ETV Bharat / bharat

'ಹಿಂಸಾಚಾರ ಸಂಬಂಧ ಇಲ್ಲಿಯವರೆಗೆ 25 ಕೇಸು ದಾಖಲಿಸಿದ್ದೇವೆ; ಯಾವುದೇ ಆರೋಪಿಯನ್ನು ಬಿಡಲ್ಲ' - ಪೊಲೀಸ್​ ಆಯುಕ್ತ ಎಸ್​.ಎನ್​ ಶ್ರೀವಾಸ್ತವ್

ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪೊಲೀಸ್​ ಆಯುಕ್ತ ಎಸ್​.ಎನ್​ ಶ್ರೀವಾಸ್ತವ್ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ಹೊರಹಾಕಿದ್ದಾರೆ.

Delhi Police press conference
Delhi Police press conference
author img

By

Published : Jan 27, 2021, 8:36 PM IST

Updated : Jan 27, 2021, 9:09 PM IST

ನವದೆಹಲಿ: ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್​ ಪ್ರತಿಭಟನೆಯಿಂದಾದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸುದ್ದಿಗೋಷ್ಠಿ ನಡೆಸಿ, ಮಹತ್ವದ ಮಾಹಿತಿ ಬಿಚ್ಚಿಟ್ಟರು.

ಸುದ್ದಿಗೋಷ್ಠಿ ನಡೆಸಿದ ದೆಹಲಿ ಪೊಲೀಸ್ ಆಯುಕ್ತರು

ಪೊಲೀಸ್ ಆಯುಕ್ತರು ಹೇಳಿದ್ದೇನು?

1. ಪ್ರತಿಭಟನೆ ಬಗ್ಗೆ ದೆಹಲಿ ಜನರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಕೆಲವೊಂದು ಷರತ್ತು ಹಾಕಿ, ಲಿಖಿತ ರೂಪದಲ್ಲಿ ಬರೆದುಕೊಡಲಾಗಿತ್ತು.

2. ಪ್ರತಿಭಟನೆ ನಡೆಸಲು ಮುಂದಾಗಿದ್ದ ರೈತ ಮುಖಂಡರೊಂದಿಗೆ ಐದು ಸುತ್ತಿನ ಮಾತುಕತೆ ನಡೆಸಿ, ಎಲ್ಲಾ ರೀತಿಯ ಮಾಹಿತಿ ಪಡೆದುಕೊಳ್ಳಲಾಗಿತ್ತು.

3. ಮಧ್ಯಾಹ್ನ 12ರಿಂದ ಸಂಜೆ 5 ಗಂಟೆವರೆಗೆ ಪರೇಡ್​ ನಡೆಸಲು ಅವರು ಒಪ್ಪಿಕೊಂಡಿದ್ದರು. ಆದರೆ ಟ್ರ್ಯಾಕ್ಟರ್​​ ರ‍್ಯಾಲಿಯನ್ನು 8:30ಕ್ಕೆ ಆರಂಭಿಸಿ ವಿಶ್ವಾಸ ದ್ರೋಹ ಮಾಡಿದರು.

4. ಪ್ರತಿಭಟನೆ ವೇಳೆ 5 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್ ತೆಗೆದುಕೊಂಡು ಬಾರದಂತೆ ಸೂಚನೆ ನೀಡಿ, ಯಾವುದೇ ರೀತಿಯ ಮಾರಕಾಸ್ತ್ರ ಬಳಕೆ ಮಾಡದಂತೆ ಕಟ್ಟುನಿಟ್ಟಾಗಿ ತಿಳಿಸಲಾಗಿತ್ತು.

5. ರೈತರು ಪ್ರತಿಭಟನೆ ನಡೆಸುವ ಮಾರ್ಗದ ಬಗ್ಗೆ ಅವರಿಂದಲೇ ಮಾಹಿತಿ ಪಡೆದುಕೊಂಡು ಸೂಚನೆ ನೀಡಲಾಗಿತ್ತು. ಆದರೆ ರೈತರು ಮಾತು ನಡೆಸಿಕೊಟ್ಟಿಲ್ಲ.

  • More than 25 criminal cases have been registered by Delhi Police. We are using the facial recognition system and taking the help of CCTV and video footage to identify the accused. No culprit will be spared: Delhi Police Commissioner SN Shrivastava https://t.co/gLmOfI1DqH

    — ANI (@ANI) January 27, 2021 " class="align-text-top noRightClick twitterSection" data=" ">

6. ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಬರೋಬ್ಬರಿ 394 ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು, ಕೆಲವರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

7. ರಸ್ತೆಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಮುರಿದು ಹಾಕಿ, ಸರ್ಕಾರಿ ಆಸ್ತಿ, ಪೊಲೀಸ್​ ವಾಹನಗಳಿಗೆ ಹಾನಿ ಮಾಡಿದರು.

8. ಇಲ್ಲಿಯವರೆಗೆ 25 ಕ್ರಿಮಿನಲ್​ ಕೇಸ್​ ದಾಖಲಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪ್ರಕರಣ ದಾಖಲಿಸುತ್ತೇವೆ.

9. ರೈತ ಸಂಘಟನೆಗಳಿಗೆ ಟ್ರ್ಯಾಕ್ಟರ್ ರ‍್ಯಾಲಿ ಮುನ್ನಡೆಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಹಿಂಸಾಚಾರದ ವೇಳೆ ಯಾವುದೇ ರೈತ ಮುಖಂಡರು ಸ್ಥಳಗಳಲ್ಲಿ ಇರಲಿಲ್ಲ.

Delhi Police press conference
ಟ್ರ್ಯಾಕ್ಟರ್ ಪರೇಡ್ ವೇಳೆ ಹಿಂಸಾಚಾರ

10. 19 ಆರೋಪಿಗಳ ಬಂಧನ ಮಾಡಲಾಗಿದ್ದು, 50 ಜನರನ್ನು ವಶಕ್ಕೆ ಪಡೆದು ಪ್ರಶ್ನಿಸಲಾಗುತ್ತಿದೆ. ಆರೋಪಿಗಳನ್ನು ಗುರುತಿಸಲು ಸಿಸಿಟಿವಿ ವಿಡಿಯೋ ದೃಶ್ಯಾವಳಿ ಗಮನಿಸುತ್ತಿದ್ದೇವೆ. ಹಿಂಸಾಚಾರದಲ್ಲಿ ಭಾಗಿಯಾದ ಯಾವುದೇ ಆರೋಪಿಗಳನ್ನು ಬಿಡಲ್ಲ.

Last Updated : Jan 27, 2021, 9:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.