ಜಲಂಧರ್ (ಪಂಜಾಬ್): ''ಮಾಲಿನ್ಯ ನಮ್ಮನ್ನು ಅಂಧರನ್ನಾಗಿಸುತ್ತದೆ'' ಎಂದು ಟ್ವೀಟ್ ಮಾಡಿರುವ ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅದ್ಭುತವಾದ ಫೋಟೋವೊಂದು ಅದೇ ಟ್ವೀಟ್ನಲ್ಲಿ ಲಗತ್ತಿಸಿದ್ದಾರೆ.
-
When people of #Jalandhar saw #Dhauladhar range first time ever. Dhualdhar’s mountain ranges lies at a distance of 213 kms from Jalandhar. This is how pollution made us blind !! PC Net. pic.twitter.com/Q0qNmaybJw
— Parveen Kaswan, IFS (@ParveenKaswan) April 3, 2020 " class="align-text-top noRightClick twitterSection" data="
">When people of #Jalandhar saw #Dhauladhar range first time ever. Dhualdhar’s mountain ranges lies at a distance of 213 kms from Jalandhar. This is how pollution made us blind !! PC Net. pic.twitter.com/Q0qNmaybJw
— Parveen Kaswan, IFS (@ParveenKaswan) April 3, 2020When people of #Jalandhar saw #Dhauladhar range first time ever. Dhualdhar’s mountain ranges lies at a distance of 213 kms from Jalandhar. This is how pollution made us blind !! PC Net. pic.twitter.com/Q0qNmaybJw
— Parveen Kaswan, IFS (@ParveenKaswan) April 3, 2020
ಈ ಫೋಟೋ ಅನ್ನು ಪಂಜಾಬ್ ರಾಜ್ಯದ ಜಲಂಧರ್ನಿಂದ ತೆಗೆಯಲಾಗಿದ್ದು, ಹಿಮಾಚಲ ಪ್ರದೇಶದ ಧುಲಂಧರ್ ಪರ್ವತ ಶ್ರೇಣಿ ಅತ್ಯಂತ ಶುಭ್ರವಾಗಿ ಗೋಚರಿಸುತ್ತಿದೆ. ಸುಮಾರು 213 ಕಿಲೋಮೀಟರ್ ದೂರದಲ್ಲಿರುವ ಈ ಪರ್ವತ ಶ್ರೇಣಿಗಳು ವಾತಾವರಣ ಮಾಲಿನ್ಯರಹಿತವಾಗಿರುವ ಕಾರಣದಿಂದ ದಶಕಗಳ ನಂತರ ಇದೇ ಮೊದಲ ಬಾರಿಗೆ ಸ್ಪಷ್ಟವಾಗಿ ಗೋಚರಿಸುತ್ತಿವೆ.
ಕೊರೊನಾ ಭೀತಿಯಿಂದ ಭಾರತದಲ್ಲಿ ಘೋಷಣೆಯಾಗಿರುವ ಲಾಕ್ಡೌನ್ ಪರಿಣಾಮದಿಂದ ಪರಿಸರ ಮಾಲಿನ್ಯ ಕಡಿಮೆಯಾಗಿದ್ದು, ಪ್ರಕೃತಿ ಕಂಗೊಳಿಸುತ್ತಿರುವುದಕ್ಕೆ ಈ ಸನ್ನಿವೇಶ ಸಾಕ್ಷ್ಯ ಒದಗಿಸುವಂತಿದೆ.