ನವದೆಹಲಿ: ಬ್ರಿಟನ್ನ ತೈಲ ಟ್ಯಾಂಕರ್ಅನ್ನು ಇರಾನ್ ವಶಕ್ಕೆ ಪಡೆದ ಕಾರಣ ಅಲ್ಲಿಯೇ ಬಂಧನಕ್ಕೊಳಗಾಗಿದ್ದ ಭಾರತೀಯ ಸಿಬ್ಬಂದಿ ಪೈಕಿ 9 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.
ಇತ್ತೀಚೆಗೆ ಬ್ರಿಟನ್ನ ತೈಲ ಟ್ಯಾಂಕರ್ ಸ್ಟೆನಾ ಇಂಪೀರೋ ಹಾಗೂ ಎಂಟಿ ರಿಯಾಹ್ ಹಡಗುಗಳನ್ನು ವಶಕ್ಕೆ ಪಡೆದ ಇರಾನ್ ಅಧಿಕಾರಿಗಳು 21 ಮಂದಿ ಭಾರತೀಯರನ್ನು ಬಂಧಿಸಿದ್ದರು. ಈ ಹಡಗುಗಳು ಅಂತಾರಾಷ್ಟ್ರೀಯ ಕಡಲ ನಿಯಮಗಳನ್ನು ಉಲ್ಲಂಘನೆ ಮಾಡಿವೆ ಎಂಬುದು ಇರಾನ್ನ ರೆವಲ್ಯೂಷನರಿ ಗಾರ್ಡ್ನ ಆರೋಪವಾಗಿತ್ತು.
ಸದ್ಯ ಎಂಟಿ ರಿಯಾಹ್ನಲ್ಲಿದ್ದ 12 ಭಾರತೀಯರಲ್ಲಿ 9 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಭಾರತೀಯ ಸಿಬ್ಬಂದಿ ರಕ್ಷಣೆಗೆ ಅಲ್ಲಿನ ರಾಯಭಾರಿಗಳು ಯತ್ನಿಸುತ್ತಿದ್ದಾರೆ.
ಇನ್ನು ಸ್ಪಾನಿಷ್ನ ಬಂದರು ಬಳಿ ಗ್ರೇಸ್ 1 ಶಿಪ್ ಸೀಜ್ ಮಾಡುವ ವೇಳೆ ಬ್ರಿಟಿಷ್ ನೌಕಾಪಡೆ ಹಾಗೂ ಗಿಬ್ರಾಲ್ತಾರ್ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ 24 ಭಾರತೀಯ ಸಿಬ್ಬಂದಿಯನ್ನು ಭಾರತೀಯ ಅಧಿಕಾರಿಗಳು ಸಂಪರ್ಕಿಸಿದ್ದಾಗಿ ವಿದೇಶಾಂಗ ಇಲಾಖೆ ಹೇಳಿದೆ.