ಜೈಪುರ (ರಾಜಸ್ಥಾನ): ಪಾಕಿಸ್ತಾನದಿಂದ ಭಾರತ ಪ್ರವೇಶಿಸಿದ್ದ ಮಿಡತೆಗಳು ದೇಶದ ರೈತರ ನಿದ್ದೆಗೆಡಿಸಿದ್ದವು. ಮಿಡತೆಗಳ ದಾಳಿ ಹಿನ್ನೆಯಲ್ಲಿ ಲಕ್ಷಾಂತರ ಹೆಕ್ಟೇರ್ ಭೂಮಿಯಲ್ಲಿ ಸಮೀಕ್ಷೆ ನಡೆಸಿದ ರಾಜಸ್ಥಾನ ಕೃಷಿ ಇಲಾಖೆ, 383 ಸ್ಥಳಗಳಲ್ಲಿ 11,6091 ಹೆಕ್ಟೇರ್ ಪ್ರದೇಶದಲ್ಲಿ ಮಿಡತೆ ದಾಳಿಯನ್ನ ನಿಯಂತ್ರಿಸಲಾಗಿದೆ ಎಂದು ವರದಿ ನೀಡಿದೆ.
ಏಪ್ರಿಲ್ 11 ರಂದು ಜೈಸಲ್ಮೇರ್ ಮತ್ತು ಶ್ರೀಗಂಗಾನಗರ ಜಿಲ್ಲೆಗಳು ಮಿಡತೆ ದಾಳಿಗೆ ಸಾಕ್ಷಿಯಾಗಿದ್ದವು. ಇನ್ನು ಮಿಡತೆಗಳ ದಾಳಿಯನ್ನು ನಿಯಂತ್ರಿಸಲು ಇಲಾಖೆ ಎಲ್ಲ ಕ್ರಮ ಕೈಗೊಂಡಿದ್ದು, 120 ವಾಹನಗಳ ಮೂಲಕ ಕಣ್ಗಾವಲು ಇಡಲಾಗಿತ್ತು. 800 ಟ್ಯ್ರಾಕ್ಟರ್ಗಳ ಮೂಲಕ ಔಷಧ ಸಿಂಪಡಿಸಿ ಮಿಡತೆಗಳನ್ನ ಹಿಮ್ಮೆಟ್ಟಿಸಿತ್ತು.