ETV Bharat / bharat

ಲಾಕ್​ ಆದ ಕಾರಿನೊಳಗೆ ಆಟವಾಡುತ್ತಿದ್ದ ಕಂದಮ್ಮಗಳು ಉಸಿರುಗಟ್ಟಿ ಸಾವು

author img

By

Published : Oct 1, 2020, 10:15 AM IST

ಕಾರಿನೊಳಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾರು ಲಾಕ್​ ಆಗಿದ್ದು, ಪರಿಣಾಮ ಇಬ್ಬರು ಕಂದಮ್ಮಗಳು ಪ್ರಾಣ ಕಳೆದುಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಕಂದಮ್ಮಗಳು ಉಸಿರುಗಟ್ಟಿ ಸಾವು
ಕಂದಮ್ಮಗಳು ಉಸಿರುಗಟ್ಟಿ ಸಾವು

ರಾಯಗಢ (ಮಹಾರಾಷ್ಟ್ರ): ಕಾರಿನೊಳಗೆ ಆಟವಾಡುತ್ತಾ ಇದ್ದ ಇಬ್ಬರು ಮಕ್ಕಳು ಆಕಸ್ಮಿಕವಾಗಿ ಕಾರನ್ನು ಲಾಕ್​ ಮಾಡಿದ್ದು, ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮಹಾದ್ ತಾಲೂಕಿನ ನಂಗಲ್ವಾಡಿ ಗ್ರಾಮದಲ್ಲಿ ನಡೆದಿದೆ.

ಸುಹೇಲ್ ಖಾನ್ (6) ಮತ್ತು ಅಬ್ಬಾಸ್ ಖಾನ್ (4) ಮೃತ ಮಕ್ಕಳು. ಇಬ್ಬರು ಕಾರಿನೊಳಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾರು ಲಾಕ್​ ಆಗಿದೆ. ಬಾಗಿಲು ತೆರೆಯಲು ಪ್ರಯತ್ನಿಸಿದ್ದರೂ ವಿಫಲವಾಗಿದ್ದಾರೆ. ಈ ವೇಳೆ ಉಸಿರಾಟ ತೊಂದರೆ ಉಂಟಾಗಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.

ಇನ್ನು ಆಗಸ್ಟ್‌ನಲ್ಲಿಯೂ ಇದೇ ರೀತಿಯ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ನಡೆದಿದ್ದು, ಮೂವರು ಮಕ್ಕಳು ಸಾವನ್ನಪ್ಪಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.