ಮುಂಬೈ: 25 ವರ್ಷಗಳ ಹಿಂದೆ ಪ್ರಾರಂಭವಾಗಿದ್ದ, ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತ ಬಂದ ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಅಲ್ಲದೇ ನರೇಶ್ ಗೋಯಲ್ ಹಾಗೂ ಅವರ ಪತ್ನಿ ಅನಿತಾ ಗೋಯಲ್ ಕೂಡ ಏರ್ವೇಸ್ ಬೋರ್ಡ್ನಿಂದಲೇ ಹೊರ ಬಂದಿದ್ದಾರೆ ಎಂದು ಹಾಗೂ ಇನ್ನು ಮುಂದೆ ಕಂಪನಿಯ ಮಧ್ಯಂತರ ನಿರ್ವಹಣಾ ಸಮಿತಿಯು ಸಾಲದಾತರ ಸಲಹೆ ಮೇರೆಗೆ ಏರ್ಲೈನ್ನ ದಿನನಿತ್ಯದ ಕಾರ್ಯಗಳನ್ನು, ನಗದು ವ್ಯವಹಾರಗಳನ್ನು ನೋಡಿಕೊಳ್ಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಏರ್ಲೈನ್ ಒಂದು ಬಿಲಿಯನ್ ಡಾಲರ್ ಸಾಲವನ್ನು ಹೊಂದಿದ್ದು, ತನ್ನ ಪೈಲಟ್ಗಳಿಗೆ ಬಾಕಿ ಸಂಬಳ ನೀಡುವುದರ ಜೊತೆಗೆ ಬ್ಯಾಂಕುಗಳಿಗೆ, ಪೂರೈಕೆದಾರರಿಗೆ ಹಣ ಮರುಪಾವತಿ ಮಾಡಬೇಕಿದೆ.
ಗ್ಲೋಬಲ್ ಕಾಂಪ್ಲಿಯನ್ಸ್ನ ಉಪಾಧ್ಯಕ್ಷ ಹಾಗೂ ಕಂಪನಿಯ ಕಾರ್ಯದರ್ಶಿ ಕುಲ್ದೀಪ್ ಶರ್ಮಾ ಹೇಳಿಕೆಯ ಪ್ರಕಾರ ಸಾಲದಾತರು, ಹೊಸ ಹೂಡಿಕೆದಾರರ ಷೇರುಗಳ ಮಾರಾಟ / ವಿತರಣೆಗಾಗಿ ಬಿಡ್ಡಿಂಗ್ ಪ್ರಕ್ರಿಯೆಯನ್ನು ಆರಂಭಿಸಲಿದ್ದು, ಪ್ರಸಕ್ತ ಹಣಕಾಸು ವರ್ಷದ ಜೂನ್ ಒಳಗೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.