ETV Bharat / bharat

ಮನಮೋಹನ್ ಸಿಂಗ್​ ಆರೋಗ್ಯ ಸ್ಥಿರ... ಏಮ್ಸ್​​ ಆಸ್ಪತ್ರೆ ಮೂಲಗಳಿಂದ ಮಾಹಿತಿ! - ಏಮ್ಸ್​ ಆಸ್ಪತ್ರೆಯಲ್ಲಿ ಡಾ. ಸಿಂಗ್​

ಎದೆ ನೋವಿನ ಹಿನ್ನೆಲೆ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರನ್ನು ಏಮ್ಸ್​​ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

Manmohan Singh
Manmohan Singh
author img

By

Published : May 11, 2020, 9:54 AM IST

ನವದೆಹಲಿ: ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ, ಕಾಂಗ್ರೆಸ್ ನಾಯಕ ಡಾ. ಮನಮೋಹನ್ ಸಿಂಗ್​​ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್​) ಮೂಲಗಳು ಮಾಹಿತಿ ನೀಡಿವೆ.

ಎದೆನೋವು ಕಾಣಿಸಿಕೊಂಡಿದ್ದರಿಂದ 87 ವರ್ಷದ ಡಾ. ಸಿಂಗ್​ ಅವರನ್ನ ನಿನ್ನೆ ಏಮ್ಸ್​ ಆಸ್ಪತ್ರೆಗೆ ದಾಖಲು ಮಾಡಿ ಕಾರ್ಡಿಯೋ-ಥೊರಾಸಿಕ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಔಷಧ ನೀಡಿದ ಬಳಿಕ ಮನಮೋಹನ್​ ಸಿಂಗ್​ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಜ್ವರ ಕಾಣಿಸಿಕೊಳ್ಳಲು ಬೇರೆ ಏನಾದ್ರೂ ಕಾರಣಗಳಿರಬಹುದು ಎಂಬುದರ ಕುರಿತು ತಪಾಸಣೆ ನಡೆಸಲಾಗುತ್ತಿದ್ದು, ಉಳಿದಂತೆ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಏಮ್ಸ್​ ಮೂಲಗಳು ಮಾಹಿತಿ ನೀಡಿವೆ.

ಏಮ್ಸ್​​ನಲ್ಲಿ ಹೃದ್ರೋಗ ತಜ್ಞ ಡಾ. ನಿತೀಶ್​ ನಾಯ್ಕ್​​ ನೇತೃತ್ವದ ತಂಡ ಚಿಕಿತ್ಸೆ ನೀಡುತ್ತಿದ್ದು, ಈ ಹಿಂದೆ 2009ರಲ್ಲೂ ಇವರಿಗೆ ಹೃದಯದ ಬೈಪಾಸ್​ ಸರ್ಜರಿ ಮಾಡಲಾಗಿದೆ. 10 ವರ್ಷಗಳ ಕಾಲ ದೇಶದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿರುವ ಇವರು ಕಾಂಗ್ರೆಸ್​ನಿಂದ ಪ್ರಧಾನಿ ಹುದ್ದೆಗೆ ಆಯ್ಕೆಯಾಗಿದ್ದರು. 2004 ಮೇ 22ರಿಂದ 2014 ಮೇ 26ರವರೆಗೆ ಅಧಿಕಾರದಲ್ಲಿದ್ದು, ಸೇವೆ ಸಲ್ಲಿಸಿದ್ದಾರೆ. ಇದರ ಜೊತೆಗೆ ಕೇಂದ್ರ ಹಣಕಾಸು ಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.