ETV Bharat / bharat

ಜಿಯೋ ಫೈಬರ್​​​ ಹೊಸ ಗ್ರಾಹಕರಿಗೆ ಬಂಪರ್​​​ ಕೊಡುಗೆ... ಕಂಡಿಷನ್​​ ಇಲ್ಲದೇ 30 ದಿನ ಎಲ್ಲವೂ ಉಚಿತ! - ಜಿಯೋ ಫೈಬರ್​​ ಚಂದಾದಾರಿಕೆ

ದೇಶಾದ್ಯಂತ ಹೊಸ ಹೊಸ ಯೋಜನೆಗಳಿಂದ ಚಂದಾದಾರರ ಗಮನ ಸೆಳೆಯುತ್ತಿರುವ ಜಿಯೋ ಫೈಬರ್​​ ಇದೀಗ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲು ಹೊಸ ಪ್ಲಾನ್​ ಜಾರಿಗೊಳಿಸುತ್ತಿದೆ.

JioFiber
JioFiber
author img

By

Published : Aug 31, 2020, 3:22 PM IST

ಮುಂಬೈ: ದೇಶಾದ್ಯಂತ ಈಗಾಗಲೇ ಜಿಯೋ ಫೈಬರ್​ ಲಾಂಚ್​ ಮಾಡಿರುವ ರಿಲಿಯನ್ಸ್​​ ಜಿಯೋ, ಹೆಚ್ಚು ಹೆಚ್ಚು ಗ್ರಾಹಕರನ್ನ ತನ್ನತ್ತ ಸೆಳೆಯಲು ಮುಂದಾಗಿದೆ. ಆದರೆ ಇದೀಗ ಹೊಸ ಚಂದಾದಾರರಿಗೆ ಮತ್ತೊಂದು ಬಂಪರ್​​​ ಯೋಜನೆ ಘೋಷಣೆ ಮಾಡಿದೆ.

ಯಾವುದೇ ಕಂಡಿಷನ್​ ಇಲ್ಲದೇ 30 ದಿನಗಳ ಕಾಲ ಅನಿಯಮಿತ 150 ಎಂಬಿಪಿಎಸ್​​ ಇಂಟರ್​ನೆಟ್​​​ ಹಾಗೂ 4,000 ಸೆಟ್​​ಆಪ್​​​​ ಬಾಕ್ಸ್​​ ನೀಡುವುದಾಗಿ ಘೋಷಣೆ ಮಾಡಿದೆ. ಪ್ರತಿಯೊಬ್ಬ ಭಾರತೀಯನ ಮನೆಗೆ ಈ ಕೊಡುಗೆ ನೀಡುವ ಉದ್ದೇಶದಿಂದ ಯೋಜನೆ ಜಾರಿಗೊಳಿಸುತ್ತಿರುವುದಾಗಿ ಜಿಯೋ ಹೇಳಿಕೊಂಡಿದೆ.

ಹೊಸ ಜಿಯೋ ಫೈಬರ್​​ ಯೋಜನೆ ಇಂತಿವೆ

  • ಅನಿಯಮಿತ ಇಂಟರ್​ನೆಟ್​ ಸೇವೆ
  • ಯೋಜನೆ ತಿಂಗಳಿಗೆ ಕೇವಲ 399 ರೂ. ಮಾತ್ರ
  • ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಟಾಪ್​ 12 paid​​ OTT ಅಪ್ಲಿಕೇಶನ್​ ಚಂದಾದಾರಿಕೆ
  • ಯಾವುದೇ ಷರತ್ತು ಇಲ್ಲದೇ 30 ದಿನ ಉಚಿತ ಪ್ರಯೋಗ
  • 150 Mbps ಅನಿಯಮಿತ ಇಂಟರ್​ನೆಟ್​​​, ಡೌನ್​ಲೋಡ್​ & ಅಪ್​ಲೋಡ್​​​
  • ಇಷ್ಟವಿಲ್ಲದೇ ಹೋದರೆ ಯಾವುದೇ ಷರತ್ತು ಇಲ್ಲದೇ ವಾಪಸ್​
  • ಹೊಸ ಗ್ರಾಹಕರಿಗೆ 30 ದಿನಗಳ ಕಾಲ ಉಚಿತ ಸೇವೆ

ಸೆಪ್ಟೆಂಬರ್​​ 1ರಿಂದ ಈ ಹೊಸ ಯೋಜನೆ ಜಾರಿಗೊಳ್ಳಲಿದ್ದು, ಈಗಾಗಲೇ ಜಿಯೋ ಫೈಬರ್​ ಬಳಕೆ ಮಾಡುತ್ತಿರುವ ಗ್ರಾಹಕರಿಗೂ ಪರಿಷ್ಕೃತ ಯೋಜನೆ ಜಾರಿಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.