ETV Bharat / bharat

ಕುಲ್ಗಾಂನಲ್ಲಿ ಯೋಧ ನಾಪತ್ತೆ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ವಾಹನ ಪತ್ತೆ - ಕುಲ್ಗಾಂ ಜಿಲ್ಲೆ

ಕುಲ್ಗಾಂ ಜಿಲ್ಲೆಯಲ್ಲಿ ಪ್ರಾದೇಶಿಕ ಸೇನೆಯ ಯೋಧನೋರ್ವ ನಾಪತ್ತೆಯಾಗಿದ್ದು, ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅವರ ಕಾರು ಪತ್ತೆಯಾಗಿದೆ. ಯೋಧನನ್ನು ಉಗ್ರರು ಅಪಹರಿಸಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

Jawan goes missing
ಶಕೀರ್ ಮಂಜೂರ್ ವಾಘೆ
author img

By

Published : Aug 3, 2020, 1:13 PM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಪ್ರಾದೇಶಿಕ ಸೇನೆಯ (ಟಿಎ) ಯೋಧನೊಬ್ಬ ನಾಪತ್ತೆಯಾಗಿದ್ದು, ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅವರ ಕಾರು ಪತ್ತೆಯಾಗಿದೆ.

ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಶೋಪಿಯಾನ್‌ ಜಿಲ್ಲೆಯ ರಿಷಿಪೋರಾದ ನಿವಾಸಿ ಶಕೀರ್ ಮಂಜೂರ್ ವಾಘೆ ಪ್ರಾದೇಶಿಕ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕುಲ್ಗಾಂನ ರಂಭಮಾ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಅವರ ಕಾರು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು, ಬಳಿಕ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ಈದ್ ಪ್ರಯುಕ್ತ ಶಕೀರ್ ಮಂಜೂರ್ ರಜೆ ಮೇಲೆ ತಮ್ಮ ಮನೆಗೆ ತೆರಳಿದ್ದರು. ಕರ್ತವ್ಯಕ್ಕೆ ಹಿಂದಿರುಗುವ ವೇಳೆ ಅವರ ಕಾರನ್ನು ತಡೆದು ಉಗ್ರರು ಅಪಹರಿಸಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಅಪಹರಣಕ್ಕೊಳಗಾದ ಯೋಧನನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ಮಂಜೂರ್ ಕುಟುಂಬ ಮನವಿ ಮಾಡಿದೆ. "ದಯವಿಟ್ಟು ನನ್ನ ಮಗನನ್ನು ಬಿಟ್ಟುಬಿಡಿ. ಅವನಿಗೆ ರಾಜೀನಾಮೆ ನೀಡುವಂತೆ ನಾನು ಮನವೊಲಿಸುತ್ತೇನೆ" ಎಂದು ಶಕೀರ್ ಅವರ ತಂದೆ ಮಂಜೂರ್ ಅಹ್ಮದ್ ವಾಘೆ ಬೇಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.