ETV Bharat / bharat

ಆ್ಯಂಬುಲೆನ್ಸ್​ ಕೊಡದ ಆರೋಪ... ಮಗಳ ಶವ ಕೈಯಲ್ಲೇ ಹೊತ್ತು ಸಾಗಿದ ಅಪ್ಪ - ambulance

ತನ್ನ ಮಗಳ ಶವ ಸಾಗಿಸಲು ಆಸ್ಪತ್ರೆಯು ಆ್ಯಂಬುಲೆನ್ಸ್​ ಒದಗಿಸಿಲ್ಲ ಎಂದು ಆರೋಪಿಸಿ, ತಂದೆಯೇ ತನ್ನ ಮಗಳ ಶವವನ್ನು ಹೊತ್ತು ಸಾಗಿಸಿದ ಘಟನೆ ನೆರೆಯ ತೆಲಂಗಾಣದ ಕರೀಂನಗರ​ದಲ್ಲಿ ನಡೆದಿದೆ. ಆದರೆ ಈ ಆರೋಪವನ್ನು ಕರೀಂನಗರ ಸರ್ಕಾರಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳು ತಳ್ಳಿ ಹಾಕಿದ್ದಾರೆ.

Man carries child
author img

By

Published : Sep 3, 2019, 9:29 PM IST

ಕರೀಂನಗರ​(ತೆಲಂಗಾಣ): ಆಸ್ಪತ್ರೆಯು ತನ್ನ ಮಗಳ ಶವ ಸಾಗಿಸಲು ಆ್ಯಂಬುಲೆನ್ಸ್​ ಒದಗಿಸಿಲ್ಲ ಎಂದು ಆರೋಪಿಸಿ, ಸ್ವತಃ ತಂದೆಯೇ ತನ್ನ 7 ವರ್ಷದ ಮಗಳ ಶವವನ್ನು ಹೊತ್ತು ಸಾಗಿಸಿದ ಘಟನೆ ಕರೀಂನಗರ​ದಲ್ಲಿ ನಡೆದಿದೆ.

ಇಲ್ಲಿನ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆದರೆ, ಆಸ್ಪತ್ರೆಯ ವೈದ್ಯಾಧಿಕಾರಿ ಅಜಯ್​ ಕುಮಾರ್​ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಾಲಕಿಯನ್ನು ಕಳೆದ ಆಗಸ್ಟ್​ 31ರಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಎರಡೂ ಕಿಡ್ನಿಗಳ ವೈಫಲ್ಯದಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಸೆಪ್ಟೆಂಬರ್​ 1ರಂದು ಬಾಲಕಿ ಸಾವನ್ನಪ್ಪಿದ್ದಾಳೆ.

ಆದರೆ, ಬಾಲಕಿಯ ತಂದೆ ಆಸ್ಪತ್ರೆಗೆ ಯಾವುದೇ ವಿಷಯ ತಿಳಿಸದೇ ಮಗಳ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಅವರು ನಮ್ಮಲ್ಲಿ ಆ್ಯಂಬುಲೆನ್ಸ್​ ಕೂಡಾ ಕೇಳಿಲ್ಲ ಎಂದು ಅಜಯ್ ಹೇಳಿದ್ದಾರೆ.

Intro:Body:

Karimnagar

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.