ನವದೆಹಲಿ:ಹಲವು ತಿಂಗಳ ವಿಳಂಬದ ಬಳಿಕ ಇಂದು ನಡೆಯಬೇಕಿದ್ದ ಅನರ್ಹ ಶಾಸಕರ ಶಾಸಕರ ಅರ್ಜಿ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಲಾಗಿದೆ.
ಕರ್ನಾಟಕ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ನೀಡಿದ್ದ ತೀರ್ಪು ಪ್ರಶ್ನಿಸಿ 17 ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಂಡಿತ್ತು. ಆದರೆ, ತ್ರಿಸದಸ್ಯ ಪೀಠದಲ್ಲಿ ಇದ್ದ ನ್ಯಾ.ಮೋಹನ್ ಶಾಂತನಗೌಡರ ಅವರು ತಾವು ಕರ್ನಾಟಕ ಮೂಲದವರು ಎಂಬ ಕಾರಣ ನೀಡಿ, ವಿಚಾರಣೆಯಿಂದ ಹಿಂದೆ ಸರಿದಿದ್ದರಿಂದ, ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಪೀಠ ಮುಂದೂಡಿತು.
ಈಗಾಗಲೇ ಅರ್ಜಿ ವಿಚಾರಣೆ ಭಾರಿ ವಿಳಂಬವಾಗಿದೆ. ಇಂದೇ ವಿಚಾರಣೆ ಮುಂದುವರಿಸಿ ಎಂದು ಅರ್ಜಿದಾರರ ಪರ ವಕೀಲ ಮುಕುಲ್ ರೋಹ್ಟಗಿ ಮನವಿ ಮಾಡಿದರು.ಇನ್ನು ನ್ಯಾಯಮೂರ್ತಿಗಳ ಬಗ್ಗೆ ನಮ್ಮದೇನು ಅಂಭ್ಯತರ ಇಲ್ಲ ಎಂದು ಕೆಪಿಸಿಸಿ ಪರ ವಕೀಲ ಕಪಿಲ್ ಸಿಬಲ್ ಹೇಳಿದರು.ಆದರೆ, ನ್ಯಾಯಪೀಠ ಇಂದೇ ವಿಚಾರಣೆ ನಡೆಸಲು ನಿರಾಕರಿಸಿದ್ದು, ಹೊಸ ಪೀಠ ರಚನೆ ಆಗಬೇಕಿರುವುದರಿಂದ ಸೋಮವಾರಕ್ಕೆ ವಿಚಾರಣೆ ಮುಂದೂಡಿತು.