ETV Bharat / bharat

ಆಟೋದಲ್ಲಿ ತೆರಳಲು ಅನುಮತಿ ನೀಡದ ಪೊಲೀಸ್ರು... ತಂದೆಯನ್ನ ಹೊತ್ತುಕೊಂಡೇ ಮನೆಗೆ ತೆರಳಿದ ಪುತ್ರ

ಅಧೀಕ್ಷಕರ ಪತ್ರವಿದ್ದರೂ ಆಸ್ಪತ್ರೆಯಿಂದ ಮನೆಗೆ ಆಟೋದಲ್ಲಿ ತೆರಳಲು ಪೊಲೀಸರು ಅನುಮತಿ ನೀಡದ ಕಾರಣ ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಹೊತ್ತುಕೊಂಡೇ ಮನೆಗೆ ತೆರಳಿದ್ದಾನೆ.

Man forced to carry father on shoulders
ತಂದೆಯನ್ನ ಹೊತ್ತುಕೊಂಡೇ ನೆಗೆ ತೆರಳಿದ ಪುತ್ರ
author img

By

Published : Apr 16, 2020, 12:34 PM IST

ಕೊಲ್ಲಂ(ಕೇರಳ): ಅನುಮತಿ ಪತ್ರ ಇದ್ದರೂ ಆಟೋದಲ್ಲಿ ತೆರಳಲು ಅವಕಾಶ ನೀಡದಿದ್ದಕ್ಕೆ ವ್ಯಕ್ತಿಯೋರ್ವ ತನ್ನ 65 ವರ್ಷದ ತಂದೆಯನ್ನು ಆಸ್ಪತ್ರೆಯಿಂದ ಮನೆಯವರೆಗೆ ಹೊತ್ತುಕೊಂಡೇ ಹೋದ ಘಟನೆ ಕೇರಳದಲ್ಲಿ ನಡೆದಿದೆ.

ಕುಲತುಪುಳ ಮೂಲದ 65 ವರ್ಷದ ವ್ಯಕ್ತಿಯನ್ನು ಮೂತ್ರ ಸೋಂಕಿನ ಕಾರಣದಿಂದ ಪುಣಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುಣಮುಖರಾದ ಬಳಿಕ ತಂದೆಯನ್ನು ಕರೆತರಲು ಆತನ ಪುತ್ರ ರಾಯ್ಮನ್ ಆಟೋದಲ್ಲಿ ಆಸ್ಪತ್ರೆಗೆ ತೆರಳುವಾಗ ಪೊಲೀಸರು ತಡೆದಿದ್ದಾರೆ. ಹೀಗಾಗಿ ರಾಯ್ಮನ್​ ನಡೆದುಕೊಂಡೇ ಆಸ್ಪತ್ರೆಗೆ ತೆರಳಿದ್ದಾರೆ.

  • #WATCH Kerala: A person carried his 65-year-old ailing father in Punalur & walked close to one-kilometre after the autorickshaw he brought to take his father back from the hospital was allegedly stopped by Police, due to #CoronavirusLockdown guidelines. (15.4) pic.twitter.com/I03claE1XO

    — ANI (@ANI) April 16, 2020 " class="align-text-top noRightClick twitterSection" data=" ">

ಆಸ್ಪತ್ರೆಯಿಂದ ತಂದೆಯನ್ನು ಕರೆದುಕೊಂಡು ಬರುವಾಗ ಆಸ್ಪತ್ರೆ ಅಧೀಕ್ಷಕರ ಪತ್ರದೊಂದಿಗೆ ಬಂದಿದ್ದಾರೆ. ಆದರೆ ಪೊಲೀಸರು ಆಟೋದಲ್ಲಿ ತೆರಳಲು ಅನುಮತಿ ನೀಡಿಲ್ಲ. ಪೊಲೀಸರ ಭಯದಿಂದ ಆಟೋ ಚಾಲಕರು ಕೂಡ ನೆರವಿಗೆ ಬರಲಿಲ್ಲ. ಹೀಗಾಗಿ ವೃದ್ಧ ತಂದೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಕಿಲೋ ಮೀಟರ್​ಗೂ ಹೆಚ್ಚು ದೂರ ನಡೆದುಕೊಂಡೇ ಹೋಗಿದ್ದಾರೆ. ಅವರ ಜೊತೆ ಆತನ ತಾಯಿ ಕೂಡ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ.

ಈ ವೇಳೆ ಅಕ್ಕ ಪಕ್ಕದಲ್ಲಿ ಇತರೆ ವಾಹನಗಳು ಸಂಚರಿಸುತ್ತಿದ್ದರೂ ಯಾರೊಬ್ಬರೂ ಇವರ ಸಹಾಯಕ್ಕೆ ಬಂದಿಲ್ಲ. ಈ ಬಗ್ಗೆ ಮಾತನಾಡಿರುವ ರಾಯ್ಮನ್, ಪಾಸ್​ಗಾಗಿ ಪೊಲೀಸ್​ ಠಾಣೆಗೆ ತೆರಳಿದ್ದಾಗ ಅಫಿಡವಿಟ್ ಸಾಕು, ಪಾಸ್​ ಅವಶ್ಯಕತೆ ಇಲ್ಲವೆಂದು ತಿಳಿಸಿದ್ದರು ಎಂದಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಮಾನವಹಕ್ಕುಗಳ ಆಯೋಗ ಸುಮೋಟೊ (ಸ್ವಯಂಪ್ರೇರಿತ) ದೂರು ದಾಖಲಿಸಿಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.