ಲಡಾಖ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎರಡು ದಿನಗಳ ಜಮ್ಮು ಕಾಶ್ಮೀರದ ಭೇಟಿ ಕೈಗೊಂಡಿದ್ದಾರೆ. ಕಾಶ್ಮೀರ ಭೇಟಿ ನಿಮಿತ್ತ ರಾಜನಾಥ್ ಸಿಂಗ್ ಲೇಹ್ಗೆ ತೆರಳಿದ್ದಾರೆ.
ಕಾಶ್ಮೀರ ಭೇಟಿ ಕುರಿತಂತೆ ಮಾತನಾಡಿದ ರಕ್ಷಣಾ ಸಚಿವರು, ಗಡಿಗಳಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ನಾನು ಈ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು. ಇದೇ ವೇಳೆ, ಈ ಪ್ರದೇಶದಲ್ಲಿ ನಿಯೋಜಿಸಲಾದ ಸಶಸ್ತ್ರ ಪಡೆಗಳ ಸಿಬ್ಬಂದಿಯೊಂದಿಗೆ ಸಂವಹನ ನಡೆಸುತ್ತೇನೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಭಾರತ ಚೀನಾ ಗಡಿ ವಿವಾದದ ಬಳಿಕ ಗಡಿಯಲ್ಲಿ ಸೇನಾ ಚಟುವಟಿಕೆಗಳು ಚುರುಕುಗೊಂಡಿವೆ. ಪ್ರಧಾನಿ ಲಡಾಖ್ಗೆ ದಿಢೀರ್ ಭೇಟಿ ನೀಡಿ ಸೇನಾ ಪಡೆಗಳಿಗೆ ಧೈರ್ಯ ತುಂಬಿದ್ದರು. ನೆರೆಯ ದೊಡ್ಡ ರಾಷ್ಟ್ರ ಚೀನಾಕ್ಕೂ ಎಚ್ಚರಿಕೆ ರವಾನಿಸಿದ್ದರು.