆ.

ಮುಸುಕುಧಾರಿ ವ್ಯಕ್ತಿಯಿಂದ ಆಘಾತಕಾರಿ ಮಾಹಿತಿ ಬಹಿರಂಗ

"ಜಾಟ್ ಸಮುದಾಯದ ಪ್ರತಿಭಟನೆ" ಸಮಯದಲ್ಲಿ ತನ್ನ ಪಾತ್ರವನ್ನು ವಿವರಿಸಿದ ವ್ಯಕ್ತಿ, "ಜಾಟ್ ಆಂದೋಲನದ ಸಮಯದಲ್ಲಿ ನಮ್ಮ ಏಕೈಕ ಪಾತ್ರವೆಂದರೆ ಪೊಲೀಸ್ ಸಮವಸ್ತ್ರ ಧರಿಸಿ ಲಾಠಿ ಚಾರ್ಜ್ ಮಾಡುವುದು. ಕಳೆದ ಎರಡು ದಿನಗಳಿಂದ ನಾವು ಸಕ್ರಿಯರಾಗಿದ್ದೇವೆ" ಎಂದಿದ್ದಾನೆ.

"ಒದಗಿಸಿದ ಶಸ್ತ್ರಾಸ್ತ್ರಗಳ ಮೇಲೆ ನಿಗಾ ಇಡುವುದು ನನ್ನ ಕರ್ತವ್ಯವಾಗಿತ್ತು. ಇತ್ತೀಚೆಗೆ ಕರ್ನಾಲ್‌ನಲ್ಲಿ ನಡೆದ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರ ರ‍್ಯಾಲಿಯಲ್ಲಿ ನಾವು ಲಾಠಿ ಚಾರ್ಜ್ ಮಾಡಿದ್ದೆವು. ಈ ಕೃತ್ಯಗಳನ್ನು ನಡೆಸಲು ನಾವು ಹೋಟೆಲ್ ಮತ್ತು ಢಾಬಾದಂತಹ ವಿವಿಧ ಸ್ಥಳಗಳಲ್ಲಿ ತರಬೇತಿ ಪಡೆಯುತ್ತಿದ್ದೆವು. ನಾವು ಕೊಲೆಗಾರರಲ್ಲ, ಆದರೆ ನಮಗೆ ಹಣದ ಅಗತ್ಯವಿರುವುದರಿಂದ ಇಂತಾ ಕೆಲಸ ಮಾಡುತ್ತಿದ್ದೆವು' ಎಂದಿದ್ದಾನೆ. ಸದ್ಯ ಮುಸುಕುಧಾರಿ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.