ETV Bharat / bharat

ಜಮ್ಮು ಮತ್ತು ಕಾಶ್ಮೀರ : ಆಡಳಿತಶಾಹಿ ನಾಟಕೀಯತೆಯಿಂದ ರಾಜಕೀಯ ಭೂದೃಶ್ಯದವರೆಗೆ - Article 370

ನೂತನ ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನದಲ್ಲಿ, ಆಡಳಿತಶಾಹಿಯು ಕಟು ಚಳಿಗಾಲದ ಕ್ರೋಧ ಎದುರಿಸಬೇಕಿರುವುದು ಹಾಗೂ ತಮಗೆ ಈ ಮುಂಚೆ ರೂಢಿಯಲ್ಲಿ ಇದ್ದಿರದ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಜನರಿಗೆ ಸೇವೆಗಳನ್ನು ಒದಗಿಸಬೇಕಿದೆ ಎಂಬುದನ್ನು ಬಿಟ್ಟರೆ, ಅಲ್ಲಿ ಅಕ್ಷರಶಃ ಯಾವುದೇ ಬದಲಾವಣೆ ಆಗಿಲ್ಲ..

ಜಮ್ಮು ಮತ್ತು ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರ
author img

By

Published : Aug 9, 2020, 5:25 PM IST

ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಗೊಂಡ ನಂತರ, ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಯಾವುದೇ ವಿಶೇಷ ಸ್ಥಾನಮಾನವಿಲ್ಲದೇ ಹಾಗೂ ಸಂಬಂಧಿತ ರಾಜಕೀಯ ಸೌಲಭ್ಯಗಳಿಲ್ಲದೇ ಹಾಗೇ ಉಳಿದಿದೆ. ಹೊಸ ವ್ಯವಸ್ಥೆಯಲ್ಲಿ, ಕಾನೂನಿನ ಸಂಕೀರ್ಣತೆಗಳೊಂದಿಗೆ ವ್ಯವಹರಿಸಲು ಅಧಿಕಾರಶಾಹಿಯ ಅವಶ್ಯಕತೆಯಿದೆ. ಮರುಸಂಘಟನೆ ಕಾಯ್ದೆ 2019 ಜಾರಿಗೊಳಿಸುವ ಉದ್ದೇಶದಿಂದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಉಂಟಾದ ಬೆಳವಣಿಗೆ ಇದು.

ಈ ಕೆಲಸ ನಿರ್ವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಗಿರೀಶ ಚಂದ್ರ ಮುರ್ಮು ಅವರನ್ನು ಬಿಟ್ಟರೆ ಬೇರೆ ಯಾರೂ ಸೂಕ್ತ ವ್ಯಕ್ತಿಯಾಗಿದ್ದಿಲ್ಲ. ಯಾಕೆಂದರೆ, ಇಶ್ರತ್‌ ಜಹಾನ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಅವರು ತಮ್ಮ ನಿಯತ್ತನ್ನು ಈಗಾಗಲೇ ತೋರಿಸಿ ಕೊಟ್ಟಾಗಿದೆ. ಒಬ್ಬ ಅಧಿಕಾರಿಯಾಗಿಯೂ ಅವರ ಕುಶಾಗ್ರಮತಿ ಕುರಿತಂತೆಯೂ ಪ್ರಧಾನಮಂತ್ರಿಗಳಿಗೆ ಯಾವುದೇ ಗೊಂದಲಗಳಿಲ್ಲ. ಯಾಕೆಂದರೆ, ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ, ಅವರ ಖಾಸಗಿ ಕಾರ್ಯದರ್ಶಿಯಾಗಿಯೂ ಮುರ್ಮು ಅವರು ಸೇವೆ ಸಲ್ಲಿಸಿದ್ದರು.

ಗುಜರಾತ್‌ ಕೇಡರ್‌ನ ಐಎಎಸ್‌ ಅಧಿಕಾರಿಯಾಗಿರುವ ಗಿರೀಶ ಚಂದ್ರ ಮುರ್ಮು ಅವರು ಸಾಕಷ್ಟು ಸಂಕೀರ್ಣ ಕಾನೂನು ವಿಷಯಗಳನ್ನು ನಿಭಾಯಿಸಬೇಕಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಸ್ಥಾನಮಾನವನ್ನು ಈಗ ಕೆಳಕ್ಕಿಳಿಸಲಾಗಿದೆಯಲ್ಲದೇ, ಅದನ್ನು ಹರಿದು ಎರಡು ಕೇಂದ್ರಾಡಳಿತ ಪ್ರದೇಶಗಳು, ಒಂದು ಶಾಸನಸಭೆಯನ್ನಾಗಿಸಲಾಗಿದೆ. ಇನ್ನೊಂದು ಪ್ರದೇಶವನ್ನು ಹಾಗೇ ಬಿಡಲಾಗಿದೆ. ಇದಕ್ಕೂ ಮುಂಚೆ ಎರಡು ರಾಜಧಾನಿಗಳ ಸಹಿತ ಜಂಗಮ ಮುಖ್ಯಮಂತ್ರಿಗಳ ಸಚಿವಾಲಯ ಹಾಗೂ ರಾಜಭವನವನ್ನು ಹೊಂದಿದ್ದ ಈ ಪ್ರದೇಶವು ಈಗ ಕೇಂದ್ರಾಡಳಿತ ಪ್ರದೇಶ ಎಂಬ ಹಣೆಪಟ್ಟಿಗೆ ತೃಪ್ತಿಪಡಬೇಕಿದೆ.

ನೂತನ ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನದಲ್ಲಿ, ಆಡಳಿತಶಾಹಿಯು ಕಟು ಚಳಿಗಾಲದ ಕ್ರೋಧ ಎದುರಿಸಬೇಕಿರುವುದು ಹಾಗೂ ತಮಗೆ ಈ ಮುಂಚೆ ರೂಢಿಯಲ್ಲಿ ಇದ್ದಿರದ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಜನರಿಗೆ ಸೇವೆಗಳನ್ನು ಒದಗಿಸಬೇಕಿದೆ ಎಂಬುದನ್ನು ಬಿಟ್ಟರೆ, ಅಲ್ಲಿ ಅಕ್ಷರಶಃ ಯಾವುದೇ ಬದಲಾವಣೆ ಆಗಿಲ್ಲ. ಇದಕ್ಕೂ ಮುಂಚೆ ಚಳಿಗಾಲದಲ್ಲಿ ಇಡೀ ಸಚಿವಾಲಯವು ಜಮ್ಮುವಿಗೆ ತೆರಳುತ್ತಿತ್ತು ಹಾಗೂ ಬೇಸಿಗೆಯಲ್ಲಿ ಮತ್ತೆ ಶ್ರೀನಗರಕ್ಕೆ ವಾಪಸಾಗುತ್ತಿತ್ತು. ಈ ಪದ್ಧತಿಯಿಂದಾಗಿ ಅಧಿಕಾರಶಾಹಿ ಹಾಗೂ ಅವರ ಕುಟುಂಬಗಳು ಕಾಶ್ಮೀರ ಮತ್ತು ಲಡಾಖ್‌ನ ಕಟು ಚಳಿಗಾಲವನ್ನು ಎದುರಿಸಬೇಕಿರಲಿಲ್ಲ. ಆದರೆ, ಇನ್ನು ಮುಂದೆ ಪರಿಸ್ಥಿತಿ ಹಳೆಯ ರೀತಿಯಲ್ಲಿರದು.

ಪ್ರತ್ಯೇಕತಾವಾದವನ್ನು ಹದ್ದುಬಸ್ತಿನಲ್ಲಿಡುವ ಉದ್ದೇಶದಿಂದ ರಾಜ್ಯಸೂಚಿಯಲ್ಲಿ ಇಲ್ಲದ ವಿಷಯಗಳನ್ನು ಇತ್ಯರ್ಥಪಡಿಸುವುದು, ಸಶಸ್ತ್ರ ಪಡೆಗಳಿಗೆ ಹೆಚ್ಚಿನ ಅಧಿಕಾರಗಳನ್ನು ನೀಡುವುದು ಹಾಗೂ ಸರ್ಕಾರಿ-ವಿರೋಧಿ ಧ್ವನಿಗಳ ಹುಟ್ಟಡಗಿಸುವಂತೆ ನೋಡಿಕೊಳ್ಳುವುದು, ಅದಕ್ಕಿಂತ ಹೆಚ್ಚಾಗಿ ಭಾರತದ ಪರ ಧ್ವನಿ ಎತ್ತುವಂತೆ ಮಾಡುವಂತಹ ವಿಷಯಗಳೇ ಮುರ್ಮು ಅವರ ಪ್ರಮುಖ ಕಾರ್ಯಸೂಚಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆಯೇ ಹೊರತು ಸ್ಥಳೀಯ ವಿಷಯಗಳಲ್ಲ. ಮೂಲನಿವಾಸಿ ಪ್ರಮಾಣಪತ್ರಗಳ ನೀಡಿಕೆಯು ಹೆಚ್ಚಿನ ಸದ್ದುಗದ್ದಲವಿಲ್ಲದೇ ನಡೆಯಬೇಕಿದೆ. ಸಂವಿಧಾನದ ವಿಧಿ 370 ಕಿತ್ತು ಹಾಕಿದ ನಂತರದ ಹೊಸ ಮರುಸಂಘಟನೆ ಕಾಯ್ದೆಯ ಪ್ರಕಾರ ಆಕಾಂಕ್ಷಿ ಅಭ್ಯರ್ಥಿಗಳಿಗೆ ಪ್ರಮಾಣಪತ್ರಗಳನ್ನು ಒದಗಿಸುವ ಪ್ರಕ್ರಿಯೆ ಯಾವುದೇ ಅಧಿಕಾರಶಾಹಿಯ ರಗಳೆಯಿಲ್ಲದೇ ನಡೆಯಬೇಕಿದ್ದು, ಮುರ್ಮು ಅವರಂತಹ ಅಧಿಕಾರಿ ಮಾತ್ರವೇ ಮಾಡಬಹುದಾದ ಕೆಲಸ ಅದಾಗಿತ್ತು.

ಕಾನೂನುಗಳನ್ನು ಜಾರಿಗೊಳಿಸುವ ಕಾಯ್ದೆಗಳು ಹೇಗೆ ರೂಪಿತವಾಗಿರಬೇಕೆಂದ್ರೆ, ಅವು ಸರ್ಕಾರದ ಕಾರ್ಯಸೂಚಿಗೆ ಪೂರಕವಾಗುವ ರೀತಿಯಲ್ಲಿರಬೇಕು. ಕಾಯ್ದೆಗಳನ್ನು ಜಾರಿಗೊಳಿಸುವ ಕೆಲಸವನ್ನು ಮುರ್ಮು ಅವರು ವಿಶ್ವಾಸದಿಂದ ಮಾಡಿದ್ದಾರಲ್ಲದೇ ಭಿನ್ನಮತದ ಧ್ವನಿಗಳನ್ನು ಬಹುತೇಕ ಸ್ಥಗಿತಗೊಳಿಸುವ ಮಟ್ಟಕ್ಕೆ ತಂದಿದ್ದಾರೆ. ಈ ಪೈಕಿ ಕೆಲವು ಧ್ವನಿಗಳು ತಮ್ಮಷ್ಟಕ್ಕೆ ತಾವೇ ಬಂದಾಗಿದ್ದರೆ, ಇನ್ನು ಕೆಲವನ್ನು ದಬ್ಬಾಳಿಕೆಯ ರಾಜನೀತಿಯಿಂದ ಸಾಧಿಸಲಾಗಿದೆ. ಪ್ರಮುಖ ರಾಜಕೀಯ ಪಕ್ಷಗಳ ಬಹುತೇಕ ಸದಸ್ಯರನ್ನು ಜೈಲಿನಲ್ಲಿಡಲಾಗಿದೆ ಅಥವಾ ಗೃಹಬಂಧನದಲ್ಲಿರಿಸಲಾಗಿದೆ.

ಪಿಡಿಪಿ ಪಕ್ಷದ ರಾಜಕೀಯ ನಾಯಕರೊಬ್ಬರು ತಮ್ಮ ಬಿಡುಗಡೆಯ ನಂತರ ಬಹಿರಂಗಪಡಿಸಿದಂತೆ, ಯಾರು ಸರಿದಾರಿಗೆ ಬಂದಿದ್ದಾರೋ ಅವರೆಲ್ಲರನ್ನು ʼಸರ್ಕಾರ ಹೇಳುವುದನ್ನು ಪಾಲಿಸಲು ಬದ್ಧರಾಗಿದ್ದೇವೆʼ ಎಂಬ ಹೇಳಿಕೆಯನ್ನುಳ್ಳ ದಾಖಲೆಗೆ ಸಹಿ ಮಾಡಿಸಿಕೊಂಡು, ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ. ಅಧಿಕಾರಶಾಹಿಯ ಭಾಷೆಯನ್ನು ಅರ್ಥ ಮಾಡಿಕೊಂಡಿರುವ ವ್ಯಕ್ತಿಯಿಂದ ಮಾತ್ರವೇ ಇಂತಹ ದಬ್ಬಾಳಿಕೆಯ ರಾಜನೀತಿಯು ಕಾನೂನುರೀತ್ಯ ಸಾಧ್ಯವಾಗಬಲ್ಲುದು. ಕಳೆದ ಒಂದು ವರ್ಷದಲ್ಲಿ, ಕಾಶ್ಮೀರವು ರಾಜಕೀಯವಾಗಿ ನಿಶ್ಚೇಷ್ಟವಾಗಿದ್ದರೆ, ಅಧಿಕಾರಶಾಹಿಯು ಸಕ್ರಿಯವಾಗಿ ಹೆಚ್ಚು ಚಾಲ್ತಿಯಲ್ಲಿದೆ.

ಆದರೆ, ಈಗ ರಾಜಕೀಯಕ್ಕೆ ವೇದಿಕೆ ಸನ್ನದ್ಧವಾಗಿದೆ. ಹೊಸ ಪಾತ್ರಕ್ಕೆ ತಾವು ಖಂಡಿತ ಸರಿಹೊಂದುವುದಿಲ್ಲ ಎಂಬುದನ್ನು ಮುರ್ಮು ಅವರು ಕೂಡಾ ಕಂಡುಕೊಂಡಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಅವರ ಪಾತ್ರ ಕಳೆದ ಒಂದು ವರ್ಷದಲ್ಲಿ ಬಹುತೇಕ ರಾಜಕೀಯರಹಿತವಾಗಿತ್ತು. ಆದರೆ, ಈ ಪ್ರದೇಶ ಈಗ ರಾಜಕೀಯಕ್ಕೆ ಮಾಗಿದೆ. ಚುನಾವಣೆಗಳು, ಕ್ಷೇತ್ರವ್ಯಾಪ್ತಿ ನಿರ್ಣಯ ಹಾಗೂ ಇಂಟರ್‌ನೆಟ್‌ ನಿರ್ಬಂಧ ಕುರಿತಂತೆ ಮುರ್ಮು ಅವರು ನೀಡಿರುವ ಕೆಲವು ಹೇಳಿಕೆಗಳು ನವದೆಹಲಿಗೆ ಪಥ್ಯವಾಗಲಿಲ್ಲ. ಹೀಗಾಗಿ, ಈ ಹೇಳಿಕೆಗಳು ಹೊರಬಿದ್ದ ನಂತರ, ಅವರ ದಿನಗಳು ಹತ್ತಿರವಾದವು.

ಹೀಗಿದ್ದರೂ ಮುರ್ಮು ಅವರ ನಿಯತ್ತು ಮತ್ತು ಕುಶಾಗ್ರಮತಿ ಅವರಿಗೆ ಸಿಎಜಿಯಂತಹ ಉತ್ತಮ ಹುದ್ದೆಯನ್ನು ತಂದುಕೊಟ್ಟಿವೆ. ಈಗ ಅವರ ಸ್ಥಾನದಲ್ಲಿ ಬರುತ್ತಿರುವ ಮನೋಜ್‌ ಸಿನ್ಹಾ ಅವರು ಬಿಜೆಪಿ ನಾಯಕತ್ವದ ನಡುವೆ ಸದ್ದಿಲ್ಲದೇ ಕೆಲಸ ಮಾಡುವ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದು, ಜನರೊಂದಿಗೆ ಉತ್ತಮ ಸಂಪರ್ಕ ಸಾಧಿಸಬಲ್ಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ನೂತನ ಲೆಫ್ಟಿನೆಂಟ್‌ ಗವರ್ನರ್‌ ಆಗಿ ಸಿನ್ಹಾ ಅವರ ನೇಮಕವು ಈ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳನ್ನು ಮತ್ತೆ ಗರಿಗೆದರಿಸುವ ಉದ್ದೇಶ ಹೊಂದಿವೆ. ಯಾಕೆಂದರೆ, ಪ್ರಮುಖ ಕಾರ್ಯಾಚರಣೆಯ ನಂತರ, ಬಹುತೇಕ ಎಲ್ಲಾ ನಾಯಕರನ್ನು ಕಂಬಿಗಳ ಹಿಂದೆ ಹಾಕಿದ್ದರಿಂದ, ರಾಜಕೀಯ ಚಟುವಟಿಕೆಗಳು ನಶಿಸಿಹೋಗಿದ್ದವು.

ರಾಜಕೀಯ ಮುಖ್ಯವಾಹಿನಿಯಲ್ಲಿ ಸಹಜತೆಯನ್ನು ಮರುಕಳಿಸುವ ಉದ್ದೇಶದಿಂದ ಮತ್ತೆ ಹಿಂದಿರುಗುವಂತಹ ಹಳೆಯ ನಾಯಕರನ್ನು ಬಿಟ್ಟರೆ ಹೊಸ ಅಥವಾ ಆಸಕ್ತಿ ಕೆರಳಿಸುವಂತಹ ಯಾವೊಂದು ಬೆಳವಣಿಗೆಯೂ ಸದ್ಯಕ್ಕೆ ಅಲ್ಲಿ ಕಂಡು ಬರುತ್ತಿಲ್ಲ. ಆದರೆ, ಈಗ ಯಾರೆಲ್ಲ ಬಿಡುಗಡೆಯಾಗಿದ್ದಾರೋ, ಅವರೆಲ್ಲ ಈ ನಿರ್ಣಯವನ್ನು ತಮ್ಮ ಹಣೆಬರಹ ಎಂದು ಒಪ್ಪಿಕೊಂಡವರು ಎಂಬುದು ಮಾತ್ರ ಗೋಡೆ ಮೇಲಿನ ಬರಹದಷ್ಟೇ ಸ್ಪಷ್ಟ ಹಾಗೂ ನಿರ್ವಿವಾದ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.