ಭೋಪಾಲ್: ಹಾರಾಟ ನಡೆಸಲು ಸಿದ್ಧವಾಗಿದ್ದ ಚಾಪರ್ವೊಂದರ ಮುಂಭಾಗಕ್ಕೆ ಹಾನಿಗೊಳಿಸಿರುವ ವ್ಯಕ್ತಿಯೋರ್ವ ತದನಂತರ ಹೆಲಿಕಾಪ್ಟರ್ ಮುಂದೆ ಧರಣಿ ಕುಳಿತುಕೊಂಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ.
ಏಕಾಏಕಿಯಾಗಿ ಭೋಪಾಲ್ನ ರಾಜಾಭೋಜ್ ಏರ್ಪೋರ್ಟ್ಗೆ ನುಗ್ಗಿರುವ 20 ವರ್ಷದ ಯೋಗೇಶ್ ತ್ರಿಪಾಠಿ ಚಾಪರ್ವೊಂದರ ಮುಂಭಾಗಕ್ಕೆ ಹಾನಿ ಮಾಡಿದ್ದಾನೆ. ಇದಾದ ಬಳಿಕ ಹಾರಾಟ ನಡೆಸಲು ಸಿದ್ಧವಾಗಿದ್ದ ಸ್ಪೈಸ್ ಜೆಟ್ ಹೆಲಿಕಾಪ್ಟರ್ ಮುಂದೆ ಧರಣಿ ಕುಳಿತುಕೊಂಡಿದ್ದಾನೆ. ಹೀಗಾಗಿ ಅದು ಒಂದು ಗಂಟೆಗಳ ಕಾಲ ತಂಡವಾಗಿ ಹಾರಾಟ ನಡೆಸಿದೆ.
ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದು, ಯಾವ ಕಾರಣಕ್ಕಾಗಿ ಈ ರೀತಿಯಾಗಿ ನಡೆದುಕೊಂಡಿದ್ದಾನೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.