ETV Bharat / bharat

ಜೈಲು ಹಕ್ಕಿಗಳಿಗೆ ಲಕ್ಕಿಯಾದ ಕೊರೊನಾ... 1 ಲಕ್ಷ ಕೈದಿಗಳ ತಾತ್ಕಾಲಿಕ ಬಿಡುಗಡೆಗೆ ಆದೇಶ - ಇರಾನ್​ ಕೈದಿಗಳು

ಕೊರೊನಾ ವೈರಸ್​ ಭೀತಿಯಿಂದಾಗಿ ಇರಾನ್​ನಲ್ಲಿ ಸುಮಾರು ಒಂದು ಲಕ್ಷ ಕೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆಗೊಳಿಸಲಾಗಿದೆ. ಏಪ್ರಿಲ್​ 20ರವರೆಗೆ ಅವರನ್ನು ಬಿಡುಗಡೆ ಮಾಡಲಾಗುತ್ತಿದ್ದು ಕೊರೊನಾ ಭೀತಿ ಕಡಿಮೆಯಾದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

Iran temporarily frees prisoners
ಇರಾನ್​​ನಲ್ಲಿ ಕೈದಿಗಳ ಬಿಡುಗಡೆ
author img

By

Published : Mar 30, 2020, 7:49 AM IST

ಟೆಹರಾನ್​: ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಸುಮಾರು ಒಂದು ಲಕ್ಷ ಕೈದಿಗಳನ್ನು ತಾತ್ಕಾಲಿಕವಾಗಿ ಜೈಲುಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಇರಾನ್ ನ್ಯಾಯಾಂಗ ನ್ಯಾಯಾಂಗ ವಕ್ತಾರ ಘೊಲಾಮ್​​​ಹೊಸೈನ್​​ ಎಸ್ಮೈಲಿ ಸ್ಪಷ್ಟಪಡಿಸಿದ್ದಾರೆ. ಟಿವಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಅವರು ಕೈದಿಗಳನ್ನು ಬಿಡುಗಡೆಗೊಳಿಸಿರುವವುದಾಗಿ ಹೇಳಿಕೆ ನೀಡಿದ್ದಾರೆ.

ಇರಾನ್​ ಅಧ್ಯಕ್ಷ ಹಸನ್​ ರೌಹಾನಿ ಕೆಲ ದಿನಗಳ ಹಿಂದೆ ಕೈದಿಗಳನ್ನು ಏಪ್ರಿಲ್​​​​ 20ರವರೆಗೆ ಬಿಡುಗಡೆಗೊಳಿಸಬೇಕೆಂದು ಆದೇಶಿಸಿದ್ದರು. ಮಾರ್ಚ್ ಆರಂಭದಲ್ಲಿ ಸುಮಾರು 54 ಸಾವಿರ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೆ ಸಾವಿರಾರು ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಏಪ್ರಿಲ್​ 20ರ ನಂತರ ಪರಿಸ್ಥಿತಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ.

ಕೊರೊನಾ ಸೋಂಕು ಇರಾನ್​ನಲ್ಲಿ ಸಾಕಷ್ಟು ಉಪಟಳ ನೀಡುತ್ತಿದ್ದು ಮೊದಲ ಸೋಂಕಿತ ವ್ಯಕ್ತಿ ಫೆಬ್ರವರಿ 19ರಂದು ಕಾಣಿಸಿಕೊಂಡಿದ್ದ. ಈವರೆಗೂ ಇರಾನ್​ನಲ್ಲಿ ಸುಮಾರು 38 ಸಾವಿರಕ್ಕೂ ಹೆಚ್ಚು ಮಂದಿ ವೈರಸ್​ನಿಂದ ಸೋಂಕಿತರಾಗಿದ್ದಾರೆ.​​ 2,460 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದ್ದು 12 ಸಾವಿರಕ್ಕೂ ಹೆಚ್ಚು ಮಂದಿಯನ್ನು ಗುಣಪಡಿಸಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.