ಚಂಡೀಗಢ: ಭಾರತೀಯ ವಾಯುಸೇನೆಗೆ ಈಗ ಮಹಾನ್ ಶಕ್ತಿ ಸಿಕ್ಕಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಅಮೆರಿಕ ನಿರ್ಮಿತ ಹೆಚ್ಚು ಭಾರ ಸಾಗಿಸುವ ನಾಲ್ಕು ಚಿನೂಕ್ ಹೆಲಿಕಾಪ್ಟರ್‌ಗಳು ನಿನ್ನೆ ವಾಯುಸೇನೆಗೆ ಸೇರಿವೆ. ನಿನ್ನೆ ಪಂಜಾಬ್‌ನ ಚಂಡೀಗಢದ ಏರ್‌ಫೋರ್ಸ್ ಸ್ಟೇಷನ್ 12 ವಿಂಗ್‌ಗೆ ಚಿನೂಕ್ ಹೆಲಿಕಾಪ್ಟರ್‌ಗಳು ಹಸ್ತಾಂತರವಾಗಿವೆ.
ಹೆಚ್ಚು ಭಾರ ಹೊತ್ತೊಯ್ಯಬಲ್ಲ ಸಾಮರ್ಥ್ಯದ ‘ಚಿನೂಕ್’ ಕಾಪ್ಟರ್‌ಗಳು ಭಾರತ ಮತ್ತು ಅಮೆರಿಕ ಮಧ್ಯೆದ ರಕ್ಷಣಾ ಸಂಬಂಧ ಮತ್ತಷ್ಟು ವೃದ್ಧಿಸಲಿವೆ. ಸೇನೆ ಸೇರಿರುವ ಚಿನೂಕ್ ಕಾಪ್ಟರ್‌ಗಳು ರಾಷ್ಟ್ರೀಯ ಆಸ್ತಿ ಅಂತಾ ಏರ್‌ಚೀಫ್ ಮಾರ್ಷಲ್ ಬಿ.ಎಸ್ ಧನೋವಾ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕಾದಿಂದ ಸಾಗರಮಾರ್ಗವಾಗಿ ಗುಜರಾತ್‌ನ ಮಂದ್ರಾ ಬಂದರಿಗೆ ಆಮದಾಗಿದ್ದವು. 2018ರಲ್ಲಿ ಅಮೆರಿಕಾ ಜತೆ ಭಾರತ ಚಿನೂಕ್ ಖರೀದಿ ಒಪ್ಪಂದ ಮಾಡಿಕೊಂಡಿತ್ತು. 15 ಚಿನೂಕ್ ಹಾಗೂ 22 ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳ ಖರೀದಿಗಾಗಿ ₹ 20 ಸಾವಿರ ಕೋಟಿ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು ಅಂತಾ ಬೋಯಿಂಗ್ ಇಂಡಿಯಾ ಹೇಳಿದೆ. ಈಗಾಗಲೇ ವಾಯುಸೇನೆಯಲ್ಲಿರುವ ರಷ್ಯಾ ನಿರ್ಮಿತ Mi-17 ಮೀಡಿಯಂ ಲಿಫ್ಟ್ ಹೆಲಿಕಾಪ್ಟರ್‌ಗಳು, Mi-26 ಹಾಗೂ Mi-35 ಅಟ್ಯಾಕ್ ಕಾಪ್ಟರ್‌ಗಳ ಸ್ಥಾನ ಚಿನೂಕ್ ತುಂಬಲಿವೆ.
ಪರಿಣಾಮಕಾರಿ ವಿಪತ್ತು ನಿರ್ವಹಣೆ, ಕಾರ್ಯಾಚರಣೆ :
CH-47F (I) ಚಿನೂಕ್‌ಗೆ ಹೆಚ್ಚು ಭಾರ ಸಾಗಿಸುವ ಸಾಮರ್ಥ್ಯವಿದೆ. ಹಿಂದೆ ಮತ್ತು ಮುಂದೆ ಎರಡೂ ಕಡೆ ಹಾರಾಟ ಸಾಧ್ಯ. 19 ರಾಷ್ಟ್ರಗಳು ಚಿನೂಕ್ ಬಳಸುತ್ತಿವೆ. 20 ಸಾವಿರ ಅಡಿ ಮೇಲೆ ಹಾರಾಟ ನಡೆಸುತ್ತೆ. ಪ್ರಕೃತಿ ವಿಕೋಪ ತುತ್ತಾದ ಜನರಿಗೆ ನೆರವು ಮತ್ತು ರಕ್ಷಣಾ ಕಾರ್ಯಾಚರಣೆ ಪರಿಣಾಮಕಾರಿಯಾಗಿ ನಡೆಸಬಹುದು. ಚಿನೂಕ್ ಎರಡು ಯಂತ್ರ ಹೊಂದಿದೆ. ಒಂದು ಕೈಕೊಟ್ಟರೂ ಇನ್ನೊಂದಿರುತ್ತೆ. ಪ್ರಕೃತಿ ವಿಕೋಪ ಕಾರ್ಯಾಚರಣೆ, ಏರ್ ಆಂಬ್ಯುಲೆನ್ಸ್, ನಾಪತ್ತೆಯಾದವರ ಹುಡುಕಾಟ, ಏರ್‌ಕ್ರಾಫ್ಟ್ ರಿಕವರಿ, ಪ್ಯಾರಾಚುಟ್ ಡ್ರಾಪ್ ಮಾಡಬಹುದು. ಪ್ರತಿ ಚಿನೂಕ್ 9.6 ಟನ್ ಭಾರ ಹೊರಬಲ್ಲದು.
ಸರಕು, ಜನರು, ಯಂತ್ರಗಳು, ಫಿರಂಗಿ ಗನ್‌ಗಳು, ಕಡಿಮೆ ಭಾರದ ಸೇನಾ ವಾಹನಗಳನ್ನ ಸಾಗಿಸಬಲ್ಲದು. ಹಿಮಾಲಯಗಳಲ್ಲಿ ಕಾರ್ಯಾಚರಣೆ, ಸಂಚಾರ ಸಾಧ್ಯವಿರದ ಗಿರಿಶಿಖರಗಳಲ್ಲಿ ರಸ್ತೆ ನಿರ್ಮಾಣಕ್ಕಾಗಿ ಹೆಚ್ಚು ತೂಕದ ಸರಕು-ಸಾಧನಗಳನ್ನ ಸಾಗಿಸುತ್ತೆ. ಗಡಿಯಲ್ಲಿನ ರಸ್ತೆ ಸೇರಿ ಅಭಿವೃದ್ಧಿ ಕಾಮಗಾರಿಗಳಿಗೆ ಹೆಲ್ಪಾಗುತ್ತೆ. ಉತ್ತರಭಾರತದಲ್ಲಿ ಸಾಕಷ್ಟು ರಸ್ತೆ ಕಾಮಗಾರಿ ವರ್ಷಗಳಿಂದ ನಡೆಯುತ್ತಿಲ್ಲ. ಚಿನೂಕ್‌ನಿಂದಾಗಿ ಆ ಎಲ್ಲವೂ ಕಾಮಗಾರಿ ಮುಗಿಯಲಿವೆ. ಪ್ರತಿಕೂಲ ಹವಾಮಾನದಲ್ಲೂ ಹಾರಾಟ ಜತೆಗೆ ರಾತ್ರಿ ವೇಳೆಯೂ ಕಾರ್ಯಾಚರಣೆ ಕೂಡ ಸಾಧ್ಯ. ಡಿಜಿಟಲ್ ಕಾಕ್‌ಪಿಟ್ ನಿಯಂತ್ರಣ ವ್ಯವಸ್ಥೆ ಅಳವಡಿಸಲಾಗಿದೆ.
2018ರ ಜುಲೈನಲ್ಲಿ ಮೊದಲ ಬಾರಿ ಹಾರಾಟ :
ಜುಲೈ 2018 ರಲ್ಲಿ CH-47F (I) Chinook ಕಾಪ್ಟರ್ ಮೊದಲ ಬಾರಿಗೆ ಭಾರತದಲ್ಲಿ ಹಾರಾಟ ನಡೆಸಿತ್ತು. ಗುಜರಾತ್‌ನ ಮಂದ್ರಾ ಬಂದರು ಮೂಲಕ ಫೆಬ್ರವರಿ 10ರಂದು ಮೊದಲ ಚಿನೂಕ್ ಕಾಪ್ಟರ್ ಬಂದಿತ್ತು. ವಿಯೆಟ್ನಾಂ, ಅಪ್ಘಾನಿಸ್ತಾನ ಮತ್ತು ಇರಾಕ್‌ನ ಯುದ್ಧಭೂಮಿಗಳಲ್ಲಿ ಹೆಚ್ಚು ಬಳಕೆಯಾಗಿವೆ. 1962ರಲ್ಲಿ ಚಿನೂಕ್ ಮೊದಲ ಹಾರಾಟ ನಡೆಸಿತ್ತು. ಈವರೆಗೂ ಸಾಕಷ್ಟು ಬಾರಿ ಅಪ್‌ಗ್ರೇಡಾಗಿದೆ. ವಿಶ್ವದ ಅತೀ ಭಾರ ಸಾಗಿಸುವ ಕಾಪ್ಟರ್ ಎಂಬ ಖ್ಯಾತಿ ಪಡೆದಿದೆ. ಅಮೆರಿಕದ ರೊಟೊರ್‌ಕ್ರಾಫ್ಟ್ ಕಂಪನಿ ಚಿನೂಕ್ ಕಾಪ್ಟರ್‌ಗಳನ್ನ ನಿರ್ಮಿಸಿದೆ. 22 ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್‌ಗಳು ಸೆಪ್ಟೆಂಬರ್ ವೇಳೆಗೆ ಪಠಾಣಕೋಟ್ ವಾಯುನೆಲೆಗೆ ಬಂದು ಸೇರಲಿವೆ.
ಚಿನೂಕ್ CH-47F (I) ಕಾಪ್ಟರ್ ವಿಶೇಷತೆಗಳು :
- ವಿಮಾನದ ಅತ್ಯಾಧುನಿಕ ಫ್ರೇಮ್ ಮರು ಡಿಸೈನ್
- ಅತ್ಯಂತ ಕಡಿಮೆ ನಿರ್ವಹಣಾ ವೆಚ್ಚ
- ಕಠಿಣ ಸ್ಥಿತಿಯಲ್ಲೂ ಹಾರಾಟ ನಿಯಂತ್ರಣ
- ಡಿಜಿಟಲ್ ಕಾಕ್‌ಪಿಟ್ ಮೂಲಕ ಪೈಲಟ್‌ಗೆ ಮಾಹಿತಿ
- ಪೈಲಟ್ ಶೀರ್ಘ ನಿರ್ಧಾರ, ನಿಖರ ನಿರ್ವಹಣೆ
- ಅಪ್ರತಿಮ ಕುಶಲತಂತ್ರವುಳ್ಳ ಭಾರ ಸಾಗಿಸುವ ಶಕ್ತಿ
- ಅವಶ್ಯಬಿದ್ರೇ ಕ್ಯಾಬಿನ್ ಪುನರ್ವಿನ್ಯಾಸವೂ ಸಾಧ್ಯ
- ಸೈನಿಕರು ಕೂರಲು ಆಸನ ವ್ಯವಸ್ಥೆಯುಂಟು
- ಯಾವುದೇ ರೀತಿ ಕಾರ್ಯಾಚರಣೆಗೂ ಒಗ್ಗುತ್ತೆ
- ಕಸಕಡ್ಡಿ, ಇಂಧನ ಪೂರೈಕೆಗೆ ಪೂರಕ
- ಅತೀ ಭಾರದ ಸರಕು ಸಾಗಣೆಗೆ 3 ಕೊಂಡಿಗಳು
- ವೇಗವಾಗಿ ಕೆಳಗೆ- ಮೇಲೇರಲು ಹಗ್ಗ
- ಮೆಷಿನ್ ಗನ್‌ಗಳು
- ಸೈನಿಕರು, ಸರಕು, ಜನರ ತೆರವುಗೊಳಿಸಲು
- ವಿಪತ್ತು ನಿರ್ವಹಣೆಗೆ ತಕ್ಷಣ ತಂಡ ರವಾನಿಸಲು
- ಆಹಾರ ಸಾಮಾಗ್ರಿಗಳ ಪೂರೈಸುತ್ತೆ
- ಕಾಳ್ಗಿಚ್ಚು, ಅಗ್ನಿ ಅವಘಡ ನಂದಿಸಲು ಸಾಧ್ಯ
- ಕೊಂಬಾಟ್ ಆಪರೇಷನ್‌ಗೆ ನೆರವಾಗುತ್ತೆ
- ಯಾವುದೇ ಕ್ಷಣದಲ್ಲೂ ಇದನ್ನ ಮೀರಿಸಲಸಾಧ್ಯ
- ಏರ್‌ಲಿಫ್ಟ್‌ಗಂತೂ ಶೇ.100 ಪವರ್‌ಫುಲ್
- ಯಾವಾಗಾದರೂ ಅವಲಂಬನೆ ಯೋಗ್ಯ
- ಈ ಸಾಮರ್ಥ್ಯಕ್ಕೆ ಹೋಲಿಕೆ ಮಾಡಲಾಗಲ್ಲ