ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.
ಜೂನ್ 15 ಮುಂಜಾನೆ 2.51ಕ್ಕೆ ಸರಿಯಾಗಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಚಂದ್ರಯಾನ-2 ಹೊತ್ತ ರಾಕೆಟ್ ನಭಕ್ಕೆ ಹಾರಲಿದೆ.
ಚಂದ್ರನ ಮೇಲೆ ನೌಕೆಯನ್ನು ಇಳಿಸಿ ಸಂಪೂರ್ಣ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಇಸ್ರೋ ಚಂದ್ರಯಾನ-2ರ ಯೋಜನೆ ರೂಪಿಸಿದೆ. ಜೂನ್ 15ರಂದು ಆಗಸದತ್ತ ಚಿಮ್ಮಲಿರುವ ಜಿಎಸ್ಎಲ್ವಿ ಎಂಕೆ-3 ರಾಕೆಟ್ ಸೆಪ್ಟೆಂಬರ್ 6ರಂದು ಚಂದ್ರನ ಅಂಗಳದಲ್ಲಿ ಇಳಿಯಲಿದೆ.
ಸುಮಾರು 978 ಕೋಟಿ ರೂ ವೆಚ್ಚದ ಚಂದ್ರಯಾನ-2 ಬಹುತೇಕ ಹಾಲಿವುಡ್ ಸಿನಿಮಾದ ಬಜೆಟ್ಗಿಂತಲೂ ಕಮ್ಮಿ ಎನ್ನುವುದು ವಿಶೇಷ. ಕೆಲ ತಿಂಗಳ ಹಿಂದೆ ತೆರೆಗಪ್ಪಳಿಸಿ ದೊಡ್ಡ ಯಶಸ್ಸು ಸಾಧಿಸಿದ್ದ ಹಾಲಿವುಡ್ ಅವೇಂಜರ್ಸ್: ಎಂಡ್‌ಗೇಮ್ ಚಿತ್ರದ ಬಜೆಟ್‌ಗಿಂತ ಅರ್ಧದಷ್ಟು ಕಡಿಮೆ ಖರ್ಚಿನಲ್ಲಿ ಚಂದ್ರಯಾನ-2 ಪೂರ್ಣವಾಗಿದೆ.