ETV Bharat / bharat

ಹೆಲ್ಮೆಟ್ ಧರಿಸಿದವರಿಗೆ ಸಿಗುತ್ತೆ ಭಗವಾನ್ ಗಣೇಶನಿಂದ ಸಿಹಿ 'ಲಡ್ಡು'....! ರಾಜ್​ಕೋಟ್​ ಪೊಲೀಸರಿಂದ ವಿಶೇಷ ಜಾಗೃತಿ - ಬೋಲ್ಬಾಲಾ

ವಾಹನ ಸವಾರರಿಗೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುವುದಕ್ಕಿಂತ ಭಯ ತರಿಸುವ ರೀತಿಯಲ್ಲಿಯೇ ನೂತನ ವಾಹನ ಮೋಟರ್ ಕಾಯ್ದೆ ಇದೀಗ ಜಾರಿಯಲ್ಲಿದೆ. ಆದ್ರೆ ಇದಕ್ಕೆ ವ್ಯತಿರಿಕ್ತವಾಗಿ ರಸ್ತೆ ನಿಯಮವನ್ನು ಅನುಸರಿಸುವ ಸವಾರರಿಗೆ ಸಾಕ್ಷಾತ್ ಗಜಮುಖನೇ ತನ್ನ ಕೈಯಿಂದ ಸಿಹಿ ಲಡ್ಡನ್ನ ತಿನ್ನಿಸಿ, ಗೌರವಿಸಿದ್ರೆ ಹೇಗಿರುತ್ತೆ ..?

ಹೆಲ್ಮೆಟ್ ಧರಿಸಿದವರಿಗೆ ಸಿಗುತ್ತೆ ಭಗವಾನ್ ಗಣೇಶನಿಂದ ಸಿಹಿ 'ಲಡ್ಡು'
author img

By

Published : Sep 10, 2019, 7:02 AM IST

ರಾಜ್ ಕೋಟ್​ ; ಸಂಚಾರ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅದನ್ನು ಅನುಸರಿಸಲು ಜನರನ್ನು ಪ್ರೇರೇಪಿಸುವ ಉದ್ದೇಶದಿಂದ, ರಾಜ್‌ಕೋಟ್​ನ ಟ್ರಾಫಿಕ್ ಪೊಲೀಸರು ಇದೀಗ ಹೆಲ್ಮೆಟ್ ಧರಿಸಿ ತಮ್ಮ ದ್ವಿಚಕ್ರ ವಾಹನಗಳಲ್ಲಿ ಸವಾರಿ ಮಾಡುವ ಜನರಿಗೆ ಸಿಹಿತಿಂಡಿಗಳನ್ನು ಡುವುದಕ್ಕಾನೀಗಿ ಗಣಪತಿ ವೇಶ ಧರಿಸಿರುವ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಿದ್ದಾರೆ.

ಈ ವಿನೂತನ ಪ್ರಯತ್ನವನ್ನು ಬೋಲ್ಬಾಲಾ ಎಂಬ ಟ್ರಸ್ಟ್ ನ ಸಹಯೋಗದೊಂದಿಗೆ ಪ್ರಯತ್ನಿಸಿದ್ದು, ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಸವಾರಿ ಮಾಡುವವರಿಗೆ ಸಿಹಿತಿಂಡಿ ಹಾಗೂ ಪ್ರಶಂಸೆಯ ಪ್ರಮಾಣ ಪತ್ರವನ್ನು ನೀಡುತ್ತಿದ್ದಾರೆ.

ರಾಜ್​ಕೋಟ್​ನ ಎಸಿಪಿ ಅಜಯ್ ಚೌಧರಿ ಈ ಕುರಿತು ಮಾತನಾಡಿದ್ದು, ಹೆಲ್ಮೆಟ್​ ಕಡ್ಡಾಯವಾಗಿರುವುದರಿಂದ ಜನರು ಅಳವಡಿಸಿಕೊಳ್ಳುವಂತೆ ಮಾಡಲಿದ್ದೇವೆ. ಅಲ್ಲದೇ ಈ ರೀತಿ ವಾಹನ ಸವಾರರಿಗೆ ಲಡ್ಡು ನೀಡುತ್ತಿರುವುದರಿಂದಾಗಿ ಜನರಿಗೆ ಸಂಚಾರಿ ನಿಯಮಗಳ ಅನುಸರಿಸಲು ಪ್ರೇರಣೆ ಹಾಗೂ ಜಾಗೃತಿಯನ್ನು ಮೂಡಿಸಲು ಸಹಕಾರಿಯಾಗುತ್ತದೆ ಎಂದಿದ್ದಾರೆ.

ದೇಹದಲ್ಲಿ ತಲೆ ಅತ್ಯಂತ ಪ್ರಮುಖವಾದ ಭಾಗ ಹಾಗಾಗಿ ಇದರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ, ಹೀಗಾಗಿ ಈ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿದ್ದು, ನಿಯಮವನ್ನು ಅನುಸರಿಸುವವರನ್ನು ಸನ್ಮಾನಿಸುತ್ತೇವೆ ಎಂದು ಬೋಲ್ಬಾಲಾ ಟ್ರಸ್ಟ್ ನ ಅಧ್ಯಕ್ಷರಾದ ಜಯೇಶ್ ಉಪಾಧ್ಯಾಯ್ ಹೇಳಿದ್ದಾರೆ.

ನೂತನ ವಾಹನ ಮೋಟರ್ ಕಾಯ್ದೆಯು ರಸ್ತೆ ಸಂಚಾರ ನಿಯಮ ಉಲ್ಲಂಘನೆಗೆ ದಂಡವನ್ನು ಹೆಚ್ಚಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕಳೆದ ತಿಂಗಳು ಮೋಟರ್ ವಾಹನ ಕಾಯ್ದೆ 2019 ರ ನಿಯಮವನ್ನು ತಿಳಿಸಿದ್ದು, ಇದನ್ನು ಸೆಪ್ಟೆಂಬರ್ 1 ರಿಂದ ಅನೇಕ ರಾಜ್ಯಗಳಲ್ಲಿ ಜಾರಿಗೆ ತರಲಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.