ETV Bharat / bharat

ಪತ್ರಕರ್ತನ ಸಂಪರ್ಕಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಸ್ವಯಂ ಕ್ವಾರಂಟೈನ್​ - ಕೆರಳ ಪತ್ರಕರ್ತ ಕೊರೊನಾ ಪಾಸಿಟಿವ್​

ಖಾಸಗಿ ಸುದ್ದಿವಾಹಿನಿಯ ಪತ್ರಕರ್ತರೊಬ್ಬರಿಗೆ ಸೋಂಕು ತಗುಲಿದ ಹಿನ್ನೆಲೆ ಅತನ ಸಂಪರ್ಕಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಮತ್ತು ಅವರ ಗನ್ ಮ್ಯಾನ್​ ಹಾಗೂ ಕಾರು ಚಾಲನಿಗೆ ಸ್ವಯಂಪ್ರೇರಿತ ನಿಗಾಕ್ಕೆ ಒಳಗಾಗುವಂತೆ ಕೇರಳ ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

kerala-kasaragod-collector-advised-to-go-into-quarantine-as-scribe-tests-positive-for-covid-19
ಕಾಸರಗೋಡು ಜಿಲ್ಲಾಧಿಕಾರಿ
author img

By

Published : Apr 30, 2020, 1:08 PM IST

ಕಾಸರಗೋಡು: ಕೇರಳದ ಕಾಸರಗೋಡಿನ ಸುದ್ದಿಸಂಸ್ಥೆಯೊಂದರ ಪತ್ರಕರ್ತರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ಆತನ ಸಂಪರ್ಕಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಆರೋಗ್ಯ ಅಧಿಕಾರಿಗಳ ಸಲಹೆ ಮೇರೆಗೆ ಸ್ವಯಂಪ್ರೇರಿತರಾಗಿ ಕ್ವಾರಂಟೈನ್​​ಗೆ ಒಳಗಾಗಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಯ ಗನ್​​ ಮ್ಯಾನ್, ಚಾಲಕನೂ​ ಕ್ವಾರಂಟೈನಲ್ಲಿದ್ದಾರೆ.

ಸೋಂಕಿಗೆ ಒಳಗಾದ ಪತ್ರಕರ್ತ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿಯೊಂದಿಗೆ ಸಂದರ್ಶನ ನಡೆಸಿದ್ದರು. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಪತ್ರಕರ್ತರೊಬ್ಬರಿಗೆ ಸೋಂಕು ತಗುಲಿರುವುದು ರಾಜ್ಯದಲ್ಲಿ ಇದೇ ಮೊದಲ ಪ್ರಕರಣ.

ಮೂವರು ಆರೋಗ್ಯ ಕಾರ್ಯಕರ್ತರು, ಪತ್ರಕರ್ತ ಸೇರಿದಂತೆ 10 ಮಂದಿಗೆ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ಬುಧವಾರ ಹೇಳಿದರು.

ಏಪ್ರಿಲ್​ 19 ರಂದು ಪತ್ರಕರ್ತನಿಗೆ ಸಂದರ್ಶನ ನೀಡಿದ್ದೆ. ಆದರೀಗ ಆತನಿಗೆ ಸೋಂಕು ತಗುಲಿದೆ. ನಾನು, ನನ್ನ ಕಾರಿನ ಚಾಲಕ ಮತ್ತು ಗನ್​​ಮ್ಯಾನ್​​​ ಸೇರಿ ಸ್ವಯಂ ಪ್ರೇರಿತರಾಗಿ ಕ್ವಾರಂಟೈನ್​ಗೆ ಒಳಗಾಗುತ್ತೇವೆ. ಅಲ್ಲದೆ, ಯಾರೊಂದಿಗೂ ಸಂಪರ್ಕ ಹೊಂದಬಾರದು ಎಂದು ಗನ್​ ಮ್ಯಾನ್​, ಚಾಲಕನಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಸಜಿತ್​ ಬಾಬು ಹೇಳಿದ್ದಾರೆ.

ಸಂದರ್ಶನದ ಸಮಯದಲ್ಲಿ ಕ್ಯಾಮೆರಾಮ್ಯಾನ್​ ಮತ್ತು ಮತ್ತಿಬ್ಬರು ಇದ್ದರು. ಅವರಿಗೂ ಕ್ವಾರಂಟೈನ್ ಆಗುವಂತೆ ಸೂಚಿಸಲಾಗಿದೆ. ಹಾಗೆಯೇ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯ ನಿರ್ವಹಿಸುವಂತೆ ಮಾಧ್ಯಮ ಸಂಸ್ಥೆಗಳ ಸಿಬ್ಬಂದಿಗೆ ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.