ETV Bharat / bharat

ಮರಕ್ಕೆ ಬೊಲೆರೋ ವಾಹನ ಡಿಕ್ಕಿ: ಓರ್ವ ಯೋಧ ಸೇರಿ ಐವರು ಸ್ಥಳದಲ್ಲೇ ಸಾವು

author img

By

Published : Dec 14, 2020, 7:06 AM IST

Updated : Dec 14, 2020, 8:09 AM IST

accident
ಐವರು ಸ್ಥಳದಲ್ಲೇ ಸಾವು

06:58 December 14

ಮದುವೆ ಸಮಾರಂಭ ಮುಗಿಸಿಕೊಂಡು ವಾಪಸ್​ ಆಗ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಮರಕ್ಕೆ ಡಿಕ್ಕಿಯಾಗಿದ್ದು, ಓರ್ವ ಯೋಧ ಸೇರಿ ಐವರು ಮೃತಪಟ್ಟಿದ್ದಾರೆ.

ಐವರು ಸ್ಥಳದಲ್ಲೇ ಸಾವು

ಪ್ರತಾಪ್​ಗಢ/ಉತ್ತರಪ್ರದೇಶ : ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಕಾರು ಮರಕ್ಕೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಉತ್ತರಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ​ ನಡೆದಿದೆ.

ಮೃತರೆಲ್ಲರೂ ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದಾರೆ. ಮದುವೆ ಸಮಾರಂಭವೊಂದನ್ನು ಮುಗಿಸಿಕೊಂಡು ಹಿಂದಿರುಗುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರಲ್ಲಿ ಒಬ್ಬ ಸೈನಿಕ ಕೂಡ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಯೋಧ ಸಂದೀಪ್ ಯಾದವ್​ಗೆ ಇತ್ತೀಚೆಗಷ್ಟೇ ಮದುವೆ ನಿಶ್ಚಯವಾಗಿತ್ತು. 

ಅವರು ತಮ್ಮ ಸಂಬಂಧಿಯೊಬ್ಬರ ಮದುವೆಯಲ್ಲಿ ಪಾಲ್ಗೊಳ್ಳಲು ಭಾನುವಾರ ನಾಲ್ವರು ಕುಟುಂಬಸ್ಥರೊಂದಿಗೆ ಕುಂದನ್​ಪುರಕ್ಕೆ ಹೋಗಿದ್ದರು. ಅಲ್ಲಿಂದ ಗ್ರಾಮಕ್ಕೆ ವಾಪಸ್​ ಆಗುವ ವೇಳೆ ಈ ಅಪಘಾತ ನಡೆದಿದೆ. 

ಸೈನಿಕ ಸಂದೀಪ್ ಯಾದವ್ ಅಲ್ಲದೇ ರಾಹುಲ್​ ಯಾದವ್​, ಅಖಿಲೇಶ್​ ಯಾದವ್​, ಪಪ್ಪು ಯಾದವ್, ಸಂದೀಪ್​ ಯಾದವ್​​ ಎಂಬುವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಶವಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ:ಸರ್ಕಾರಕ್ಕೆ ಸೆಡ್ಡು ಹೊಡೆದ ಸಾರಿಗೆ ನೌಕರರು: ಮುಷ್ಕರಕ್ಕೆ ಖಾಸಗಿ ಬಸ್ ಮಾಲೀಕರ ಒಕ್ಕೂಟ ಬೆಂಬಲ 

Last Updated : Dec 14, 2020, 8:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.