ETV Bharat / bharat

MSME ಕೈಗಾರಿಕೆಗಳಿಗೆ ಬಂಪರ್​​... 3 ಲಕ್ಷ ಕೋಟಿ ರೂ. ಜಾಮೀನು ರಹಿತ ಸಾಲ ನೀಡಲು ನಿರ್ಧಾರ! - ಎಂಎಸ್​ಎಂಇ

ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಜಾಮೀನು ರಹಿತ ಸಾಲ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​​ ಮಹತ್ವದ ಘೋಷಣೆ ಹೊರಹಾಕಿದ್ದಾರೆ.

Finance Minister
Finance Minister
author img

By

Published : May 13, 2020, 5:29 PM IST

ನವದೆಹಲಿ: ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ ಸಂಕಷ್ಟದಲ್ಲಿರುವ ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಬಂಪರ್​​ ಕೊಡುಗೆ ನೀಡಿದ್ದು, 3 ಲಕ್ಷ ಕೋಟಿ ರೂಪಾಯಿ ಜಾಮೀನು ರಹಿತ ಸಾಲ ನೀಡಲು ನಿರ್ಧರಿಸಿದೆ.

20 ಸಾವಿರ ಕೋಟಿ ಸಾಲ ನೀಡಲು ನಿರ್ಧರಿಸಲಾಗಿದ್ದು, 4 ವರ್ಷಗಳ ಕಾಲ ಮರುಪಾವತಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. 3 ಲಕ್ಷ ಕೋಟಿ ಭದ್ರತೆ ರಹಿತ ಸಾಲ ನೀಡಲು ನಿರ್ಧಾರ ಮಾಡಿದ್ದು, ಇದರಿಂದ ಎಂಎಸ್​ಎಂಇಗಳಿಗೆ ಸಹಕಾರಿಯಾಗಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ವಿವರಣೆ ನೀಡಿದ್ದಾರೆ.

MSME ಕೈಗಾರಿಕೆಗಳಿಗೆ ಬಂಪರ್: ಸೀತಾರಾಮನ್​ ಸುದ್ದಿಗೋಷ್ಠಿ

ಆಗಸ್ಟ್​ 31ರವರೆಗೆ ಸಾಲ ನೀಡಲು ನಿರ್ಧಾರ ಮಾಡಲಾಗಿದೆ ಎಂದಿರುವ ಅವರು 2 ಲಕ್ಷ ಸಣ್ಣ ಉದ್ದಿಮೆಗಳಿಗೆ ಸಾಲ ನೀಡಲು ತೀರ್ಮಾನ ಮಾಡಿದ್ದೇವೆ ಎಂದರು. 1 ಕೋಟಿ ವಹಿವಾಟು ಇದ್ದರೂ ಅದು ಅತಿ ಸಣ್ಣ ಉದ್ದಿಮೆ ಎಂದಿದ್ದಾರೆ. ಹೀಗಾಗಿ ಸಂಕಷ್ಟದಲ್ಲಿರುವ ಎಂಎಸ್​​​ಎಂಇ 20 ಸಾವಿರ ಕೋಟಿ ಪ್ಯಾಕೇಜ್​ ಘೋಷಣೆ ಮಾಡಿದ್ದು, ತೊಂದರೆಯಲ್ಲಿರುವ ಸಣ್ಣ ಉದ್ದಿಮೆಗಳಿಗೆ ಸಹಾಯವಾಗಲಿದೆ ಎಂದರು.

MSMEಗಳಿಗೆ ಯಾವುದೇ ಷರತ್ತು ಇಲ್ಲದೇ ಸಾಲ ಕೊಡಲು ನಿರ್ಧರಿಸಲಾಗಿದೆ. ಇದರಿಂದ 45 ಲಕ್ಷ ಎಂಎಸ್‌ಎಂಇ ಕೈಗಾರಿಕೆಗಳಿಗೆ ಲಾಭವಾಗಲಿದೆ. ದೇಶದಲ್ಲಿ 25 -100 ಕೋಟಿ ವಹಿವಾಟುಗಳಿರುವ ಸಣ್ಣ ಕಂಪನಿಗಳಿಗೆ ಇದರಿಂದಾಗಿ ನೆರವು ಜತೆಗೆ MSMEಗಳಿಗೆ ಆರು ಪ್ರಮುಖ ರಿಲೀಫ್‌ಗಳನ್ನ ನೀಡಲಾಗಿದೆ ಎಂದರು. ಸಾಲ ಮರುಪಾವತಿಗೆ ನಾಲ್ಕು ವರ್ಷದ ಕಾಲಾವಕಾಶವನ್ನ ಕೇಂದ್ರ ಸರ್ಕಾರ ನೀಡಿದೆ. ಸಾಲಕ್ಕೆ ಮೊದಲ 12 ತಿಂಗಳವರೆಗೂ ಯಾವುದೇ ಕಂತುಗಳನ್ನ ಕಟ್ಟಬೇಕಾಗಿಲ್ಲ. ಬ್ಯಾಂಕ್‌ಗಳು ನೀಡುವ ಸಾಲಕ್ಕೆ ಕೇಂದ್ರ ಸರ್ಕಾರವೇ ಶ್ಯೂರಿಟಿಯಾಗಲಿದೆ ಎಂದರು.

ಇದರ ಜತೆಗೆ ಸಾಮರ್ಥ್ಯವಿರುವ ಕೈಗಾರಿಕೆಗಳಿಗೆ 50 ಸಾವಿರ ಕೋಟಿ ಸಾಲ ನೀಡಲಾಗುತ್ತೆ. ಸಂಕಷ್ಟದಲ್ಲಿ ಸಣ್ಣ ಕೈಗಾರಿಕೆಗಳಿಗೆ 20 ಸಾವಿರ ಕೋಟಿ ಸಹಾಯಕ ಸಾಲ ಹಾಗೂ ತಮ್ಮ ಉತ್ಪಾದನೆ ಹೆಚ್ಚಿಸಿಕೊಳ್ಳಲು 10 ಸಾವಿರ ಕೋಟಿ ಸಾಲ ನೀಡಲಾಗುವುದು ಎಂದಿರುವ ಅವರು ಅಕ್ಟೋಬರ್ 31ರವರೆಗೂ ಸಣ್ಣ ಕೈಗಾರಿಕೆಗಳು ಸಾಲವನ್ನ ಪಡೆಯಬಹುದಾಗಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.