ನವದೆಹಲಿ: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದ್ದ ಕಾಂಗ್ರೆಸ್-ಜೆಡಿಎಸ್ ಅನರ್ಹ ಶಾಸಕರ ಅರ್ಜಿ ವಿಚಾರಣೆ ಅಂತಿಮ ಹಂತ ತಲುಪಿದೆ.
ಇಂದು ವಾದ-ಪ್ರತಿವಾದ ಮುಕ್ತಾಯವಾಗಿದ್ದು, ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ದೀಪಾವಳಿ ಹಬ್ಬದ ಬಳಿಕ ಅನರ್ಹರ ಭವಿಷ್ಯವನ್ನು ಕೋರ್ಟ್ ನಿರ್ಧರಿಸಲಿದೆ.
ಇಂದಿನ ವಿಚಾರಣೆಯಲ್ಲಿ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಹಾಗೂ ಅನರ್ಹರ ಪರ ವಕೀಲ ಮುಕುಲ್ ರೋಹ್ಟಗಿ ವಾದ-ಪ್ರತಿವಾದ ಮಂಡಿಸಿದ್ದಾರೆ.
-
Supreme Court reserves the verdict on the rebel Karnataka MLAs' petitions challenging their disqualification by the state Assembly Speaker. pic.twitter.com/XJozeyoXaM
— ANI (@ANI) October 25, 2019 " class="align-text-top noRightClick twitterSection" data="
">Supreme Court reserves the verdict on the rebel Karnataka MLAs' petitions challenging their disqualification by the state Assembly Speaker. pic.twitter.com/XJozeyoXaM
— ANI (@ANI) October 25, 2019Supreme Court reserves the verdict on the rebel Karnataka MLAs' petitions challenging their disqualification by the state Assembly Speaker. pic.twitter.com/XJozeyoXaM
— ANI (@ANI) October 25, 2019
ಕಪಿಲ್ ಸಿಬಲ್ ವಾದದ ಹೈಲೈಟ್ಸ್:
ಉಪಚುನಾವಣೆಯಲ್ಲಿ ಅನರ್ಹರು ಸ್ಪರ್ಧಿಸಬಹುದು ಎನ್ನುವ ಆಯೋಗದ ಮಾತಿಗೆ ಸಿಬಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಅನರ್ಹರು ಚುನಾವಣೆ ಎದುರಿಸಿದರೆ ಸ್ಪೀಕರ್ ಆದೇಶಕ್ಕೆ ಯಾವ ಬೆಲೆ ಇರುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.
ಚುನಾವಣೆ ಆಯೋಜನೆ ಬಗ್ಗೆ ನಮ್ಮ ತಕರಾರು ಇಲ್ಲ, ಚುನಾವಣೆ ನಡೆಸಬಹುದು. ಅನರ್ಹತೆ ಮತ್ತು ಚುನಾವಣೆ ಆಯೋಜನೆ ಎರಡು ಭಿನ್ನ ವಿಚಾರಗಳು. ಇವೆರಡು ಒಂದಕ್ಕೊಂದು ಸಂಬಂಧಿತವಾಗಿಲ್ಲ. ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎನ್ನುವ ಕಾರಣಕ್ಕೆ ಎಲೆಕ್ಷನ್ ಮುಂದೂಡುವುದು ಉಚಿತವಲ್ಲ ಎಂದು ಸಿಬಲ್ ಕೋರ್ಟ್ಗೆ ಹೇಳಿದ್ದಾರೆ.
ಅನರ್ಹರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ವಿಚಾರಕ್ಕೆ ಸಿಬಲ್ ಅಸಮಾಧಾನ ವ್ಯಕ್ತಪಡಿಸಿದ್ದು, ಅನರ್ಹರು ಸರ್ವೋಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಮೂಲಭೂತ ಹಕ್ಕು ಏನಿದೆ ಎಂದು ಸಿಬಲ್ ಪ್ರಶ್ನಿಸಿದ್ದಾರೆ.
ರೋಹ್ಟಗಿ ಪ್ರತಿವಾದ ಹೇಗಿತ್ತು?
ಶಾಸಕರ ರಾಜೀನಾಮೆ ಮತ್ತು ಅನರ್ಹಗೊಳಿಸಿದ ಪ್ರಕ್ರಿಯೆ ಎರಡು ಬೇರೆ ತೆರನಾಗಿದ್ದು, ವಿನಾಕಾರಣ ಎರಡನ್ನೂ ಒಂದಾಗಿ ಬಿಂಬಿಸಲಾಗುತ್ತಿದೆ ಎಂದು ರೋಹ್ಟಗಿ ಕೋರ್ಟ್ಗೆ ಮನವರಿಕೆ ಮಾಡಿದ್ದಾರೆ.
ಸ್ಪೀಕರ್ ರಾಜೀನಾಮೆಯನ್ನು ಸ್ವೀಕರಿಸುವ ವೇಳೆ ಆ ರಾಜೀನಾಮೆ ಉದ್ದೇಶ ಅಪ್ರಸ್ತುತವಾಗುತ್ತದೆ ಎಂದು ಹಿರಿಯ ವಕೀಲ ಹಾಗೂ ಅನರ್ಹರ ಪರ ವಾದ ಮಂಡಿಸುತ್ತಿರುವ ಮುಕುಲ್ ರೋಹ್ಟಗಿ ಹೇಳಿದ್ದಾರೆ.