ETV Bharat / bharat

ರಾಹುಲ್​ ಗುಡ್​ಬೈ... ಖರ್ಗೆಗೆ ಒಲಿದು ಬರುತ್ತಾ ಎಐಸಿಸಿ ಅಧ್ಯಕ್ಷಗಿರಿ!? - ರಾಹುಲ್​ ಗಾಂಧಿ

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್​ ಗಾಂಧಿ ರಾಜೀನಾಮೆ ನೀಡುತ್ತಿದ್ದಂತೆ ನೂತನ ಸಾರಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಶುರುವಾಗಿದ್ದು, ಕನ್ನಡಿಗ ಮಲ್ಲಿಕಾರ್ಜುನ್​ ಖರ್ಗೆ ಅವರಿಗೆ ಈ ಚಾನ್ಸ್​ ಒಲಿದು ಬರಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಮಲ್ಲಿಕಾರ್ಜುನ್ ಖರ್ಗೆ
author img

By

Published : Jul 3, 2019, 8:46 PM IST

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಹೀನಾಯ ಸೋಲು ಕಂಡಿದ್ದರಿಂದ ನೈತಿಕ ಹೊಣೆ ಹೊತ್ತಿರುವ ರಾಹುಲ್​ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಪಕ್ಷದ ಚುಕ್ಕಾಣಿಯನ್ನ ಗಾಂಧಿ ಕುಟುಂಬಕ್ಕೆ ತುಂಬಾ ಹತ್ತಿರವಾಗಿರುವ ಹಿರಿಯ ಮುಖಂಡರೋರ್ವರ ಕೈ ಸೇರುವುದು ಬಹುತೇಕ ಖಚಿತವಾಗಿದೆ.

ಈಗಾಗಲೇ ಹಂಗಾಮಿ ಅಧ್ಯಕ್ಷರಾಗಿ ಮೋತಿಲಾಲ್​ ವೋಹ್ರಾ ಆಯ್ಕೆಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಕಾಂಗ್ರೆಸ್​ ಮೂಲಗಳು ಈ ಮಾಹಿತಿಯನ್ನ ತಳ್ಳಿಹಾಕಿವೆ. ರಾಹುಲ್​ ಗಾಂಧಿಯವರ ರಾಜೀನಾಮೆ ಪತ್ರ ಅಗೀಂಕಾರಗೊಳ್ಳುವವರೆಗೂ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗಿದೆ. ಜತೆಗೆ ಆದಷ್ಟು ಬೇಗ ಸಿಡಬ್ಲ್ಯುಸಿ ಸಭೆ ನಡೆಸಿ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಗುವುದು ಎಂದು ಹೇಳಲಾಗಿದೆ.

party president
ಮೋತಿಲಾಲ್​ ವೋಹ್ರಾ

ಯಾರಿಗೆ ಅಧ್ಯಕ್ಷಗಿರಿ!?
ಅಧ್ಯಕ್ಷ ಸ್ಥಾನಕ್ಕೆ ರಾಹುಲ್​ ಗಾಂಧಿ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನಕ್ಕೆ ಪಕ್ಷದ ಹಿರಿಯ ಮುಖಂಡರಾಗಿರುವ ಕರ್ನಾಟಕದ ಮಲ್ಲಿಕಾರ್ಜುನ್​ ಖರ್ಗೆ ಅಥವಾ ಮಹಾರಾಷ್ಟ್ರದ ಸುಶೀಲ್​ ಕುಮಾರ್​ ಶಿಂಧೆ ಆಯ್ಕೆಯಾಗಬಹುದು ಎನ್ನಲಾಗಿದೆ. ವಿಶೇಷವೆಂದರೆ ಪಿ.ವಿ.ನರಸಿಂಹರಾವ್​ ಮತ್ತು ಸೀತಾರಾಮ್​ ಕೇಸರಿ ಕೈ ಅಧ್ಯಕ್ಷರಾದ ಬಳಿಕ ಮೂರನೇ ಬಾರಿಗೆ ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿವೋರ್ವರು ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ.

ಸಿಡಬ್ಲ್ಯುಸಿ ಸಭೆಯಲ್ಲಿ ರಾಹುಲ್​ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸೇರಿ ಒಮ್ಮತ್ತದಿಂದ ನಿರ್ಧಾರ ಕೈಗೊಳ್ಳಲಿದ್ದು, ಅವರೇ ಪಕ್ಷದ ಅಧ್ಯಕ್ಷರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಲೋಕಸಭೆಯಲ್ಲಿ ಅದ್ಭುತವಾಗಿ ಮಾತನಾಡಿದ್ದ ಮಲ್ಲಿಕಾರ್ಜುನ್​ ಖರ್ಗೆ, ಕಳೆದ ಅನೇಕ ವರ್ಷಗಳಿಂದಲೂ ಗಾಂಧಿ ಕುಟುಂಬದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಇವರಿಗೆ ಅವಕಾಶ ಒಲಿದು ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಖರ್ಗೆ ಮೊದಲ ಆಯ್ಕೆ!?
ಜೀವನಪೂರ್ತಿ ಕಾಂಗ್ರೆಸ್​ ಪಕ್ಷ ಹಾಗೂ ಗಾಂಧಿ ಕುಟುಂಬಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಮಲ್ಲಿಕಾರ್ಜುನ​ ಖರ್ಗೆ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ಪಕ್ಷ ಮುಂದಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ವಿರೋಧ ಪಕ್ಷದ ನಾಯಕನಾಗಿ ತಮ್ಮ ಜವಾಬ್ದಾರಿಯನ್ನ ಯಶಸ್ವಿಯಾಗಿ ನಿಭಾಯಿಸಿರುವ ಇವರು, ತಮಗೆ ನೀಡುವ ಅಧ್ಯಕ್ಷ ಸ್ಥಾನವನ್ನ ಸಮರ್ಥವಾಗಿ ನಡೆಸಿಕೊಂಡು ಹೋಗಬಲ್ಲರು ಎನ್ನಲಾಗಿದೆ. ಇದರ ಜತೆಗೆ ಇವರೊಬ್ಬ ದಲಿತ ಪ್ರಬಲ ನಾಯಕನಾಗಿದ್ದು, ಪಕ್ಷಕ್ಕೆ ವರವಾಗಲಿದೆ ಎಂದು ತಿಳಿದು ಬಂದಿದೆ.

party president
ಸುಶೀಲ್​ ಕುಮಾರ್​ ಶಿಂಧೆ

ಶಿಂಧೆ ಮೇಲೂ ಕಣ್ಣು!?
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್​ ಕುಮಾರ್​ ಶಿಂಧೆ ಹೆಸರು ಕೂಡ ರೇಸ್​​ನಲ್ಲಿದ್ದು, ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷ ಇವರಿಗೆ ಅಧ್ಯಕ್ಷ ಪಟ್ಟ ನೀಡಬಹುದು ಎಂದು ಹೇಳಲಾಗುತ್ತಿದೆ.

Intro:Body:

ಕಾಂಗ್ರೆಸ್​ ಪ್ರೆಸಿಡೆಂಟ್​​ಶಿಪ್​ಗೆ ರಾಹುಲ್​ ಗುಡ್​ಬೈ... ಕನ್ನಡಿಗ ಖರ್ಗೆಗೆ ಒಲಿದು ಬರುತ್ತಾ ಅಧ್ಯಕ್ಷಗಿರಿ!? 

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ಹೀನಾಯ ಸೋಲು ಕಂಡಿದ್ದರಿಂದ ನೈತಿಕ ಹೊಣೆ ಹೊತ್ತಿರುವ ರಾಹುಲ್​ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಪಕ್ಷದ ಚುಕ್ಕಾಣಿಯನ್ನ ಗಾಂಧಿ ಕುಟಂಬಕ್ಕೆ ತುಂಬಾ ಹತ್ತಿರವಾಗಿರುವ ಹಿರಿಯ ಮುಖಂಡನೋರ್ವರ ಕೈ ಸೇರುವುದು ಬಹುತೇಕ ಖಚಿತವಾಗಿದೆ. 

ಈಗಾಗಲೇ ಹಂಗಾಮಿ ಅಧ್ಯಕ್ಷರಾಗಿ ಮೋತಿಲಾಲ್​ ವೋಹ್ರಾ ಆಯ್ಕೆಗೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದರು. ಆದರೆ ಕಾಂಗ್ರೆಸ್​ ಮೂಲಗಳು ಈ ಮಾಹಿತಿಯನ್ನ ತಳ್ಳಿಹಾಕಿವೆ. ರಾಹುಲ್​ ಗಾಂಧಿಯವರ ರಾಜೀನಾಮೆ ಪತ್ರ  ಅಗೀಂಕಾರಗೊಳ್ಳುವವರೆಗೂ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗಿದೆ. ಜತೆಗೆ ಆದಷ್ಟು ಬೇಗ ಸಿಡಬ್ಲ್ಯುಸಿ ಸಭೆ ನಡೆಸಿ ನೂತನ ಅಧ್ಯಕ್ಷರ ಆಯ್ಕೆ ಮಾಡಲಾಗುವುದು ಎಂದು ಹೇಳಲಾಗಿದೆ. 

ಯಾರಿಗೆ ಅಧ್ಯಕ್ಷಗಿರಿ ಪಟ್ಟ!? 

ಅಧ್ಯಕ್ಷ ಸ್ಥಾನಕ್ಕೆ ರಾಹುಲ್​ ಗಾಂಧಿ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನಕ್ಕೆ ಪಕ್ಷದ ಹಿರಿಯ ಮುಖಂಡರಾಗಿರುವ ಕರ್ನಾಟಕದ ಮಲ್ಲಿಕಾರ್ಜುನ್​ ಖರ್ಗೆ ಅಥವಾ ಮಹಾರಾಷ್ಟ್ರದ ಸುಶೀಲ್​ ಕುಮಾರ್​ ಶಿಂಧೆ ಆಯ್ಕೆಯಾಗಬಹುದು ಎನ್ನಲಾಗಿದೆ. ವಿಶೇಷವೆಂದರೆ ಪಿವಿ ನರಸಿಂಹರಾವ್​ ಮತ್ತು ಸೀತಾರಾಮ್​ ಕೇಸರಿ ಕೈ ಅಧ್ಯಕ್ಷರಾದ ಬಳಿಕ ಮೂರನೇ ಬಾರಿಗೆ ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿವೋರ್ವರು ಅಧ್ಯಕ್ಷರಾಗಿ ನೇಮಕಗೊಳ್ಳಲಿದ್ದಾರೆ. 

ಸಿಡಬ್ಲ್ಯುಸಿ ಸಭೆಯಲ್ಲಿ ರಾಹುಲ್​ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಸೇರಿ ಒಮ್ಮತ್ತದಿಂದ ನಿರ್ಧಾರ ಕೈಗೊಳ್ಳಲಿದ್ದು, ಅವರೇ ಪಕ್ಷದ ಅಧ್ಯಕ್ಷರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಲೋಕಸಭೆಯಲ್ಲಿ ಅದ್ಭುತವಾಗಿ ಮಾತನಾಡಿದ್ದ ಮಲ್ಲಿಕಾರ್ಜುನ್​ ಖರ್ಗೆ, ಕಳೆದ ಅನೇಕ ವರ್ಷಗಳಿಂದಲೂ ಗಾಂಧಿ ಕುಟುಂಬದೊಂದಿಗೆ ನಿಕಟ ಸಂಪರ್ಕಹೊಂದಿದ್ದು, ಇವರಿಗೆ ಅವಕಾಶ ಒಲಿದು ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. 

ಖರ್ಗೆ ಮೊದಲ ಆಯ್ಕೆ!? 

ಜೀವನಪೂರ್ತಿ ಕಾಂಗ್ರೆಸ್​ ಪಕ್ಷ ಹಾಗೂ ಗಾಂಧಿ ಕುಟುಂಬಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಮಲ್ಲಿಕಾರ್ಜುನ್​ ಖರ್ಗೆ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ಪಕ್ಷ ಮುಂದಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ವಿರೋಧ ಪಕ್ಷದ ನಾಯಕನಾಗಿ ತಮ್ಮ ಜವಾಬ್ದಾರಿಯನ್ನ ಯಶಸ್ವಿಯಾಗಿ ನಿಭಾಯಿಸಿರುವ ಇವರು, ತಮಗೆ ನೀಡುವ ಅಧ್ಯಕ್ಷ ಸ್ಥಾನವನ್ನ ಸಮರ್ಥವಾಗಿ ನಡೆಸಿಕೊಂಡು ಹೋಗಬಲ್ಲರು ಎನ್ನಲಾಗಿದೆ. ಇದರ ಜತೆಗೆ ಇವರೊಬ್ಬ ದಲಿತ ಪ್ರಬಲ ನಾಯಕನಾಗಿದ್ದು, ಪಕ್ಷಕ್ಕೆ ವರವಾಗಲಿದೆ ಎಂದು ತಿಳಿದು ಬಂದಿದೆ. 

ಶಿಂಧೆ ಮೇಲೂ ಕಣ್ಣು!? 

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ  ಸುಶೀಲ್​ ಕುಮಾರ್​ ಶಿಂಧೆ ಹೆಸರು ಕೂಡ ರೇಸ್​​ನಲ್ಲಿದ್ದು, ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಪಕ್ಷ ಇವರಿಗೆ ಅಧ್ಯಕ್ಷ ಪಟ್ಟ ನೀಡಬಹುದು ಎಂದು ಹೇಳಲಾಗುತ್ತಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.