ಹೈದರಾಬಾದ್: ನಾಳೆಗೆ ನಿಗದಿಯಾಗಿದ್ದ GISAT-1 ಉಪಗ್ರಹ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ.
-
The launch of GISAT-1 onboard GSLV-F10, planned for March 05, 2020, is postponed due to technical reasons. Revised launch date will be informed in due course.
— ISRO (@isro) March 4, 2020 " class="align-text-top noRightClick twitterSection" data="
">The launch of GISAT-1 onboard GSLV-F10, planned for March 05, 2020, is postponed due to technical reasons. Revised launch date will be informed in due course.
— ISRO (@isro) March 4, 2020The launch of GISAT-1 onboard GSLV-F10, planned for March 05, 2020, is postponed due to technical reasons. Revised launch date will be informed in due course.
— ISRO (@isro) March 4, 2020
ಭೂಮಿಯ ಚಿತ್ರ ಸೆರೆಹಿಡಿಯುವ (geo imaging satellite) GISAT-1 ಉಪಗ್ರಹವನ್ನು, ಜಿಎಸ್ಎಲ್ವಿ-ಎಫ್ 10 ಉಡಾವಣಾ ವಾಹನದ ಮೂಲಕ ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಾಳೆ ಸಂಜೆ 5:43ಕ್ಕೆ ಉಡಾವಣೆ ಮಾಡಲು ಇಸ್ರೋ ನಿರ್ಧರಿಸಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಉಡಾವಣೆಯನ್ನು ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ತಿಳಿಸುವುದಾಗಿ ಇಸ್ರೋ ಹೇಳಿದೆ.
ಈ GISAT-1 ಉಪಗ್ರಹವು 2,275 ಕೆಜಿ ಇದ್ದು, ಭೂಮಿಯ ಬಗ್ಗೆ ಗಮನಹರಿಸುವಂತಹ ಉಪಗ್ರಹವಾಗಿದೆ. GSLV-F10 ಉಡ್ಡಯನ ವಾಹನವು ಈ ಉಪಗ್ರಹವನ್ನು ಜಿಯೋ ಸಿಂಕ್ರೊನಸ್ ಟ್ರಾನ್ಸ್ಫರ್ ಕಕ್ಷೆಗೆ ಸೇರಿಸಲಿದೆ. ಈ ಉಪಗ್ರಹ, ಭಾರತದ ಪ್ರತಿ ನಿಮಿಷದ ಚಲನವಲನವನ್ನು ಸೂಕ್ಷ್ಮವಾಗಿ ಅರಿತು ಮೋಡ ರಹಿತ ಜಾಗದಿಂದ ಚಿತ್ರಗಳನ್ನು ಸೆರೆಹಿಡಿಯುತ್ತದೆ.