ETV Bharat / bharat

ಕಟ್ಟಡದ ಅವಶೇಷಗಳಡಿ 10 ಗಂಟೆಗಳ ಕಾಲ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಿದ NDRF ಸಿಬ್ಬಂದಿ - Man rescued by NDRF at Bhivandi

ಆಯಸ್ಸು ಗಟ್ಟಿ ಇದ್ರೆ, ಆ ಯಮಧರ್ಮರಾಯ ಬಂದರೂ ಏನೂ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ಈ ವ್ಯಕ್ತಿ ಸಾಕ್ಷಿ. ಕುಸಿದ ಕಟ್ಟಡದ ಅವಶೇಷಗಳಡಿ ಸುಮಾರು 10 ಗಂಟೆಗಳ ಕಾಲ ಸಿಲುಕಿದ್ದ ವ್ಯಕ್ತಿಯನ್ನು ಎನ್​ಡಿಆರ್​ಎಫ್​ ಸಿಬ್ಬಂದಿ ರಕ್ಷಿಸಿದ್ದಾರೆ.

Man rescued by NDRF
ಭಿವಂಡಿ
author img

By

Published : Sep 26, 2020, 5:11 PM IST

ಥಾಣೆ(ಮಹಾರಾಷ್ಟ್ರ) : ಕೆಲ ದಿನಗಳ ಹಿಂದೆ ಇಲ್ಲಿಯ ಭಿವಂಡಿಯಲ್ಲಿ ಮೂರಂತಸ್ತಿನ ಕಟ್ಟಡ ಕುಸಿದು 40ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಆದ್ರೆ ಇದರ ನಡುವೆ ವ್ಯಕ್ತಿಯೊಬ್ಬ ಆಶ್ಚರ್ಯಕರ ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆ ವೇಳೆ ಬದುಕಿ ಬಂದಿದ್ದಾನೆ.

ಆಯಸ್ಸು ಗಟ್ಟಿ ಇದ್ರೆ, ಆ ಯಮಧರ್ಮರಾಯ ಬಂದರೂ ಏನೂ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ಈ ವ್ಯಕ್ತಿ ಸಾಕ್ಷಿ. ಕಟ್ಟಡ ಕುಸಿದು 40 ಜನ ಸಾವನ್ನಪ್ಪಿದ್ದರೂ, ಖಾಲಿದ್​ ಎಂಬ ವ್ಯಕ್ತಿಯ ಆಯಸ್ಸು ಮಾತ್ರ ಗಟ್ಟಿ ಇತ್ತು. ಕಟ್ಟಡದ ಅವಶೇಷಗಳಡಿ ಸುಮಾರು 10 ಗಂಟೆಗಳ ಕಾಲ ಸಿಲುಕಿದ್ದ ಈತನನ್ನು ಎನ್​ಡಿಆರ್​ಎಫ್​ ಸಿಬ್ಬಂದಿ ರಕ್ಷಿಸಿದ್ದಾರೆ.

ವ್ಯಕ್ತಿಯನ್ನು ರಕ್ಷಿಸಿದ NDRF ಸಿಬ್ಬಂದಿ

ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಈತ ವಿಡಿಯೋ ಕಾಲ್​ ಕೂಡಾ ಮಾಡಿದ್ದ. ಆ ವೇಳೆ ಕಟ್ಟಡದ ಕೆಲ ಅವಶೇಷಗಳು ತನ್ನ ಮೇಲೆ ಹೇಗೆ ಬಿತ್ತು ಎಂಬುದನ್ನು ಕೂಡಾ ಆತ ವಿವರಿಸಿದ್ದ. ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ವ್ಯಕ್ತಿ ಎಲ್ಲಿ ಸಿಲುಕಿದ್ದಾನೆ ಎಂಬುದನ್ನು ಪತ್ತೆ ಹಚ್ಚಿ ಆತನನ್ನು ರಕ್ಷಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.