ETV Bharat / bharat

ರೊನಾಲ್ಡ್‌ ರೇಗನ್‌, ಬಿಲ್‌ ಕ್ಲಿಂಟನ್‌ ಮನಗೆದ್ದ ಗಿಟಾರ್ ವಾದಕ ಕೊರೊನಾದಿಂದ ನಿಧನ

ಕೊರೊನಾ ವೈರಸ್ ಪಾಸಿಟಿವ್ ಬಂದಿದ್ದ ಖ್ಯಾತ ಗಿಟಾರಿಸ್ಟ್ ಬಕ್ಕಿ ಫಿಜ್ಜರೆಲ್ಲಿ ಇಂದು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

Jazz guitarist Bucky Pizzarelli dies at 94 from coronavirus
ಶ್ವೇತ ಭವನದಲ್ಲಿ ಗಿಟಾರ್ ನುಡಿಸಿದ್ದಾತ ಕೊರೊನಾದಿಂದ ಸಾವು...?
author img

By

Published : Apr 3, 2020, 8:32 PM IST

ವಾಷಿಂಗ್ಟನ್​​: ನ್ಯೂಜೆರ್ಸಿಯಲ್ಲಿ ಹಾಲ್​ಆಫ್​ ಫೇಮ್​ ಗೌರವ ಪಡೆದಿದ್ದ ಖ್ಯಾತ ಗಿಟಾರ್ ಕಲಾವಿದ ಬಕ್ಕಿ ಫಿಜ್ಜರೆಲ್ಲಿ ತಮ್ಮ 94ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ.

ಸಾಯುವುದಕ್ಕೂ ಮೊದಲು ಇವರಿಗೆ ಕೊರೊನಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್​ ಎಂದು ತಿಳಿದುಬಂದಿತ್ತು. ಈ ಸಂಗೀತ ಕಲಾವಿದ ತಮ್ಮ ವೃತ್ತಿ ಜೀವನದಲ್ಲಿ ಶ್ವೇತಭವನದಲ್ಲೂ ಅಧ್ಯಕ್ಷರ ಪರವಾಗಿ ಗಿಟಾರ್ ನುಡಿಸಿ ಪ್ರಖ್ಯಾತರಾಗಿದ್ದರು. ಇದೀಗ ತಮ್ಮ 94ನೇ ವಯಸ್ಸಿನಲ್ಲಿ ಇಲ್ಲಿನ ಸ್ಯಾಡಲ್​ ನದಿ ತೀರದಲ್ಲಿರುವ ನಿವಾಸದಲ್ಲಿ ಮೃತಪಟ್ಟಿದ್ದಾರೆ.

ನ್ಯೂಜೆರ್ಸಿಯ ಪ್ಯಾಟರ್ಸನ್​​​​ನಲ್ಲಿ ಜನಿಸಿದ ಫಿಜ್ಜರೆಲ್ಲಿ 8 ದಶಕಗಳ ಕಾಲ ವೃತ್ತಿ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಅಮೆರಿಕಾದ ಮಾಜಿ ಅಧ್ಯಕ್ಷರುಗಳಾದ ರೊನಾಲ್ಡ್​​​ ರೇಗನ್​ ಮತ್ತು ಬಿಲ್ ಕ್ಲಿಂಟನ್​​ ಸೇರಿದಂತೆ ಹಲವು ಮಾಜಿ ಅಧ್ಯಕ್ಷರಿಗೆ ತಮ್ಮ ಸಂಗೀತದ ಕಂಪನ್ನು ತೋರಿಸಿದ್ದರು. ಅಲ್ಲದೆ ಸಂಗೀತ ವಿದ್ವಾಂಸರು ಎಂದೇ ಹೆಸರು ಗಳಿಸಿದ್ದ ಫ್ರಾಂಕ್ ಸಿನಾತ್ರಾ ಅವರೊಂದಿಗೆ ಸಂಗೀತ ಕಚೇರಿಗಳಲ್ಲೂ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.