ನವದೆಹಲಿ: ಏಕತೆಯಲ್ಲಿ ವೈವಿಧ್ಯತೆಯನ್ನು ಹುಡುಕುವ ಬದಲು, ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡುಕೊಂಡು ಭಾರತದ ಜನತೆ ಜಗತ್ತನ್ನು ಮುನ್ನಡೆಸುತ್ತ ಸಾಗಬೇಕೆಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದನೆ ಮಾಡಿದ್ದಾರೆ.
ಈಡಿ ಜಗತ್ತಿನಲ್ಲಿ ವೈವಿಧ್ಯತೆ ಇದೆ ಅದನ್ನು ನಾವು ಒಪ್ಪಿಕೊಂಡು ಗೌರವಿಸಬೇಕು. ವೈವಿಧ್ಯತೆಯು ಏಕತೆಯಿಂದ ಹೊರಬಂದಿದೆ ಎಂಬ ಜ್ಞಾನದಿಂದ ಬದುಕುವುದು ಈ ದೇಶದ ಸಂಸ್ಕೃತಿಯಾಗಿದೆ. ನಾವು ಏಕತೆಯಲ್ಲಿ ವೈವಿಧ್ಯತೆಯನ್ನು ಹುಡುಕುವವರಲ್ಲ. ಏಕತೆಯಲ್ಲಿ ವೈವಿಧ್ಯತೆ ಇದೆ ಎಂದು ನಂಬಿದವರು ಎಂದು ಭಾಗವತ್ ಹೇಳಿದ್ರು.
ದೆಹಲಿಯಲ್ಲಿ ನಡೆದ ವೈದ್ಯಕೀಯ ಡಯಾಲಿಸಿಸ್ ಕೇಂದ್ರದ ಉದ್ಘಾಟನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಜೊತೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಉಪಸ್ಥಿತರಿದ್ದರು. ಇತ್ತೀಚಿನ ದಿನಗಳಲ್ಲಿ ಜಾತಿ ಮತ್ತು ರಾಜಕೀಯ ನಿಷ್ಠೆ ನಾವು ಒಗ್ಗಟ್ಟಾಗಿದ್ದೇವಾ ಅಥವಾ ಬೇರ್ಪಟ್ಟಿದ್ದೀವಾ ಎಂಬುದನ್ನು ನಿರ್ಧರಿಸುತ್ತದೆ. ಇದು ಒಳ್ಳೆಯ ಬೆಳವಣಿಗೆಯಲ್ಲ, ಇದರಿಂದ ಜಗತ್ತು ಹೊರಬರಬೇಕಾಗಿದೆ ಎಂದರು.
ಆರ್‌ಎಸ್‌ಎಸ್ ಕಾರ್ಯಕರ್ತರು ಯಾವಾಗಲೂ ಸಮಾಜದ ಕಲ್ಯಾಣಕ್ಕಾಗಿ ಮತ್ತು ಅಗತ್ಯವಿರುವವರಿಗೆ ನಿಸ್ವಾರ್ಥವಾಗಿ ಕೆಲಸ ಮಾಡುವಲ್ಲಿ ನಿರತರಾಗಿದ್ದಾರೆ ಎಂದು ಭಾಗವತ್ ಹೇಳಿದರು.